ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ಯೋಜನೆ ಜನರಿಗೆ ತಲುಪಿಸಿ

Last Updated 14 ಜುಲೈ 2017, 5:30 IST
ಅಕ್ಷರ ಗಾತ್ರ

ಕಾರ್ಕಳ: ಸರ್ಕಾರದ ಯೋಜನೆಗಳನ್ನು ಸ್ಥಳದಲ್ಲಿ ಆಲಿಸಿ, ಪರಿಹರಿಸುವ ಉದ್ದೇಶದಿಂದ ಆರಂಭಿಸಲಾದ ಜನಸ್ಪಂದನ ಕಾರ್ಯಕ್ರಮ ಜನರ ಭಾಗವಹಿಸುವಿಕೆ ಯಿಂದ ಯಶಸ್ವಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದರು.

ನಗರದ ಮಂಜುನಾಥ ಪೈ ಸಾಂಸ್ಕೃತಿಕ ಸಭಾ ಭವನದಲ್ಲಿ ಗುರುವಾರ ಆಯೋಜಿಸಿದ ಹೋಬಳಿ ಮಟ್ಟದ ಜನಸ್ಪಂದನ ಸಭೆಯಲ್ಲಿ ಮಾತನಾಡಿ, ‘ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಜತೆ ಫಲಾನುಭವಿಗಳಿಗೆ ಸ್ಥಳದಲ್ಲೇ ಸವಲತ ನೀಡಲಾಗುತ್ತಿದೆ. ಕಾರ್ಕಳದ ಅಭಿವೃದ್ಧಿಗೆ ಸರ್ಕಾರ ಹೆಚ್ಚಿನ ಒತ್ತು ನೀಡಿದೆ.

ತಾಲೂಕಿನ ಶೇ 90ರಷ್ಟು ಜನರು ಸರ್ಕಾರದ ನೆರವು ಪಡೆದವ ರಾಗಿದ್ದಾರೆ.  ನಾಲ್ಕು ವರ್ಷದ ಅವಧಿ ಯಲ್ಲಿ 29,361 ಬಿಪಿಎಲ್ ಕಾರ್ಡ್, 4217 ಅಂತ್ಯೋದಯ ಕಾರ್ಡ್‌ಗಳನ್ನು ವಿತರಿಸಲಾಗಿದ್ದು, 94ಸಿ ಮತ್ತು 94 ಸಿಸಿಯಡಿ ಅರ್ಹ ಫಲಾನುಭವಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆರ್‌ಟಿ ಸಿ ವಿತರಣೆ ನಡೆದಿದೆ. ಅಕ್ರಮ ಸಕ್ರಮ ಬೈಠಕ್‌ಗಳಿಂದ ಮನೆಯ ಒಡೆತನ ಬಡವರಿಗೆ ಲಭಿಸಿದೆ ಎಂದರು.

ಕೊರಗ ಸಮುದಾಯದವರಿಗೆ ಹೋಬಳಿ ವ್ಯಾಪ್ತಿಯಲ್ಲಿ 11ಕುಟುಂಬ ಗಳಿಗೆ ಹಾಗೂ ಪುರಸಭಾ ವ್ಯಾಪ್ತಿಯಲ್ಲಿ 35ಕುಟುಂಬ ದವರಿಗೆ ಹಕ್ಕುಪತ್ರ ನೀಡಲಾಗಿದೆ. ಒಟ್ಟು 242 ಹಕ್ಕುಪತ್ರ ವಿತರಣೆ ನೀಡಲಾಗಿದೆ. ಕಾರ್ಕಳ ಪ್ರದೇಶ ವ್ಯಾಪ್ತಿಯ ಡೀಮ್ಡ್ ಫಾರೆಸ್ಟ್ ಸಮಸ್ಯೆ ಪರಿಹಾರಕ್ಕೂ ಪ್ರಕ್ರಿಯೆಗಳು ನಡೆಯು ತ್ತಿದ್ದು ಹಂತ ಹಂತವಾಗಿ ಜನರ ಸಮಸ್ಯೆ ಪರಿಹಾರಕ್ಕೆ ಆದ್ಯತೆ ನೀಡಲಾಗಿದೆ. ಅನ್ನಭಾಗ್ಯದಂತಹ ಯೋಜನೆ ಬಡವರ ಹೊಟ್ಟೆ ತುಂಬಿಸಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ವಿ.ಸುನೀಲ್ ಕುಮಾರ್ ಮಾತನಾಡಿ, ‘ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿ ಹಾರ ನೀಡುವ ಜನಸ್ಪಂದನ ಕಾರ್ಯಕ್ರಮ ಜನೋಪಕಾರಿಯಾಗಿದ್ದು ತಾಲ್ಲೂ ಕಿನ ಎಲ್ಲ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಕ್ರಮ-ಸಕ್ರಮ ಬೈಠಕ್ ನಡೆಸಿ ಸು. 8ಸಾವಿರ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ.  ಸರ್ಕಾರದ ಅನುದಾನ ಸದ್ಬಳಕೆಯಾಗಿದೆ ಎಂದರು.

ಸಾಂಕೇತಿಕವಾಗಿ 10 ಮಕ್ಕಳಿಗೆ ಸಮವಸ್ತ್ರ ವಿತರಣೆ, ಆರೋಗ್ಯ ಇಲಾಖೆಯಿಂದ ಮಡಿಲು ಕಿಟ್, ಕೃಷಿ ಇಲಾಖೆಯಿಂದ ಕೃಷಿ ಯಂತ್ರೋಪಕರಣ, ತೋಟಗಾರಿಕಾ ಇಲಾಖೆಯಿಂದ ಸಸಿ , ಪಿಂಚಣಿ ಯೋಜನೆಯಡಿ ಹಲವರಿಗೆ ಸವಲತ್ತು ವಿತರಿಸಲಾಯಿತು.

ಸ್ಥಳದಲ್ಲಿ ಸಲ್ಲಿಸಲಾದ ಒಟ್ಟು 18 ಅಹವಾಲುಗಳಲ್ಲಿ ಮೆಸ್ಕಾಂ ಮತ್ತು ಪುರಸಭೆ ವಿರುದ್ಧ, ಸರ್ಕಾರಿ ಆಸ್ಪತ್ರೆ  ಸೋರುವ ಕುರಿತು ನಾಗರಿಕರಿಂದ ದೂರುಗಳಿದ್ದವು. ಮೆಸ್ಕಾಂ ಬೆಳ್ಮಣ್ ವಿಭಾಗದ ಸಮಸ್ಯೆಯನ್ನು ಒಂದು ವಾರ ದೊಳಗೆ ಪರಿಹರಿಸಿ ವರದಿ ನೀಡುವಂತೆ ಸಚಿವರು ಅಧಿಕಾರಿಗೆ ಸೂಚಿಸಿದರು.  

ಅಂಬೇಡ್ಕರ್ ಭವನ ನಿರ್ಮಾಣ, ಮರಾಠಿ ಸಮುದಾಯ ಕ್ಕೊಂದು ಭವನ, ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಡತ ವಿಳಂಬ ದೂರುಗಳನ್ನು ಪರಿಹರಿಸಲು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್,  ಉಪ ವಿಭಾಗಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷ ಉದಯ ಕೋಟ್ಯಾನ್, ತಾಲೂಕು ಪಂಚಾಯಿಇತ ಅಧ್ಯಕ್ಷ ಮಾಲಿನಿ ಶೆಟ್ಟಿ, ಪುರಸಭೆ ಅಧ್ಯಕ್ಷ ಅನಿತಾ, ಉಪಾಧ್ಯಕ್ಷ ಗಿರಿಧರ್ ನಾಯಕ್, ಜಿಪಂ ಸದಸ್ಯ ರೇಷ್ಮಾ ಉದಯ್ ಶೆಟ್ಟಿ ಉಪಸ್ಥಿತರಿದ್ದರು. ತಹಶೀಲ್ದಾರ್ ಟಿ.ಗುರು ಪ್ರಸಾದ್ ಸ್ವಾಗತಿಸಿದರು, ಇಒ ಕೇಶವ ಶೆಟ್ಟಿಗಾರ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT