ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯದ ಓದು

Last Updated 14 ಜುಲೈ 2017, 19:30 IST
ಅಕ್ಷರ ಗಾತ್ರ

‘ಆಟಿಸಂ’ನಿಂದ ಎದುರಾಗುವ ಪ್ರಧಾನ ಸಮಸ್ಯೆ ಎಂದರೆ ಸಂವಹನದ ಕೊರತೆ. ಈ ಸಮಸ್ಯೆಗೆ ತುತ್ತಾಗಿರುವ ಮಕ್ಕಳು ಅವರಿರುವ ಪರಿಸರದೊಂದಿಗೆ ವ್ಯವಹರಿಸುವ ಗುಣವನ್ನೇ ಕಳೆದುಕೊಂಡಿರುತ್ತವೆ. ಆದರೆ ಈ ಸಮಸ್ಯೆ ಏಕಮುಖವಲ್ಲ.

ಆಟಿಸಂನ ಸಮಸ್ಯೆ ಇರುವ ಮಕ್ಕಳು ಸಂವಹನದ ಸಾಮರ್ಥ್ಯವನ್ನು ಕಳೆದುಕೊಂಡಿದ್ದರೆ, ಅಂಥ ಮಕ್ಕಳೊಂದಿಗೆ ವ್ಯವಹರಿಸುವ ಕುಶಲತೆಯನ್ನು ಪಾಲಕ–ಪೋಷಕರು ಗಳಿಸಿಕೊಂಡಿರುವುದಿಲ್ಲ. ಹೀಗಾಗಿ ಈ ಸಮಸ್ಯೆಯನ್ನು ಎರಡು ನೆಲೆಯಲ್ಲಿ ನೋಡಬೇಕಾಗುತ್ತದೆ.

ಆಟಿಸಂ ಪೀಡಿತ ಮಕ್ಕಳ ಆರಂಭಿಕ ಹಂತದಲ್ಲಿಯೇ ವೈಜ್ಞಾನಿಕವಾಗಿ ಮಧ್ಯ ಪ್ರವೇಶಿಸಿ, ಅವರ ಸಂವಹನ ಸಾಮರ್ಥ್ಯವನ್ನು ಎಚ್ಚರಗೊಳಿಸಬಹುದು. ಆದರೆ ಇದಕ್ಕೆ ತಂದೆ–ತಾಯಿಯಿಂದ ಆರಂಭವಾಗಿ ಸಮಾಜದ ಬೇರೆ ಬೇರೆ ವರ್ಗಗಳವವರು ಮೊದಲು ತಾವು ಸಂವಹನದ ಕೌಶಲಗಳನ್ನು ಕಲಿಯಬೇಕಾಗುತ್ತದೆ.

ಈ ದಿಸೆಯಲ್ಲಿ ‘ದಿ ಕಾಮ್‌ ಡೀಲ್‌ ಟ್ರಸ್ಟ್‌’ನವರು ಡಾ. ಪ್ರತಿಭಾ ಕಾರಂತ್‌ ಅವರ ಸಂಪಾದಕತ್ವದಲ್ಲಿ ಹೊರತಂದಿರುವ ಪುಸ್ತಕಗಳು ಪ್ರಯೋಜನಕಾರಿಯಾಗಿವೆ. ವಿಶೇಷ ಪರಿಣತ ಹೊಂದಿರುವ ತಂಡದಿಂದ ಈ ಪುಸ್ತಕಗಳನ್ನು ಡಾ. ಪ್ರತಿಭಾ ಕಾರಂತ್‌ ಅವರ ಸಂಪಾದಕತ್ವದಲ್ಲಿ ಪ್ರಕಟಿಸಲಾಗಿದೆ. ಈ ಮಾಲಿಕೆಯಲ್ಲಿ ಬಂದಿರುವ ಪುಸ್ತಕಗಳಲ್ಲಿ ಇದೀಗ ಮೂರು ಕನ್ನಡಕ್ಕೂ ಅನುವಾದವಾಗಿವೆ.

ನಮ್ಮ ಹೆಚ್ಚಿನ ಮನೆಗಳಲ್ಲಿ ಸುಲಭವಾಗಿ ದೊರಕುವ ವಸ್ತುಗಳು ಮತ್ತು ಆಡದ ಸಾಮಾನುಗಳ ಬಳಕೆಯಿಂದಲೇ ಆಟಿಸಂ ಮಕ್ಕಳ ಸಂವಹನದ ಕಲಿಕೆಗೆ ಈ ಪಠ್ಯಗಳಲ್ಲಿ ಹೆಚ್ಚಿನ ಒತ್ತನ್ನು ನೀಡಲಾಗಿದೆ. ತಂದೆ–ತಾಯಂದರಿಗೂ ವೈದ್ಯರಿಗೂ ಶಿಕ್ಷಕರಿಗೂ ಈ ಪುಸ್ತಕಗಳು ಕೈಪಿಡಿಗಳಾಗಿ ಒದಗಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT