ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿ ಧಾನ್ಯಗಳ ಬಳಕೆ ಹೆಚ್ಚಿಸಲು ಸಲಹೆ

Last Updated 15 ಜುಲೈ 2017, 8:41 IST
ಅಕ್ಷರ ಗಾತ್ರ

ಹುಣಸಗಿ: ‘ಆರೋಗ್ಯವಾಗಿರಲು ಪ್ರತಿಯೊಬ್ಬರು ಪ್ರತಿ ದಿನ ಸಿರಿಧಾನ್ಯಗಳ ಬಳಕೆ ಹೆಚ್ಚು ಬಳಸಬೇಕು’ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಬಸವರಾಜಸ್ವಾಮಿ ಸ್ಥಾವರಮಠ ತಿಳಿಸಿದರು. ಹುಣಸಗಿ ಪಟ್ಟಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕೃಷಿ ಅಭಿಯಾನದ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,
‘ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಈಗಾಗಲೇ ನಾವು ಅತಿಯಾದ ರಾಸಾ ಯನಿಕ ಬಳಕೆಯುಕ್ತ ಆಹಾರ ಸೇವಿಸುತ್ತಿದ್ದೇವೆ.

ಇದರಿಂದ ಜನರಲ್ಲಿ ಅನಾರೋಗ್ಯ ಪ್ರಮಾಣವೂ ಹೆಚ್ಚಾಗತೊಡಗಿದೆ. ಇದಕ್ಕೆ ಸಂಪೂರ್ಣ ಕಡಿವಾಣ ಹಾಕಲು ಕೃಷಿ ಇಲಾಖೆ ಶಿಫಾರಸು  ಮಾಡಿದಂತೆ ಜೋಳ, ರಾಗಿ, ಸಜ್ಜೆ, ನವಣೆಯಂತಹ ಆಹಾರ ಬಳಕೆ ಮಾಡಬೇಕು’ ಎಂದರು.

‘ರೈತರು ಐಎಸ್ಐ ಗುಣಮಟ್ಟ ಇರುವ ಬೀಜ ಮತ್ತು ಕ್ರೀಮಿನಾಶಕ ಖರೀಸಬೇಕು. ಅದಕ್ಕೆ ಪ್ರತಿಯಾಗಿ ಟಿನ್ ನಂಬರ್ ಹೊಂದಿರುವ ರಸೀದಿಯನ್ನು ಪಡೆಯಬೇಕು’ ಎಂದರು. ಕೃಷಿಕ ಸಮಾಜದ ಜಿಲ್ಲಾ ಉಪಾಧ್ಯಕ್ಷ ನಾಗಣ್ಣ ಸಾಹು ಮಾತನಾಡಿ, ‘ನೀರು ಅತ್ಯಮೂಲ್ಯವಾಗಿದ್ದು, ಈ ಬಾರಿ ಮಳೆಯ ಪ್ರಮಾಣ ಕೂಡ ಕ್ಷೀಣಿಸಿದೆ.

ಆದ್ದರಿಂದ ಕೃಷಿಯಲ್ಲಿ ಕಡಿಮೆ ನೀರು ಬಳಕೆ ಮಾಡುವಂತೆ ನೊಡಿಕೊಳ್ಳಬೇಕು. ಅಲ್ಲದೇ ಕೃಷಿ ಇಲಾಖೆ ವತಿಯಿಂದ ಸಹಾಯ ಧನದಡಿ ಒಣಬೇಸಾಯದ ರೈತರು ಕೃಷಿಹೊಂಡಗಳನ್ನು ನಿರ್ಮಿಸಿ ಕೊಳ್ಳಬೇಕು’ ಎಂದರು.

ಕೃಷಿ ಇಲಾಖೆಯ ಅಧಿಕಾರಿ ರಾಜೇಂದ್ರ ಕಿಣಗಿ ಮಾತನಾಡಿ, ‘ಹುಣಸಗಿ ರೈತ ಸಂಪರ್ಕ ಕೇಂದ್ರದಿಂದ ಕೃಷಿ ಅಭಿಯಾನ ಮೂರು ದಿನ ನಡೆ ಯಲಿದೆ. ವಿವಿಧ ಗ್ರಾಮಗಳಲ್ಲಿ ಈ ವಾಹನವು ಸಂಚರಿಸಿ ರೈತರಿಗೆ ಕೃಷಿ ಇಲಾಖೆ ಕುರಿತ ಮಾಹಿತಿ ನೀಡಲಿದೆ. ಭಾನುವಾರ ಕೃಷಿ ವಿಜ್ಞಾನಿ ಹಾಗೂ ರೈತರೊಂದಿಗೆ ಸಂವಾದ ಕಾರ್ಯಕ್ರಮ ಕೂಡಾ ಆಯೋಜಿಸಲಾಗಿದೆ’ ಎಂದು ಹೇಳಿದರು.

ಹುಣಸಗಿ ವಿಶೇಷ ತಹಶೀಲ್ದಾರ್ ಸುರೇಶ ಚವಲ್ಕರ್, ಎಪಿಎಂಸಿ ಸದಸ್ಯ ದೇವಣ್ಣ ಮಲಗಲದಿನ್ನಿ, ಮುಖಂಡರಾದ ಸಂಗಣ್ಣ ವೈಲಿ,ಎಚ್‌.ಎನ್‌ ದೇಸಾಯಿ, ತಿಪ್ಪಣ್ಣ ಚಂದಾ, ಮಲ್ಲಿ ಕಾರ್ಜುನ ಹಿರೇಮಠ, ರಾಚಯ್ಯಸ್ವಾಮಿ, ಎನ್.ಎಂ.ಬಳಿ, ಈರಪ್ಪ ದೇಸಾಯಿ, ಬಸವರಾಜ ಸಜ್ಜನ್, ಮಹಾದೇವಿ ಬೇವಿನಾಳಮಠ, ವೀರಣ್ಣ ಮುದನೂರ, ಗುರು ಮೂರ್ತಿ, ರಾಮು ಸೇರಿದಂತೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT