ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರಕರ್ತರ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ

ಪ್ರಜಾಪ್ರಭುತ್ವದ ನಾಲ್ಕನೇ ಅಂಗ ರಕ್ಷಣೆಗೆ ಆಗ್ರಹಿಸಿ ಮುಖ್ಯಮಂತ್ರಿ, ರಾಜ್ಯಪಾಲರಿಗೆ ಮನವಿ
Last Updated 12 ಜುಲೈ 2017, 6:10 IST
ಅಕ್ಷರ ಗಾತ್ರ

ಬೈಲಹೊಂಗಲ: ಪಟ್ಟಣದಲ್ಲಿ ತಾಲ್ಲೂಕು ಕಾರ್ಯನಿರತ ಪತ್ರಕರ್ತ ಸಂಘ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಖಾನಾಪುರ ಪತ್ರಕರ್ತ ಪ್ರಸನ್ನ ಕುಲಕರ್ಣಿ ಅವರ ಮೇಲೆ ನಂದಗಡ ಪಿಎಸ್ಐ ನಡೆ ಸಿದ ಹಲ್ಲೆ ಖಂಡಿಸಿ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗೆ ಮಂಗಳವಾರ ಮನವಿ ಅರ್ಪಿಸಿದರು.

ರಾಯಣ್ಣ ವೃತ್ತದಿಂದ ಉಪವಿಭಾಗಾ ಧಿಕಾರಿಗಳ ಕಚೇರಿಗೆ ತೆರಳಿದ ಪ್ರತಿಭಟ ನಾಕಾರರು ಪದೇ, ಪದೇ ಪತ್ರಕರ್ತರ ಮೇಲೆ ಆಗುತ್ತಿರುವ ಹಲ್ಲೆ ತಕ್ಷಣವೇ ನಿಲ್ಲ ಬೇಕು. ಕರ್ತವ್ಯಕ್ಕೆ ಅಡ್ಡಿ ಪಡಿಸುವವರು ಯಾರೇ ಆಗಿರಲಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಕೊಳ್ಳಬೇಕು ಎಂದು ಒತ್ತಾಯಿಸಿದರು.

ಪತ್ರಕರ್ತ ಉದಯ ಕೋಳೆಕರ ಮಾತನಾಡಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ಮರಣೋತ್ಸವ ಸಮಿತಿ ಉಪಾಧ್ಯಕ್ಷ ಸೋಮನಾಥ ಸೊಪ್ಪಿಮಠ ಮಾತನಾಡಿದರು. ಅಖಂಡ ಕರ್ನಾಟಕ ರೈತ ಸಂಘದ ಮುಖಂಡ ಶ್ರೀಕಾಂತ ಶಿರ ಹಟ್ಟಿ ಮಾತನಾಡಿದರು.

ಪತ್ರಕರ್ತರಾದ ಕುಮಾರ ರೇಶ್ಮಿ, ಸಿ.ವೈ.ಮೆಣಸಿನಕಾಯಿ, ಮಹಾಂತೇಶ ರೇಶ್ಮಿ, ರವಿಕಿರಣ ಯಾತಗೇರಿ, ಶಿವು ಮೇಟ್ಯಾಲ, ರವಿ ಹುಲಕುಂದ, ಯೂನಸ್ ಬಡೇಘರ, ಚಿದಾನಂದ ಪೂಜೇರಿ, ರೈತ ಮುಖಂಡ ರಾಚಪ್ಪ ಬಳಿಗಾರ, ರಮೇಶ ಯಲ್ಲಪ್ಪಗೌಡರ, ಮಹೇಶ ಕಾದರವಳ್ಳಿ, ಬಸವರಾಜ ಬೋಳಗೌಡರ, ಸಿದ್ದಪ್ಪ ಪಿರಗೋಜಿ, ಮಹಾಂತೇಶ ಕೋಟೂರ, ಶಿವಪುತ್ರಪ್ಪ ಮಿಸಿಗೇರಿ, ಎನ್.ಪಿ.ಫಕ್ಕೀರನವರ ಇದ್ದರು. ಉಪವಿಭಾಗಾಧಿಕಾರಿಗಳ ಕಚೇರಿ ಶಿರಸ್ತೇದಾರ ಆರ್.ಎಸ್.ಗೌಡರ ಮನವಿ ಸ್ವೀಕರಿಸಿದರು.

ಎ.ಸಿ.ಗೆ ಮನವಿ
ರಾಮದುರ್ಗ:
ಖಾನಾಪುರ ತಾಲ್ಲೂಕಿನ ಪತ್ರಕರ್ತ ಪ್ರಸನ್ನ ಕುಲಕರ್ಣಿ ಮೇಲೆ ನಂದಗಡ ಪಿ.ಎಸ್.ಐ. ಯು.ಎಸ್. ಆವಟೆ ನಡೆಸಿರುವ ಹಲ್ಲೆ ಖಂಡಿಸಿ ತಾಲ್ಲೂಕಿನ ಪತ್ರಕರ್ತರು ಮಂಗಳವಾರ ಮಿನಿ ವಿಧಾನಸೌಧಕ್ಕೆ ತೆರಳಿ ಬೈಲಹೊಂಗಲ ಉಪವಿಭಾಗಾಧಿಕಾರಿ ವಿಜಯಕುಮಾರ ಹೊನಕೇರಿ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಪ್ರಜಾಪ್ರಭುತ್ವದ ನಾಲ್ಕನೇ ಅಂಗ ವಾಗಿರುವ ಪತ್ರಿಕಾರಂಗದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು  ಹತ್ತಿಕ್ಕಿದ್ದಲ್ಲದೆ, ಹಲ್ಲೆ ನಡೆಸಿ ಪೊಲೀಸ್‌ ಠಾಣೆ ತನಕ ಎಳೆ ದೊಯ್ದಿರುವುದನ್ನು ಅವರು ತೀವ್ರವಾಗಿ ಖಂಡಿಸಿದರು.

ಸಾರ್ವಜನಿಕ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವ ಪತ್ರಕರ್ತರ ಮೇಲೆಯೇ ಈ ರೀತಿ ಹಲ್ಲೆಗಳಾದರೆ ಸಾರ್ವಜನಿಕರ ಪಾಡೇನು ಎಂಬುವುದನ್ನು ಪೊಲೀಸ್‌ ಹಿರಿಯ ಅಧಿಕಾರಿಗಳು ಚಿಂತಿಸಬೇಕಿದೆ. ಇಂತಹ ಘಟನೆ ಮರುಕಳಿಸದರೆ ರಾಜ್ಯದಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರೆಸ್ ಕ್ಲಬ್ ಕಾರ್ಯದರ್ಶಿ ಮಲ್ಲಿಕಾರ್ಜುನರಡ್ಡಿ ಗೊಂದಿ, ಸದಸ್ಯ ಮಲ್ಲಿಕಾ ರ್ಜುನ ಧೂಪದ, ಸೋಮಶೇಖರ ಸೊಗ ಲದ ಮಾತನಾಡಿದರು. ಬೈಲಹೊಂಗಲ ಉಪವಿಭಾಗಾಧಿ ಕಾರಿ ವಿಜಯಕುಮಾರ ಹೊನಕೇರಿ, ತಹಶೀಲ್ದಾರ್‌ ರಾಮಚಂದ್ರ ಕಟ್ಟಿ, ವಿಜಯಕುಮಾರ ಕಡಕೋಳ ಅವರಿಗೆ ಮನವಿ ಸಲ್ಲಿಸಿದರು.

ಪತ್ರಕರ್ತರಾದ ವೈ.ಎಚ್.ಮುನ ವಳ್ಳಿ, ಸುಭಾಷ್ ಘೋಡಕೆ, ಚನ್ನಪ್ಪ ಮಾದರ, ವಿಜಯ ನಾಯಕ, ಈರನ ಗೌಡ ಪಾಟೀಲ, ಗೌಡಪ್ಪಗೌಡ ಪಾಟೀಲ, ಎಸ್.ಕೆ.ಪಟ್ಟಣ, ಈರಣ್ಣ ಬುಡ್ಡಾಗೋಳ, ರವಿ ಸದಾಶಿವನವರ, ರಮೇಶ ರಾಯ ಭಾಗ, ಲಕ್ಷ್ಮಣ ರಾಯಭಾಗ, ಡಿ.ಎಫ್. ಹಾಜಿ, ಪ್ರಕಾಶ ಅಸೂಂಡಿ, ಬಿ.ಡಿ. ಹುದ್ದಾರ, ಮುತ್ತು ಕಮ್ಮಾರ, ಗೋಪಾಲ ಮಾದರ, ಗೌಡಪ್ಪಗೌಡ ಪಾಟೀಲ, ಗಂಗಾಧರ ಪೂಜಾರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT