ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಮಾನತೆ ಸಾರಿದ ವಚನಗಳು’

ಬಸವ ಧರ್ಮ ಪೀಠದ ವತಿಯಿಂದ ಡಾ. ವೀರೇಂದ್ರ ಹೆಗ್ಗಡೆಯವರಿಗೆ ಸೇವಾ ರತ್ನ ಪ್ರಶಸ್ತಿ ಪ್ರದಾನ
Last Updated 13 ಜುಲೈ 2017, 11:36 IST
ಅಕ್ಷರ ಗಾತ್ರ

ಕೂಡಲಸಂಗಮ: ‘ಸಮಾಜದಲ್ಲಿರುವ ಅಸಮಾನತೆ ಮತ್ತು ಬೇಧಬಾವ ಹೋಗ ಲಾಡಿಸಲು ಬಸವಣ್ಣನ ವಚನಗಳಲ್ಲಿ ಪರಿಹಾರ ಇದೆ. ಇಂದಿನ ಯುವ ಜನಾಂಗ ಅಂತಹ ವಚನಗಳ ಅಧ್ಯ ಯನದಲ್ಲಿ ತೊಡಗಬೇಕು’ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಕಿವಿ ಮಾತು ಹೇಳಿದರು.

ಕೂಡಲ ಸಂಗಮದ ಬಸವ ಧರ್ಮ ಪೀಠದ ‘ಸೇವಾ ರತ್ನ ಪ್ರಶಸ್ತಿ’ ಸ್ವೀಕರಿಸಿ, ಇಲ್ಲಿನ ಬಸವ ಭಾರತಿ ಶಾಲಾ ಕಾಲೇಜು ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ‘ದೇಶದಲ್ಲಿ ನೆಲೆಸಿರುವ ಸಮಾನತೆ ಏಸು ಕ್ರಿಸ್ತ, ಮಹಮದ ಪೈಗಂಬರ್, ಬುದ್ಧ, ಮಹಾವೀರ ಹಾಗೂ ಬಸವಣ್ಣ ನವರ ಹೋರಾಟದ ಫಲವಾಗಿದೆ’ ಎಂದರು.

‘ರಾಜ್ಯದಲ್ಲಿ ಮೂರು ವರ್ಷದಿಂದ ಬರಗಾಲ ಆವರಿಸಿದೆ. ಸಂಕಷ್ಟದಲ್ಲಿರುವ ರೈತರಿಗೆ ನಮ್ಮ ಗ್ರಾಮೀಣಾಭಿವೃದ್ದಿ ಸಂಸ್ಥೆಯಿಂದ ಸ್ವಾಲಂಬಿಯಾಗಿ ಬದು ಕುವ ಕುರಿತು ತರಬೇತಿ ನೀಡಲಾಗುತ್ತಿದೆ. ಅಲ್ಲದೆ ರಾಜ್ಯದ 126 ಕೆರೆಗಳ ಹೂಳು ತೆಗೆದು ಅಭಿವೃದ್ಧಿಪಡಿಸುವ  ಕಾರ್ಯ ನಡೆಯುತ್ತಿದೆ’ ಎಂದು ತಿಳಿಸಿದರು.

ಬಸವ ಧರ್ಮ ಪೀಠದ ಮಾತೆ ಮಹಾದೇವಿ ಮಾತನಾಡಿ, ‘ವೀರಶೈವ ಮಹಾಸಭೆಯವರು ಸಮಾಜದ ಹಿತಕ್ಕಾಗಿ ಹೋರಾಟ ಮಾಡಬೇಕು, ವೀರಶೈವ ಪದವನ್ನು ಬಿಟ್ಟು ಲಿಂಗಾಯತ ಎಂದು ಮಾತ್ರ ಬಳಸಬೇಕು.

ವೀರಶೈವ ಮಹಾಸಭಾದ ಹೆಸರು ಲಿಂಗಾಯತ ಮಹಾಸಭಾ ಎಂದು ಬದಲಾಗಬೇಕು. ಇಲ್ಲದಿದ್ದರೆ, ಲಿಂಗಾಯತರು ತಕ್ಕ ಪಾಠ ಕಲಿಸುತ್ತಾರೆ’ ಎಂದು ಎಚ್ಚರಿಕೆ ನೀಡಿದ ಅವರು, ‘ಲಿಂಗಾಯತ ಸಮನ್ವಯ ಸಮಿತಿಯಿಂದ ಜುಲೈ 19ರಂದು ಬೀದರ್‌ನಲ್ಲಿ ಲಿಂಗಾಯತ ಸಮಾವೇಶ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ, ‘ಬಸವಣ್ಣನವರ ತತ್ವಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾರಲು, ದೆಹಲಿಯಲ್ಲಿರುವ ಅಕ್ಷರಧಾಮ ಮಾದರಿಯಲ್ಲಿ ₹139 ಕೋಟಿ ವೆಚ್ಚದಲ್ಲಿ ಕೂಡಲಸಂಗಮವನ್ನು ಅಭಿವೃದ್ಧಿ ಪಡಿಸುವ ಯೋಜನೆ ಹಮ್ಮಿಕೊಳ್ಳ ಲಾಗಿದೆ’ ಎಂದರು.

ಬಸವ ಧರ್ಮ ಪೀಠದ ಮಹಾ ದೇಶ್ವರ ಸ್ವಾಮೀಜಿ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಜಿಲ್ಲಾ ಪಂಚಾಯಿತಿ ಸದಸ್ಯ ವಿರೇಶ ಉಂಡೋಡಿ, ಹುನಗುಂದ ಗೌರಿಶಂಕರ ಬ್ಯಾಂಕಿನ ಅಧ್ಯಕ್ಷ ಗಂಗಾಧರ ದೊಡ ಮನಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವರಾಜ ಗೌಡರ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಎಸ್.ಅಂಗಡಿ, ಮೈಸೂರಿನ ಮಧುಸೂಧನ, ಪಶು ಸಂಗೋಪನಾ ಇಲಾಖೆಯ ಜಂಟಿ ನಿರ್ದೇಶಕ  ಸಾಯಿಕುಮಾರ ಹಿಳ್ಳಿ, ನ್ಯಾಯವಾದಿ ಜಿ.ಎಸ್.ನರೇಗಲ್ಲ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಟದ ಅಧ್ಯಕ್ಷ ಅಮರಯ್ಯ ಕೊಟೂರ,ರಾಷ್ಟ್ರೀಯ ಬಸವ ದಳದ ರಾಜ್ಯಾಧ್ಯೆಕ್ಷ ಬಸವರಾಜ ಕೊಂಡಗುಳಿ, ಧನರಾಜ ಜೀರಗಿ, ಕೆ.ವೀರೇಶ, ಚಂದ್ರಮೌಳಿ ಇದ್ದರು.
ಬಸವ ಧ್ವಜಾರೋಹಣವನ್ನು ಬಿಜೆಪಿ ಮುಖಂಡ ಶಿವಕುಮಾರ ಹೊಸಗೌಡರ ಮಾಡಿದರು.

ಸಂಗಮೇಶ ಎಮ್ಮಿ ಸ್ವಾಗತಿಸಿದರು. ಮಹಾಂತೇಶ ಕುರಿ ವಂದಿಸಿದರು. ಚಂದ್ರಮ್ಮ ಸದಾನಂದಸ್ವಾಮೀಜಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT