ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜೋಲಾ ಬಳಸಲು ರೈತರಿಗೆ ಸಲಹೆ

Last Updated 15 ಜುಲೈ 2017, 10:38 IST
ಅಕ್ಷರ ಗಾತ್ರ

ಮಾಗಡಿ: ಹಸಿರು ಮೇವಿಗೆ ಪರ್ಯಾ ಯವಾಗಿ ಅಜೋಲಾ ಬಳಸುವುದರಿಂದ ಹಸುಗಳು ಹೆಚ್ಚು ಹಾಲು ಕೊಡುತ್ತವೆ ಎಂದು ಜಿಕೆವಿಕೆ ಪ್ರಾಧ್ಯಾಪಕ ಡಾ.ವೈ.ಎನ್‌.ಶಿವಲಿಂಗಯ್ಯ ತಿಳಿಸಿದರು. ಜಿಕೆವಿಕೆ ತೃತೀಯ ಕೃಷಿ ಪದವಿ ವಿದ್ಯಾರ್ಥಿಳಿಂದ ನಡೆಯುತ್ತಿರುವ ಕ್ಷೇತ್ರ ಕೃಷಿ ಕಾರ್ಯಾನುಭವ ಕಾರ್ಯಾ ಗಾರದಲ್ಲಿ ಶುಕ್ರವಾರ ರಾತ್ರಿ ರೈತರನ್ನು ಕುರಿತು ಅವರು ಮಾತನಾಡಿದರು.

ಕುರಿ, ಮೇಕೆ, ಕೋಳಿಗಳಿಗೂ ಸಹ ಅಜೋಲಾವನ್ನು ಆಹಾರವಾಗಿ ಬಳಸಬಹುದು, ಭತ್ತದ ಗದ್ದೆಗೆ ಮಿಶ್ರಣ ಮಾಡುವುದರಿಂದ ಸಾರಜನಕದ ಕೊರತೆ ನೀಗಿಸಬಹುದು, ರಸಗೊಬ್ಬರ ಬಳಸುವ ಬದಲು ಅಜೋಲಾ ಬಳಸುವುದನ್ನು ರೈತರು ರೂಡಿಸಿಕೊಳ್ಳಬೇಕು ಎಂದು ತಿಳಿಸಿದರು. 

ವಿದ್ಯಾರ್ಥಿಗಳು 3X2 ಅಡಿ ಗುಂಡಿ ತೆಗೆದು ಅಜೋಲಾ ಉತ್ಪತ್ತಿಯ ಬಗ್ಗೆ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ಜೈವಿಕ ಅನಿಲ ತಯಾರಿಕೆ ಮತ್ತು ಬೀಜೋಪಚಾರದ ಬಗ್ಗೆ ವಿದ್ಯಾರ್ಥಿಗಳು ಪ್ರಾತ್ಯಕ್ಷಿಕೆ ಮಾಡಿ ತೋರಿಸಿದರು, ಸಾತನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಗಂಗರಾಜು, ಮಾಜಿ ಅಧ್ಯಕ್ಷ ಮಂಜುನಾಥ್‌, ರಮೇಶ್‌, ರೈತರು ಜಿಕೆವಿಕೆ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT