ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕುಟುಂಬಕ್ಕೆ ಒಂದೇ ಮಗು ಇರಲಿ’

Last Updated 12 ಜುಲೈ 2017, 10:11 IST
ಅಕ್ಷರ ಗಾತ್ರ

ರಾಮನಗರ: ‘ಸಧೃಢ ಸಮಾಜ ನಿರ್ಮಾ ಣಕ್ಕೆ ಉತ್ತಮ ಕುಟುಂಬ ವ್ಯವಸ್ಥೆ  ಅವಶ್ಯ ಇದೆ. ಕುಟುಂಬದಲ್ಲಿ ಹೆಚ್ಚು ಮಕ್ಕಳಿದ್ದಲ್ಲಿ ಆರೋಗ್ಯ, ಶೈಕ್ಷಣಿಕ ಸೇರಿದಂತೆ ಮೂಲಸೌಕರ್ಯದ ಸಮಸ್ಯೆಗಳು ಹೆಚ್ಚಾಗಲಿವೆ’ ಎಂದು ಜಿಲ್ಲಾಧಿಕಾರಿ ಡಾ.ಬಿ.ಆರ್‌. ಮಮತಾ ಹೇಳಿದರು.

ನಗರದ ಅರ್ಕಾವತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕಾರ್ಯ ಕ್ರಮ ನಡೆಯಿತು.

‘ಮಕ್ಕಳು ಹೆಚ್ಚಿದ್ದರೆ ಅವರ ಸರಿಯಾದ ಪಾಲನೆ, ಪೋಷಣೆ ಸಾಧ್ಯವಾಗದೇ ಅನಕ್ಷರತೆ, ಅಸುರಕ್ಷತೆ ಕಾಡುತ್ತದೆ. ಇಂತಹ ಮಕ್ಕಳು ಅನೈತಿಕ ದಾರಿಯಲ್ಲಿ ನಡೆದು ಸಮಾಜಕ್ಕೆ ಕಂಟಕ ಪ್ರಾಯವಾಗುವ ಸಂಭವವೂ ಇರುತ್ತದೆ. ಇವೆಲ್ಲದಕ್ಕೂ ಕುಟುಂಬದಲ್ಲಿನ ಜನ ಸಂಖ್ಯೆ ನಿಯಂತ್ರಣವೇ ಪರಿಹಾರವಾಗಿದೆ’ ಎಂದು ಅವರು ತಿಳಿಸಿದರು.

‘ಸಮಾಜವನ್ನು ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಬಲಿಷ್ಠವಾಗಿಸಲು ಕುಟುಂಬಕ್ಕೆ ಗಂಡಾಗಲಿ ಹೆಣ್ಣಾಗಲಿ ಒಂದೇ ಮಗು ಸಾಕು. ಆಶಾ ಕಾರ್ಯಕರ್ತೆಯರು, ಮಹಿಳಾ ಸಂಘಟನೆಗಳು ಪ್ರತಿ ಗ್ರಾಮಗಳಿಗೆ ತೆರಳಿ ಜನರಲ್ಲಿ ಜನಸಂಖ್ಯಾ ನಿಯಂತ್ರಣದ ಕುರಿತು ಅರಿವು ಮೂಡಿಸಬೇಕು’ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷ ಪಿ. ರವಿಕುಮಾರ್ ಮಾತನಾಡಿ ‘ಇತರ ಎಲ್ಲಾ ವಿಷಯ ಗಳಲ್ಲೂ ನಾಗರಿಕರಾಗಿರುವ ನಾವು ಕೌಟುಂಬಿಕ ವಿಷಯಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡಿಲ್ಲ. ಕಂದಾ ಚಾರ, ಅನಾಚಾರ, ಮೂಢನಂಬಿಕೆ, ಹಿರಿಯರ ಒತ್ತಡದಿಂದ ಅವಿದ್ಯಾವಂತರ ಜತೆಗೆ ವಿದ್ಯಾವಂತರು ಕೂಡ ಒಂದಾದರೂ ಗಂಡು ಮಗುವಾಗಲಿ ಎಂಬ ಮನೋಭಾವ ಬೆಳೆಸಿಕೊಂಡಿರುವುದು ಸರಿಯಲ್ಲ’ ಎಂದರು.

‘ಜನಸಂಖ್ಯೆ ನಿಯಂತ್ರಿಸುವುದೇ ಈಗ ಮುಖ್ಯವಾಗಿದೆ. ಕುಟುಂಬಗಳಲ್ಲೂ ಒಂದು ಅಥವಾ ಎರಡು ಮಕ್ಕಳು ಸಾಕೆಂಬ ಪ್ರಜ್ಞೆ ಮೂಡಬೇಕಾಗಿದೆ. ಹೆಚ್ಚುತ್ತಿರುವ ಜನಸಂಖ್ಯೆ ಅಭಿವೃದ್ಧಿಗೆ ಮಾರಕವಾಗಲಿದೆ’ಎಂದು ತಿಳಿಸಿದರು.

ಜಾಥಾ: ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ಅರಿವು ಮೂಡಿಸುವ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು. ಆರೋಗ್ಯ ಇಲಾಖೆ ಬಿ.ವಿನಯ್‌ ಕುಮಾರ್ ಜಾಗೃತಿ ಗೀತೆ
ಹಾಡಿದರು.ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಪ್ರಸನ್ನಕುಮಾರ್, ಡಾ.ಪದ್ಮಾವತಿ, ಡಾ.ರಾಜು, ಡಾ. ಜಿಲನ್, ಡಾ.ಅರುಣ್‌ ಇತರರು ಇದ್ದರು.

ಶುಶ್ರೂಷಕಿ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಆರ್.ಎನ್ ಲಕ್ಷ್ಮೀಪತಿ ಸ್ವಾಗತಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೆ.ವಿ. ಶಿವ ರಾಜು ನಿರೂಪಿಸಿದರು. ಕೃಷ್ಣೇಗೌಡ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT