ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಕಲಿಕೆ...

Last Updated 14 ಜುಲೈ 2017, 19:30 IST
ಅಕ್ಷರ ಗಾತ್ರ

ಮನು ಬಳಿಗಾರ್‌ ಅವರು ‘ಉನ್ನತ ಶಿಕ್ಷಣದಲ್ಲಿ ಎಲ್ಲಾ ವಿಭಾಗಗಳಲ್ಲೂ ಕಡ್ಡಾಯವಾಗಿ ಕನ್ನಡ ಭಾಷೆಯನ್ನು ಕಲಿಸಬೇಕು ಮತ್ತು ಅದಕ್ಕೆ ಪರೀಕ್ಷೆಗಳನ್ನು ನಡೆಸಬೇಕು’ ಎಂದು ಒತ್ತಾಯಿಸಿರುವುದು (ಪ್ರ.ವಾ., ಜುಲೈ 5) ಸರಿಯಷ್ಟೇ. ಆದರೆ ‘ಬುಡವೇ ಭದ್ರವಾಗಿಲ್ಲದ ಒಂದು ಮರ ಎಷ್ಟು ದಿನ ತಳವೂರಿ ನಿಲ್ಲಲು ಸಾಧ್ಯ?’
ನಿಜಕ್ಕೂ ಕನ್ನಡದ ಬಗ್ಗೆ ಕಳಕಳಿ ಇದ್ದರೆ, ಈ ಕೆಳಕಂಡ ಕೆಲವು ಕ್ರಮಗಳನ್ನು ಅನುಷ್ಠಾನಗೊಳಿಸಲು ಪ್ರಯತ್ನಿಸಲಿ. ಆಗ ಖಂಡಿತ ಕನ್ನಡದ ಬಗ್ಗೆ ಕನ್ನಡಿಗರಷ್ಟೇ ಅಲ್ಲದೆ ಕನ್ನಡೇತರರೂ ಆಸಕ್ತಿಯಿಂದ ಕನ್ನಡ ಕಲಿಯುವರು.
1. ಎಲ್ಲಾ ರೀತಿಯ ಶಾಲೆಗಳಲ್ಲೂ ಒಂದು ಭಾಷೆಯಾಗಿ ಕನ್ನಡವನ್ನು ಕಡ್ಡಾಯವಾಗಿ ಕಲಿಸುವಂತಾಗಬೇಕು.
2. ಯಾವುದೇ ಪೂರ್ವ ಶಿಕ್ಷಣದ ಅಗತ್ಯವಿಲ್ಲದೆ, ‘ಮೈಸೂರು ಹಿಂದಿ ಪ್ರಚಾರ ಪರಿಷತ್’ನಲ್ಲಿರುವಂತೆ ವಿವಿಧ ಹಂತಗಳಲ್ಲಿ ಭಾಷಾ ಪರೀಕ್ಷೆಗಳನ್ನು ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಪೂರ್ತಿಗೊಳಿಸಿ ಕೆಲವೇ ವರ್ಷಗಳಲ್ಲಿ ‘ಪದವಿ’  ಹಾಗೂ ‘ಸ್ನಾತಕೋತ್ತರ ಪದವಿ’ಗಳನ್ನು ಪಡೆ ಯಲು ಅವಕಾಶವಿದೆ. ಹಾಗೆ ನಮ್ಮ ಕನ್ನಡ ಭಾಷೆಯಲ್ಲೂ ಪದವಿಗಳನ್ನು ಪಡೆಯುವ ಅವಕಾಶವನ್ನು ಪರಿಷತ್ತು ಕಲ್ಪಿಸಬಾರದೇಕೆ?

-ಪುಷ್ಪಾ ಶ್ರೀರಾಮ್
ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT