ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೇಶದ ಸ್ವಾವಲಂಬನೆಗೆ ಶ್ರಮಿಸಿದ ಬಿಜೆಪಿ’

Last Updated 14 ಜುಲೈ 2017, 9:31 IST
ಅಕ್ಷರ ಗಾತ್ರ

ಸಿಂದಗಿ: ನಗರದ ಒಂದನೇ ವಾರ್ಡ್ ಹಾಗೂ ಮೂರನೇ ವಾರ್ಡ್ ನಲ್ಲಿ ಬಿಜೆಪಿ ಘಟಕ ಪಂ.ದೀನ್ ದಯಾಳ ಉಪಾ ಧ್ಯಾಯ ಜನ್ಮ ಶತಾಬ್ದಿ ನಿಮಿತ್ತ ಬಿಜೆಪಿ ಮಹಾ ಸಂಪರ್ಕ ಅಭಿಯಾನ ನಡೆಯಿತು. ವಿಸ್ತಾರಕರಾಗಿದ್ದ ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷ ಬಸವರಾಜ ಕುರುವಿನಶೆಟ್ಟಿ, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಮೂರು ವರ್ಷದ ಕಾಲಾವಧಿಯಲ್ಲಿ ಮಾಡಿರುವ ಜನಪರ ಕಾರ್ಯಗಳನ್ನು ಜನರ ಮನಕ್ಕೆ ತಲುಪಿಸುವ ಕಾರ್ಯವನ್ನು ಕಾರ್ಯ ಕರ್ತರು ಮಾಡಬೇಕಿದೆ ಎಂದರು.

ಪುರಸಭೆ ಸದಸ್ಯ ಚಂದ್ರಶೇಖರ ಅಮಲಿಹಾಳ, ಬಿಜೆಪಿ ಮಂಡಲ ಅಧ್ಯಕ್ಷ ಸಿದ್ದು ಬುಳ್ಳಾ, ಶಿವಾನಂದ ರೋಡಗಿ, ಸಂದೀಪ ಚೌರ, ಡಾ.ಎಂ.ಎಂ.ಪಡಶೆಟ್ಟಿ ಇದ್ದರು.
ಗೋಲಗೇರಿಯಲ್ಲಿ ಅಭಿಯಾನ: ಗೋಲಗೇರಿ ಗ್ರಾಮದ ಗೊಲ್ಲಾಳೇಶ್ವರ ಪಿಯು ಕಾಲೇಜಿನಲ್ಲಿ ಹಮ್ಮಿಕೊಂಡ ಬಿಜೆಪಿ ಮಹಾ ಸಂಪರ್ಕ ಅಭಿಯಾನ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಸಂತೋಷ ಪಾಟೀಲ ಡಂಬಳ, ಸಿದ್ದು ಬುಳ್ಳಾ ಮಾತನಾಡಿದರು.

ಗೌಡಣ್ಣ ಆಲಮೇಲ, ಮಹಾದೇವ ರಾಠೋಡ, ಮಹೇಶ ಹುರಕಡ್ಲಿ, ಮಹಾಂತೇಶ ಸಾತಿಹಾಳ, ಬಸವರಾಜ ಮಾರಲಬಾವಿ, ಸೈಫನ್‌ ಕೋರವಾರ, ಪ್ರಕಾಶ ಗಣಪೋರ, ಮೈಬೂಬ ನಾಗಾವಿ, ಸುಭಾಷ್ ಪಾಟೀಲ, ಗಂಟೆಪ್ಪ ನಾಯ್ಕೋಡಿ, ತಿಪ್ಪಣ್ಣ ಚವ್ಹಾಣ, ಅಮೋಗಿ ನಾಯ್ಕೋಡಿ, ಭೂತಾಳಿ ನಾಯ್ಕೋಡಿ, ಪ್ರಭಯ್ಯ ಹಿರೇಮಠ ಪಾಲ್ಗೊಂಡಿದ್ದರು.

‘ಪ್ರಧಾನಿ ಜನರಪರ ಆಡಳಿತ’
ದೇವರಹಿಪ್ಪರಗಿ: ಉತ್ತಮ ಆಡಳಿತದ ಮೂಲಕ ಇಡೀ ಜಗತ್ತಿನಾದ್ಯಾಂತ ಮನೆ ಮಾತಾದ ಮೋದಿಯವರ ಸಾಧನೆ ಕುರಿತು ಜನಸಾಮಾನ್ಯರಿಗೆ ವಿವರಿಸಿ ಪಕ್ಷದ ಬಲವರ್ಧನೆಗೆ ಶ್ರಮಿಸಬೇಕಾಗಿದೆ ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಬಸವರಾಜ ಬೈಚಬಾಳ ಹೇಳಿದರು.

ಬುಧವಾರ ಸಮೀಪದ ಹರನಾಳ ಗ್ರಾಮದಲ್ಲಿ ನಡೆದ ದೀನದಯಾಳ ಉಪಾಧ್ಯಾಯ ಅವರ ಜನ್ಮಶತಾಬ್ದಿ ವರ್ಷದ ವಿಸ್ತಾರಕರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಇಡೀ ಜಗತ್ತೀನಲ್ಲಿಯೇ ಬಿಜೆಪಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. 

ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆ ಹಾಗೂ ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಆಡಳಿತದಲ್ಲಿನ ಜನಪರ ಕಲ್ಯಾಣ ಕಾರ್ಯಕ್ರಮಗಳನ್ನು ತಿಳಿಸುವುದರ ಜೊತೆ ಈಗಿನ ರಾಜ್ಯ ಸರ್ಕಾರದ  ವೈಫಲ್ಯ ಬಿಂಬಿಸಿ ಪ್ರಚುರಪಡಿಸಬೇಕು ಎಂದರು.

ಜಿಲ್ಲಾ ಯುವ ಮುಖಂಡ ರಮೇಶ ಮಸಬಿನಾಳ ಮಾತನಾಡಿದರು. ಬಿಜೆಪಿ ಮಂಡಲ ಯುವ ಮೋರ್ಚಾ ಕಾರ್ಯದರ್ಶಿ ರಾಜು ಮೆಟಗಾರ, ವಿನೋದಗೌಡ ಪಾಟೀಲ, ಮಹಾಂತೇಶ ವಂದಾಲ,  ಶಂಕರಗೌಡ ಕೋಟಿಖಾನಿ, ಶಿವು ಅತನೂರ, ರಮೇಶ ಮಾಳನೂರ, ರಾಜು ಸಾರವಾಡ, ಭುಮರೆಡ್ಡಿ ಶಿಂಗ ನಳ್ಳಿ, ಅರವಿಂದ ಬಿರಾದಾರ, ರವಿ ಬಿರಾ ದಾರ, ಶರಣಯ್ಯ, ಈರಣ್ಣ ಮಂಟ್ಲಾ ಕುಂಟಿ, ವಿಜು ನಾಗರಾಳ ಇದ್ದರು.

‘ದೇಶಕ್ಕೆ ಬಿಜೆಪಿ ಅಭಿವೃದ್ಧಿಯ ಕೊಡುಗೆ’
ದೇವರಹಿಪ್ಪರಗಿ: ಪಕ್ಷದ ಹುಟ್ಟು, ಬೆಳ ವಣಿಗೆಯಲ್ಲಿ ಹಿರಿಯರ ಪಾತ್ರ ಪ್ರಮುಖ ವಾಗಿದ್ದು, ಅವರ ಶ್ರಮದ ಫಲವೇ ಇಂದು ಪಕ್ಷ ಬೃಹತ್ ಮಟ್ಟದಲ್ಲಿ ಬೆಳೆದು ನಿಂತಿದೆ. ಅವರ ಶ್ರಮಕ್ಕ ತಕ್ಕ ಪ್ರತಿಫಲ ಸಿಗಬೇಕಾದರೆ ನಾವೆಲ್ಲ ಪ್ರಾಮಾಣಿಕ ವಾಗಿ ಪಕ್ಷದಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ವಿಠ್ಠಲ ಕಟಕದೊಂಡ ಹೇಳಿದರು.

ಪಟ್ಟಣದ ಮಲ್ಲಯ್ಯನ ದೇವಸ್ಥಾನ ದಲ್ಲಿ ಬುಧವಾರ ನಡೆದ ದೀನದಯಾಳ ಉಪಾಧ್ಯಾಯ ಅವರ ಜನ್ಮಶತಾಬ್ದಿ ನಿಮಿತ್ತ ಹಮ್ಮಿಕೊಂಡಿದ್ದ ದೇವರಹಿಪ್ಪ ರಗಿ ಮತಕ್ಷೇತ್ರದ ವಿಸ್ತಾರಕ ಕಾರ್ಯ ಯೋಜನೆಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಿಜೆಪಿ ಕಟ್ಟುವಲ್ಲಿ ಅನೇಕರು ಬಲಿದಾನವಾಗಿದ್ದಾರೆ.

ಜೊತೆ ಯಲ್ಲಿ ತಮ್ಮ ಜೀವನವನ್ನೇ ಸವೆಸಿದ್ದಾರೆ. ಅಂತಹ ಒಂದು ಪಕ್ಷದ ಹೆಸರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇಂದು ಉತ್ತಮ ಆಡಳಿತ ನೀಡುವುದರ ಜೊತೆಗೆ ಜನಪರ ಕಾರ್ಯ ಹಮ್ಮಿಕೊಳ್ಳುತ್ತಿದೆ. ಅವುಗಳನ್ನು ಪ್ರತಿಯೊಬ್ಬರಿಗೂ ಮುಟ್ಟಿಸುವ ಕಾರ್ಯವಾಗಬೇಕು  ಎಂದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸೋಮ ನಗೌಡ ಪಾಟೀಲ ಸಾಸನೂರ, ಯುವ ಮೋರ್ಚಾ ಉಪಾಧ್ಯಕ್ಷ  ಮಹೇಂದ್ರ ಕೌತಾಳ, ರಾಜ್ಯ ಕಾರ್ಯಕಾರಣಿ ಸದಸ್ಯೆ ಮಂಗಳಾದೇವಿ ಬಿರಾದಾರ, ವಿವೇಕ ಡಬ್ಬಿ, ಸಂಗರಾಜ ದೇಸಾಯಿ ಮಾತನಾಡಿದರು.

ರಾಜುಗೌಡ ಪಾಟೀಲ (ಕುದರಿ ಸಾಲವಾಡಗಿ), ಡಾ.ಆರ್.ಆರ್. ನಾಯಿಕ. ಕಾಶಿರಾಯಗೌಡ ಬಿರಾದಾರ, ಪ್ರಭುಗೌಡ ಬಿರಾದಾರ ಅಸ್ಕಿ, ಕಾರ್ಯ ದರ್ಶಿ ಬಸವರಾಜ ಬೈಚಬಾಳ, ದಯಾ ಸಾಗರ ಪಾಟೀಲ, ಮಂಜುನಾಥ ವಂದಾಲ, ರಮೇಶ ಮಸಬಿನಾಳ, ರಾಜು ಮೆಟಗಾರ, ಶೇಖರಗೌಡ ಪಾಟೀಲ, ಮಹಾಂತೇಶ ವಂದಾಲ, ವಿನೋದಗೌಡ ಪಾಟೀಲ, ಕಿರಣ ನಾಯಿಕ, ಮಲ್ಲಮ್ಮ ಜೋಗೂರ, ಶ್ರೀಧರ ನಾಡಗೌಡ, ಮಹಮ್ಮದ ರಫೀಕ ಮೊಮೀನ್, ಬಸವರಾಜ ಹೂಗಾರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT