ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ಕಾರ್ಯ ಹೇಳಿಕೆ: ಕಾಂಗ್ರೆಸ್ ಖಂಡನೆ

Last Updated 14 ಜುಲೈ 2017, 11:15 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ‘ತಾಲ್ಲೂಕಿಗೆ ಸಂಬಂಧವೇ ಇಲ್ಲದ ವ್ಯಕ್ತಿಗಳು ತಾಲ್ಲೂಕಿನಲ್ಲಿ ಅಭಿವೃದ್ಧಿ ಕಾಮಗಾರಿಗಳು ಹಾಗೂ ಶಿಷ್ಟಾಚಾರದ ಬಗ್ಗೆ ದೇವನಹಳ್ಳಿಯಲ್ಲಿ ಹೇಳಿಕೆ ನೀಡಿರುವ ಕ್ರಮ ಖಂಡನೀಯ’ ಎಂದು ಕಾಂಗ್ರೆಸ್‌ ತಾಲ್ಲೂಕು ಸಮಿತಿ ಕಾರ್ಯದರ್ಶಿ ಜಿ.ಲಕ್ಷ್ಮೀಪತಿ ಹೇಳಿದರು.

ಗುರುವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ, ಕೀಮ್ಸ್‌ ಅಧ್ಯಕ್ಷ ಬಿ.ಮುನೇಗೌಡ ಅವರ ಹೆಸರನ್ನು ಹೇಳದೆ ತೀವ್ರ ತರಾಟೆಗೆ ತೆಗೆದುಕೊಂಡ ಅವರು ಯಾವ ಕಾಲದಲ್ಲಿ ಏನು ಕೆಲಸಗಳು ನಡೆದಿವೆ ಎನ್ನುವುದನ್ನು ಸರ್ಕಾರಿ ದಾಖಲೆಗಳ ಸಮೇತ ಸಾಬೀತುಪಡಿಸಲು ಸಿದ್ದ. ಈ ಬಗ್ಗೆ ಬಹಿರಂಗವಾಗಿ ವಿರೋಧ ಪಕ್ಷದವರು ತಮ್ಮ ದಾಖಲೆಗಳನ್ನು ಜನರ ಮುಂದೆ ಸಾಬೀತುಪಡಿಸಲಿ ಎಂದು ಹೇಳಿದರು.‘ಜೆಡಿಎಸ್‌ ಪಕ್ಷದವರು ಹೆಸರಿಗಾಗಿ ಕೆಲಸ ಮಾಡುತ್ತಾರೆ. ಆದರೆ ಕಾಂಗ್ರೆಸ್‌ ಪಕ್ಷದವರು ಜನರ ಒಳಿತಿಗಾಗಿ ಕೆಲಸ ಮಾಡುತ್ತಾರೆ’ ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಚ್‌.ವಿ.ಶ್ರೀವತ್ಸ ಮಾತನಾಡಿ, ತಾಲ್ಲೂಕಿನಲ್ಲಿ ಯಾರ ಕಾಲದಲ್ಲಿ ಎಷ್ಟು ಅಭಿವೃದ್ಧಿ ಕೆಲಸಗಳು ಆಗಿವೆ ಎನ್ನುವುದು ಜನರ ಕಣ್ಣ ಮುಂದೆ ಇದೆ. ಯಾರೋ ಕಾಲದಲ್ಲಿ ಆಗಿರುವ ಕೆಲಸಗಳನ್ನು ನಮ್ಮದು ಎಂದು ಹೇಳಿಕೊಳ್ಳುವ ಸಂಸ್ಕೃತಿ ಕಾಂಗ್ರೆಸ್‌ ಪಕ್ಷಕ್ಕೆ ಇಲ್ಲ ಎಂದು ಹೇಳಿದರು..

ಕಾಂಗ್ರೆಸ್ ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ತಿಪ್ಪೂರು ಭೈರೇಗೌಡ, ನಗರ ಬ್ಲಾಕ್‌ನ ಅಧ್ಯಕ್ಷ ಕೆ.ಜಿ. ಅಶೋಕ್‌ ಗುರುರಾಜಪ್ಪ, ತಾಲ್ಲೂಕು  ಪಂಚಾಯಿತಿ ಸದಸ್ಯ ಡಿ.ಸಿ.ಶಶಿಧರ್, ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟರಮಣ, ಪ್ರಧಾನ ಕಾರ್ಯದರ್ಶಿ ರಾಮಾಂಜಿನಪ್ಪ, ಯುವ ಕಾಂಗ್ರೆಸ್‌ ತಾಲ್ಲೂಕು ಪ್ರಭಾರ ಅಧ್ಯಕ್ಷ ಜವಾಜಿ ರಾಜೇಶ್‌, ಗುಣಸಂದ್ರ ಆನಂದ್, ನಟರಾಜ್,ರಾಮಾಂಜಿನಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT