ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಜಕೀಯ ಹಿತಾಸಕ್ತಿಗೆ ರೈತರ ಬಲಿ ಸಲ್ಲ’

Last Updated 14 ಜುಲೈ 2017, 10:04 IST
ಅಕ್ಷರ ಗಾತ್ರ

ನರಗುಂದ: ಮಹಾದಾಯಿ  ಯೋಜನೆ ಅನುಷ್ಠಾನ ಗೊಳಿಸಲೆಂದು ಸುದೀರ್ಘ ಹೋರಾಟ ನಡೆಸಲಾಗುತ್ತಿದೆ. ಆದರೆ  ರಾಜಕಾರಣಿಗಳು ತಮ್ಮ ಸ್ವಪ್ರತಿಷ್ಠೆಗಾಗಿ  ರೈತರನ್ನು ಬಲಿಕೊಡಬೇಡಿ ಎಂದು ಮಹಾದಾಯಿ ಹೋರಾಟ ಸಮಿತಿ ಸದಸ್ಯ ವೀರಣ್ಣ ಸೊಪ್ಪಿನ  ಅವರು ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದಲ್ಲಿ ನಡೆಯುತ್ತಿರುವ ಮಹಾ ದಾಯಿ ಧರಣಿಯ 729ನೇ ದಿನ ಗುರು ವಾರ  ಮಾತನಾಡಿದರು.

ರೈತರು ಮಹಾದಾಯಿ ನೀರು ಹರಿಸಲು ತನು, ಮನ, ಧನ ಅರ್ಪಿಸುತ್ತಿದ್ದಾರೆ. ರಾಜಕೀಯದವರು ಇದನ್ನು ಮೋಜಾಗಿ ಪರಿಗಣಿಸುತ್ತಿರುವುದು ಸಲ್ಲದು. ಮೂರು ದಶಕಗಳ ಯೋಜನೆ ಮಹಾದಾಯಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ಯಾವುದೇ ಆಸಕ್ತಿ ತೋರುತ್ತಿಲ್ಲ. ಇದನ್ನು ಅನುಷ್ಠಾನಗೊಳಿ ಸುವವರು ಯಾರು? ಇದರ ಬಗ್ಗೆ ಈ ಭಾಗದ ಸಂಸದರು, ಶಾಸಕರು ಆಲೋಚಿ ಸುವುದು ಅಗತ್ಯವಾಗಿದೆ ಎಂದರು.

ಮಹಾದಾಯಿ ಹೋರಾಟ ಸಮಿತಿ ಸದಸ್ಯ  ಜಗನ್ನಾಥ ಮುಧೋಳೆ ಮಾತನಾಡಿ,  ಪ್ರಧಾನಿ ಅಂತರರಾಷ್ಟ್ರೀಯ  ಸಂಬಂಧ ವೃದ್ಧಿಗೆ ಸಾಕಷ್ಟು ಕ್ರಮ ಕೈಗೊಳ್ಳುತ್ತಿದ್ದಾರೆ. ಆದರೆ, ಅದೇ ಪ್ರಯತ್ನ ರೈತರ ವಿಷಯದಲ್ಲಿ ನಡೆಯುತ್ತಿಲ್ಲ.  ಇದರಿಂದ ರೈತರು ಸಂಕಷ್ಟ ಅನು ಭವಿಸುವಂತಾಗಿದೆ. ಇದು ಸಲ್ಲದು ಎಂದು ಹೇಳಿದರು.

ಮಹಾದಾಯಿ ಜಾರಿಗೆ ಪ್ರಧಾನಿ ನರೇಂದ್ರ  ಮೋದಿಯವರು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಮಹಾದಾಯಿ ನೀರು ಹರಿಸಲು ಸಿ.ಎಂ ಸಿದ್ದರಾಮಯ್ಯ ಗಂಭೀರ ಚಿಂತನೆ ಮಾಡಬೇಕು. ಹೋರಾಟ ತೀವ್ರಗೊಳ್ಳುವ ಮೊದಲು ನಮ್ಮ  ಬೇಡಿಕೆ ಈಡೇರಿಸಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಧರಣಿಯಲ್ಲಿ ಭೀಮಪ್ಪ ದಿಟವಗಿ, ವಾಸು ಚವ್ಹಾಣ, ಲಕ್ಷ್ಮಣ ಮುನೇ ನಕೊಪ್ಪ, ಹನಮಂತ ಪಡೆಸೂರು, ಚಂದ್ರಗೌಡ ಪಾಟೀಲ, ಶ್ರೀಶೈಲ ಮೇಟಿ, ರಾಘವೇಂದ್ರ ಗುಜಮಾಗಡಿ, ಹನಮಂತ ಪಡೆಸೂರು,  ಸೋಮಲಿಂಗಪ್ಪ ಆಯಟ್ಟಿ, ಕಲ್ಲಪ್ಪ ಮೊರಬದ, ಚನಬಸು ಹುಲ ಜೋಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT