ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾದೋಪಾಸಕ ಸಿ. ಕೃಷ್ಣಮೂರ್ತಿ ಸಂಸ್ಮರಣೆ

Last Updated 14 ಜುಲೈ 2017, 19:30 IST
ಅಕ್ಷರ ಗಾತ್ರ

‘ಮೈಸೂರು ಬಾನಿ’ಯ ಬಾನಿನಲ್ಲಿ ಸದಾ ಬೆಳಗುವ ನಕ್ಷತ್ರವೆಂದೇ ಗುರುತಿಸಲಾಗುವ ವೈಣಿಕ ವಿದ್ವಾನ್ ಸಿ. ಕೃಷ್ಣಮೂರ್ತಿ ಅವರ 25ನೇ ಪುಣ್ಯ ದಿನಾಚರಣೆಯ ನಿಮಿತ್ತ (1936-1992) ಇದೇ ಭಾನುವಾರ ವೀಣಾ ವಾದನ ಕಛೇರಿಗಳು ಏರ್ಪಾಡಾಗಿವೆ. ಮಲ್ಲೇಶ್ವರದ ಸೇವಾ ಸದನದಲ್ಲಿ ನಡೆಯುವ ಸ್ಮರಣಾ ಕಾರ್ಯಕ್ರಮದಲ್ಲಿ ಅವರ ಶಿಷ್ಯರು ಈ ಕಛೇರಿಗಳನ್ನು ನಡೆಸಿಕೊಡಲಿದ್ದಾರೆ.

ಕೃಷ್ಣಮೂರ್ತಿಯವರ ಕುರಿತು: ಸಂಗೀತದ ಮನೆಯಲ್ಲೆ ಜನಿಸಿದ ಕೃಷ್ಣಮೂರ್ತಿಯ ಬಾಲ್ಯ ಪಾಠವೆಲ್ಲಾ ತಂದೆ ಎಂ. ಚೆಲುವರಾಯಸ್ವಾಮಿ ಅವರಿಂದಲೇ ಪ್ರಾರಂಭವಾಗಿ, ಸ್ವಲ್ಪಕಾಲ ವೆಂಕಟಗಿರಿಯಪ್ಪ ಅವರಿಂದ ಮುಂದುವರೆಯಿತು. ರಾಷ್ಟ್ರದ ಗಣ್ಯ ವೀಣಾ ವಿದ್ವಾಂಸರಾಗಿದ್ದ ಡಾ.ವಿ.ದೊರೆಸ್ವಾಮಿ ಅಯ್ಯಂಗಾರರೇ ಕೃಷ್ಣಮೂರ್ತಿ ಅವರಿಗೆ ಆದರ್ಶಪ್ರಾಯರು. ವೀಣೆ ಶೇಷಣ್ಣನವರ ಶಿಷ್ಯ ಪರಂಪರೆಗೆ ಸೇರಿದ ಕೃಷ್ಣಮೂರ್ತಿಯವರು ಮೈಸೂರು ಬಾನಿಯ ಪ್ರಮುಖ ವೈಣಿಕರಲ್ಲಿ ಒಬ್ಬರಾದರು.

ಹಿರಿಯ ವೀಣಾವಾದಕರಾಗಿದ್ದ ಕೃಷ್ಣಮೂರ್ತಿ ದಕ್ಷ ಬೋಧಕರೂ ಹೌದು. ಮೈಸೂರು ಬಾನಿಯ ಉಳಿವು, ಬೆಳವಣಿಗೆಗೂ ತಮ್ಮ ಕೈಂಕರ್ಯ ಸಲ್ಲಿಸಿದ್ದಾರೆ. ತಮ್ಮ 56ನೇ ವಯಸ್ಸಿನಲ್ಲೇ ನಿಧನರಾದ ಕೃಷ್ಣಮೂರ್ತಿ ಸಂಸ್ಮರಣೆಗಾಗಿ ಅವರ ಮನೆಯವರು ಪ್ರತಿ ವರ್ಷ ಸಂಗೀತ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದಾರೆ. ಈ ಬಾರಿ, 25ನೇ ಪುಣ್ಯ ದಿನಾಚರಣೆ ನಿಮಿತ್ತ 10 ಗಂಟೆಗಳ ನಿರಂತರ ಕಛೇರಿ ನಡೆಸುತ್ತಿರುವುದು ಅಭಿನಂದನೀಯ.

ಕಾರ್ಯಕ್ರಮ ನಡೆಯುವ ಸ್ಥಳ: ಸೇವಾ ಸದನ, 14ನೇ ಅಡ್ಡರಸ್ತೆ, ಮಲ್ಲೇಶ್ವರ. ಆಯೋಜನೆ: 25ನೇ ಸಂಸ್ಮರಣಾ ವ್ಯವಸ್ಥಾಪಕ ಸಮಿತಿ. ಬೆ. 10

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT