ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೌಚಾಲಯ ನಿರ್ಮಿಸಿಕೊಳ್ಳಲು ಸಲಹೆ

Last Updated 14 ಜುಲೈ 2017, 10:01 IST
ಅಕ್ಷರ ಗಾತ್ರ

ಮುಂಡರಗಿ: ಸಾರ್ವಜನಿಕರು ಖಾಸಗಿ ಶೌಚಾಲಯ ನಿರ್ಮಿಸಿಕೊಳ್ಳಲು ಸರ್ಕಾರ ಧನ ಸಹಾಯ ಮಾಡುತ್ತಿದ್ದು, ಅದರ ನೆರವಿನಿಂದ ಎಲ್ಲರೂ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಿಕೊಳ್ಳಬೇಕು ಎಂದು ಜಿಲ್ಲಾ ಯೋಜನಾ ನಿರ್ದೇಶಕ ರಮೇಶ ದೇಸಾಯಿ ಮನವಿ ಮಾಡಿದರು.

ಪುರಸಭೆ ವ್ಯಾಪ್ತಿಯ 1ಮತ್ತು 23ನೇ ವಾರ್ಡುಗಳಲ್ಲಿ ಏರ್ಪಡಿಸಿದ್ದ ವೈಯಕ್ತಿಕ ಶೌಚಾಲಯ ಉದ್ಘಾಟನೆ ಮತ್ತು ಪರಿ ಶೀಲನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬಯಲು ಶೌಚದಿಂದ ಪರಿಸರ ಮಲಿನ ವಾಗುವ ಜತೆ ಪರಿಸರ ಸೌಂದರ್ಯ ಹದಗೆಡುತ್ತದೆ. ಮಹಿಳೆಯರು ಬಯಲು ಶೌಚಕ್ಕೆ ತೆರಳುವುದರಿಂದ ಅವರ ಘನ ತೆಗೆ ಚ್ಯುತಿ ಉಂಟಾಗುತ್ತದೆ. ಇದನ್ನು ತಪ್ಪಿ ಸಲು ಖಾಸಗಿ ಶೌಚಾಲಯಗಳನ್ನು ನಿರ್ಮಿಸಿಕೊಳ್ಳಬೇಕು ಎಂದು ತಿಳಿಸಿದರು.

ಮನೆಗಳಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಸರ್ಕಾರ ಪ್ರತಿ ಫಲಾ ನುಭವಿಗೆ ಹದಿನೈದು ಸಾವಿರ ರೂಪಾಯಿ ಸಹಾಯಧನ ನೀಡುತ್ತಿದೆ. ಇಂತಹ ಯೋಜನೆಗಳನ್ನು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು. ಆ ಮೂಲಕ ಸ್ವಚ್ಛ ಭಾರತ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ತಿಳಿಸಿದರು.

ಪುರಸಭೆ ಅಧ್ಯಕ್ಷೆ ಹೇಮಾವತಿ ಅಬ್ಬಿ ಗೇರಿ ಮಾತನಾಡಿ, ಈವರೆಗೂ ಕೇವಲ ಗ್ರಾಮೀಣ ಭಾಗದ ಜನರಿಗೆ ಮಾತ್ರ ಶೌಚಾಲಯ ನಿರ್ಮಿಸಿಕೊಳ್ಳಲು ಸಹಾಯ ಧನ ನೀಡಲಾಗುತ್ತಿತ್ತು. ಈಗ ಪುರಸಭೆ ವ್ಯಾಪ್ತಿಯಲ್ಲೂ ಖಾಸಗಿ ಶೌಚಾಲಯ ನಿರ್ಮಿಸಿಕೊಳ್ಳಲು ಸರ್ಕಾರ ಮುಂದಾಗಿ ರುವುದು ಸಂತಸದ ವಿಷಯವಾಗಿದೆ ಎಂದು ತಿಳಿಸಿದರು.

ಜಿಲ್ಲಾ ಯೋಜನಾ ನಿರ್ದೇಶಕ ರಮೇಶ ದೇಸಾಯಿ ಹಾಗೂ ಮತ್ತಿತರ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು 1 ಮತ್ತು 23ನೇ ವಾರ್ಡುಗಳಲ್ಲಿ ನಿರ್ಮಿಸಿರುವ ವೈಯಕ್ತಿಕ ಶೌಚಾಲಯ ಗಳನ್ನು ಪರಿಶೀಲಿಸಿದರು. ನಂತರ ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡ ಫಲಾನುಭವಿಗೆ ಪುರಸಭೆಯಿಂದ ಅಭಿ ನಂದನಾ ಪತ್ರ ವಿತರಿಸಿದರು.

ಪುರಸಭೆ ಮುಖ್ಯಾಧಿಕಾರಿ ಎಂ.ಎ. ನೂರುಲ್ಲಾಖಾನ್, ಉಪಾಧ್ಯಕ್ಷ ಬಸವ ರಾಜ ನರೇಗಲ್, ಸ್ಥಾಯಿ ಸಮಿತಿ ಅಧ್ಯಕ್ಷ ಪರುಶುರಾಮ ಕರಡಿಕೊಳ್ಳ, ಸದಸ್ಯರಾದ ಕೊಟ್ರಮ್ಮ ಇಟಗಿ, ಬಸವರಾಜ ರಾಮೇನ ಹಳ್ಳಿ, ಪ್ರಭು ಅಬ್ಬಿಗೇರಿ, ಲಿಂಗರಾಜಗೌಡ ಪಾಟೀಲ, ವೀರೇಶ ಸಜ್ಜನರ, ಪಕ್ರುಸಾಬ್ ಹಾರೋಗೇರಿ, ಸೋಮನಗೌಡ ಗೌಡ್ರ, ಶಾರದಾ ದೇಸಾಯಿ, ಸುರೇಶ ಮಾಳೆ ಕೊಪ್ಪ, ರೇಖಾ ದೇಸಾಯಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT