ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಾರಿಯಾಗದ ಕೇಂದ್ರದ ಯೋಜನೆಗಳು’

Last Updated 14 ಜುಲೈ 2017, 11:01 IST
ಅಕ್ಷರ ಗಾತ್ರ

ಕನಕಪುರ: ‘ಪ್ರಧಾನಿ ನರೇಂದ್ರ ಮೋದಿ ಅವರ ಬಿಜೆಪಿ ಸರ್ಕಾರ ಬಡವರ ಕಲ್ಯಾಣಕ್ಕಾಗಿ ರೂಪುಗೊಂಡಿರುವ ಯೋಜನೆಗಳು  ರಾಜ್ಯದಲ್ಲಿ ಸರಿಯಾಗಿ ಜಾರಿ ಆಗುತ್ತಿಲ್ಲ ಎಂದು’ ಪಕ್ಷದ ರಾಜ್ಯ ಮುಖಂಡ ಅಶ್ವತ್ಥ್‌ ನಾರಾಯಣ ಆರೋಪಿಸಿದರು.

ನಗರದಲ್ಲಿ ಗುರುವಾರ ಬಿಜೆಪಿ ನಗರದ ಮಂಡಲ ಆಯೋಜಿಸಿದ್ದ ಪ್ರಚಾರ ಕಾರ್ಯಕ್ರಮದಲ್ಲಿ ಮನೆ ಮನೆಗಳಿಗೆ ತೆರಳಿ ಕೇಂದ್ರದ ಸಾಧನೆ ಮತ್ತು ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಕೇಂದ್ರ ಸರ್ಕಾರದ ಎಲ್ಲ ಯೋಜನೆ ರಾಜ್ಯ ಸರ್ಕಾರದ ಮೂಲಕ ಜಾರಿ ಗೊಳ್ಳಬೇಕಿದೆ. ಕೇಂದ್ರ ಬಡವರಿಗಾಗಿ ರೂಪಿಸಿದ ಕಾರ್ಯಕ್ರಮಗಳ ಸಲವತ್ತು ರಾಜ್ಯಕ್ಕೆ ನೀಡಿದ್ದರೂ ಕಾಂಗ್ರೆಸ್‌ ಸರ್ಕಾರ ಸರಿಯಾಗಿ ಜಾರಿಗೊಳಿಸದೆ ವಿಫಲಗೊಳಿಸುತ್ತಿದೆ ಎಂದು ದೂರಿದರು.

ಪಕ್ಷದ ಪ್ರಚಾರ ಕಾರ್ಯಕ್ಕೆ ಸಾರ್ವಜನಿಕವಾಗಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡ ಅಭಿವೃದ್ಧಿ ಕಾರ್ಯ ಕ್ರಮ ಜನರು ಸ್ವಾಗತಿಸಿದ್ದಾರೆ ಎಂದರು. ದೇಶದಲ್ಲಿ ಯಾವ ಪಕ್ಷದಿಂದ ಆಗದಂತ ಕೆಲಸಗಳೂ ಬಿಜೆಪಿ ಸರ್ಕಾರ ದಲ್ಲಿ ಆಗುತ್ತಿವೆ. ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದರು.

‘ಕ್ಷೇತ್ರದ ಜನರಿಗೆ  ಪಕ್ಷದಿಂದ ಆಗುತ್ತಿ ರುವ  ಅಭಿವೃದ್ಧಿ ಕಾರ್ಯ ಕ್ರಮಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿ ಞಕೊಡಬೇಕಿದೆ. ಈನಿಟ್ಟಿನಲ್ಲಿ ಪಕ್ಷ  ಪ್ರಚಾರ ಕಾರ್ಯಕೈಗೊಂಡಿದ್ದು ಜೂ.25 ರವರೆಗೂ ತಾಲ್ಲೂಕಿನಾದ್ಯಂತ ಪ್ರವಾಸ ಕಾರ್ಯ ನಡೆಸಲಿದ್ದು  ಪ್ರಚಾರ ಕಾರ್ಯ ದಿಂದ  ಪಕ್ಷಕ್ಕೆ ತುಂಬಾ ಅನುಕೂಲ ವಾಗಲಿದೆ’ ಎಂದು ತಿಳಿಸಿದರು.

ಬಿಜೆಪಿ ತಾಲ್ಲೂಕು ವಕ್ತಾರ ಛಯಾಪತಿ, ಜಿಲ್ಲಾ ಘಟಕದ ಅಧ್ಯಕ್ಷ ಹುಲುವಾಡಿ ದೇವರಾಜು, ನಗರ ಮಂಡಲ ಅಧ್ಯಕ್ಷ ಕೃಷ್ಣಪ್ಪ, ತಾಲ್ಲೂಕು ಅಧ್ಯಕ್ಷ ಟಿ.ವಿ.ರಾಜು, ಎಸ್‌.ಟಿ. ಮೋರ್ಚಾ ಜಿಲ್ಲಾ ಅಧ್ಯಕ್ಷ ಡಿ.ಶ್ರೀನಿವಾಸ, ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್‌, ಆನಂದ, ಭರತ್‌ಕುಮಾರ್‌, ಲಿಂಗಯ್ಯ, ಪ್ರಧಾನ ಕಾರ್ಯದರ್ಶಿ ರಾಧಮ್ಮ, ಮುಖಂಡರಾದ ಅಶೋಕ, ಭವಾನಿ, ಜಲಜಾಕ್ಷಮ್ಮ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT