ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸುಂದರ ಬದುಕು ನಮ್ಮ ಕೈಯಲ್ಲಿ’

Last Updated 15 ಜುಲೈ 2017, 7:36 IST
ಅಕ್ಷರ ಗಾತ್ರ

ಕೊಪ್ಪಳ: ಸುಂದರ ಬದುಕು ನಮ್ಮ ಕೈಯಲ್ಲೇ ಇದೆ. ಪರಸ್ಪರ ಎಲ್ಲರೂ ಕೈಜೋಡಿಸಿ ಮಹಿಳಾ ಕಾನೂನುಗಳ ಅರಿವು ಮೂಡಿಸೋಣ ಎಂದು ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಸಾವಿತ್ರಿ ಮುಜುಂದಾರ ಹೇಳಿದರು.

ನಗರದ ಕೃಷಿ ವಿಸ್ತರಣಾ ಕೇಂದ್ರದಲ್ಲಿ ಶುಕ್ರವಾರ ಡೆವಲಪ್‌ಮೆಂಟ್‌ ಎಜುಕೇಷನ್‌ ಸರ್ವೀಸ್‌, ಸರ್ವೋದಯ ಸಮಗ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಆಶ್ರಯದಲ್ಲಿ ನಡೆದ ಪೂರಕ ಕಾನೂನು ಸುಗಮಗಾರರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಈ ಭಾಗ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದಿರು ವುದರಿಂದ ಹಾಗೂ ಸಾಂಪ್ರದಾಯಿಕ ಪದ್ಧತಿಗಳಿಂದ ಅನೇಕ ಬಾಲ್ಯ ವಿವಾಹಗಳು ನಡೆಯುತ್ತಿವೆ. ರಾಜಕಾರಣಿ ಗಳು ಮಹಿಳಾ ಪರವಾದ ಯೋಜನೆಗಳನ್ನು ಮತ್ತು ಕಾನೂನುಗಳ ಕುರಿತು ಭಾಷಣ ಮಾಡುತ್ತಾರೆ.

ಆದರೆ, ಅವುಗಳನ್ನು ಜನರಿಗೆ ತಲುಪಿಸಿ, ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಅಧಿಕಾರಿ ಗಳ ಪಾತ್ರ ಮಹತ್ವದ್ದು. ಬಾಲ್ಯವಿವಾಹದ ಕುರಿತು ಮಹಿಳೆಯರು ಜಾಗೃತರಾಗಬೇಕು. ಇಲ್ಲಿ ಯಾರೂ ಪುರುಷ ಅಥವಾ ಸ್ತ್ರೀ ವಿರೋಧಿಗಳಲ್ಲ. ಆದರೆ, ಎಲ್ಲರನ್ನೂ ಸಮಾನತೆಯಿಂದ ಕಾಣಬೇಕು ಎನ್ನುವುದು ನಮ್ಮ ಉದ್ದೇಶ. ಮನೆ ನಿರ್ವಹಣೆ, ಮಕ್ಕಳ ರಕ್ಷಣೆ, ಆರೋಗ್ಯ, ಕೈತೋಟ ಇತ್ಯಾದಿ ಪರಿಕಲ್ಪನೆಯನ್ನು ಮೊದಲು ಜಾರಿಗೆ ತಂದದ್ದು ಮಹಿಳೆ. ಓದಿನಿಂದಲೇ ಅಲ್ಲದಿದ್ದರೂ ನಿಜಜೀವನದಲ್ಲಿ ಮಹಿಳೆಯೇ ನಿಜವಾದ ವೈದ್ಯೆ’ ಎಂದರು.

‘ಕೃಷಿಕ ಮಹಿಳೆಯರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರಾಜಕಾರಣಿಗಳು ಅವರ ಮನೆಗೆ ಹೋಗಿ ಸಾಂತ್ವನ ಹೇಳುವ ನೆಪದಲ್ಲಿ ಪ್ರಚಾರ ಪಡೆಯುತ್ತಾರೆಯೇ ವಿನಃ ನಿಜವಾದ ನ್ಯಾಯ ಒದಗಿಸುವುದಿಲ್ಲ. ಮಹಿಳೆಯರು ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ವಾಗಿ ಮುಂದುವರಿ ದಿರುವುದಕ್ಕೆ ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ಮುಖ್ಯ ಕಾರಣ. ಅವರು ಸಂವಿಧಾನದಲ್ಲಿ ರಚಿಸಿದ ಮಹಿಳಾ ಪರವಾದ ಕಾನೂನುಗಳಿಂದ ಇಂದು ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಲು ಸಾಧ್ಯವಾಗಿದೆ’ ಎಂದರು.

ಸಂಸ್ಥೆಯ ನಿರ್ದೇಶಕ ನಾಗರಾಜ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ರೀದೇವಿ ಗದ್ದನಕೇರಿ, ಮೋಹನ್‌ಚಂದ್ರ, ವಕೀಲ ಹನುಮಂತರಾವ್‌, ಡೀಡ್ಸ್‌ ಸಂಸ್ಥೆಯ ನಿರ್ದೇಶಕಿ ಮರ್ಲಿನಾ ಮಾರ್ಟಿಸ್‌, ಯುನಿಸೆಫ್‌ನ ಜಿಲ್ಲಾ ಸಂಯೋಜಕ ಹರೀಶ್‌ ಜೋಗಿ, ಮಕ್ಕಳ ಸಹಾಯವಾಣಿಯ ಶರಣಪ್ಪ ಇದ್ದರು.ಸುಂದರ ಬದುಕು ನಮ್ಮ ಕೈಯಲ್ಲೇ ಇದೆ. ಪರಸ್ಪರ ಎಲ್ಲರೂ ಕೈಜೋಡಿಸಿ ಮಹಿಳಾ ಕಾನೂನುಗಳ ಅರಿವು ಮೂಡಿಸೋಣ ಎಂದು ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಸಾವಿತ್ರಿ ಮುಜುಂದಾರ ಹೇಳಿದರು.

ನಗರದ ಕೃಷಿ ವಿಸ್ತರಣಾ ಕೇಂದ್ರದಲ್ಲಿ ಶುಕ್ರವಾರ ಡೆವಲಪ್‌ಮೆಂಟ್‌ ಎಜುಕೇಷನ್‌ ಸರ್ವೀಸ್‌, ಸರ್ವೋದಯ ಸಮಗ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಆಶ್ರಯದಲ್ಲಿ ನಡೆದ ಪೂರಕ ಕಾನೂನು ಸುಗಮಗಾರರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಈ ಭಾಗ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದಿರು ವುದರಿಂದ ಹಾಗೂ ಸಾಂಪ್ರದಾಯಿಕ ಪದ್ಧತಿಗಳಿಂದ ಅನೇಕ ಬಾಲ್ಯ ವಿವಾಹಗಳು ನಡೆಯುತ್ತಿವೆ. ರಾಜಕಾರಣಿಗಳು ಮಹಿಳಾ ಪರವಾದ ಯೋಜನೆಗಳನ್ನು ಮತ್ತು ಕಾನೂನುಗಳ ಕುರಿತು ಭಾಷಣ ಮಾಡುತ್ತಾರೆ.

ಆದರೆ, ಅವುಗಳನ್ನು ಜನರಿಗೆ ತಲುಪಿಸಿ, ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಅಧಿಕಾರಿ ಗಳ ಪಾತ್ರ ಮಹತ್ವದ್ದು. ಬಾಲ್ಯವಿವಾಹದ ಕುರಿತು ಮಹಿಳೆಯರು ಜಾಗೃತರಾಗಬೇಕು. ಇಲ್ಲಿ ಯಾರೂ ಪುರುಷ ಅಥವಾ ಸ್ತ್ರೀ ವಿರೋಧಿಗಳಲ್ಲ. ಆದರೆ, ಎಲ್ಲರನ್ನೂ ಸಮಾನತೆಯಿಂದ ಕಾಣಬೇಕು ಎನ್ನುವುದು ನಮ್ಮ ಉದ್ದೇಶ. ಮನೆ ನಿರ್ವಹಣೆ, ಮಕ್ಕಳ ರಕ್ಷಣೆ, ಆರೋಗ್ಯ, ಕೈತೋಟ ಇತ್ಯಾದಿ ಪರಿಕಲ್ಪನೆಯನ್ನು ಮೊದಲು ಜಾರಿಗೆ ತಂದದ್ದು ಮಹಿಳೆ. ಓದಿನಿಂದಲೇ ಅಲ್ಲದಿದ್ದರೂ ನಿಜಜೀವನದಲ್ಲಿ ಮಹಿಳೆಯೇ ನಿಜವಾದ ವೈದ್ಯೆ’ ಎಂದರು.

‘ಕೃಷಿಕ ಮಹಿಳೆಯರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರಾಜಕಾರಣಿಗಳು ಅವರ ಮನೆಗೆ ಹೋಗಿ ಸಾಂತ್ವನ ಹೇಳುವ ನೆಪದಲ್ಲಿ ಪ್ರಚಾರ ಪಡೆಯು ತ್ತಾರೆ ಯೇ ವಿನಃ ನಿಜವಾದ ನ್ಯಾಯ ಒದಗಿಸುವುದಿಲ್ಲ. ಮಹಿಳೆಯರು ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ವಾಗಿ ಮುಂದುವರಿ ದಿರುವುದಕ್ಕೆ ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ಮುಖ್ಯ ಕಾರಣ. ಅವರು ಸಂವಿಧಾನದಲ್ಲಿ ರಚಿಸಿದ ಮಹಿಳಾ ಪರವಾದ ಕಾನೂನುಗಳಿಂದ ಇಂದು ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಲು ಸಾಧ್ಯವಾಗಿದೆ’ ಎಂದರು.

ಸಂಸ್ಥೆಯ ನಿರ್ದೇಶಕ ನಾಗರಾಜ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ರೀದೇವಿ ಗದ್ದನಕೇರಿ, ಮೋಹನ್‌ಚಂದ್ರ, ವಕೀಲ ಹನುಮಂತರಾವ್‌, ಡೀಡ್ಸ್‌ ಸಂಸ್ಥೆಯ ನಿರ್ದೇಶಕಿ ಮರ್ಲಿನಾ ಮಾರ್ಟಿಸ್‌್, ಯುನಿಸೆಫ್‌ನ ಜಿಲ್ಲಾ ಸಂಯೋಜಕ ಹರೀಶ್‌ ಜೋಗಿ, ಮಕ್ಕಳ ಸಹಾಯವಾಣಿಯ ಶರಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT