ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಕಾರ್ಯ ವೈಖರಿಗೆ ಬೇಸತ್ತ ಜನ

Last Updated 16 ಜುಲೈ 2017, 9:12 IST
ಅಕ್ಷರ ಗಾತ್ರ

ಬಸವನಬಾಗೇವಾಡಿ: ಆರ್‌ಎಸ್‌ಎಸ್‌ ಕಾರ್ಯಕರ್ತ ಶರತ್‌ ಅವರ ಕೊಲೆ ಆರೋಪಿಗಳನ್ನು ಪತ್ತೆ ಹಚ್ಚುವುದು ಸೇರಿದಂತೆ ರಾಜ್ಯದಲ್ಲಿ ನಡೆದ 15ಕ್ಕೂ ಹೆಚ್ಚು ಹತ್ಯೆ ಪ್ರಕರಣ ಪತ್ತೆ ಮಾಡುವಲ್ಲಿ ಕಾಂಗ್ರೆಸ್‌ ಸರ್ಕಾರ ವಿಫಲವಾಗಿದೆ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಆರೋಪಿಸಿದರು.  ಪಟ್ಟಣದಲ್ಲಿ ಶನಿವಾರ ದೀನ್‌ ದಯಾಳ ಉಪಾಧ್ಯಾಯ ಅವರ ಜನ್ಮಶತ ಮಾನೋತ್ಸವದ ಅಂಗವಾಗಿ ಭಾರ ತೀಯ ಜನತಾ ಪಕ್ಷ ಹಮ್ಮಿಕೊಂಡಿರುವ ವಿಸ್ತಾರಕ ಕಾರ್ಯಕ್ರಮದ ಅಂಗವಾಗಿ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡ ನಂತರ ಸುದ್ಧಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕೋಮುವಾದ ಸೃಷ್ಟಿಸುತ್ತಿರುವ ಕಾಂಗ್ರೆಸ್‌ ಸರ್ಕಾರಕ್ಕೆ ಇನ್ನು ಉಳಿಗಾಲ ಇಲ್ಲ. ಮುಸ್ಲಿಮರು ಜಾಗೃತರಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಬುದ್ದಿ ಕಲಿಸಿದಂತೆ ಕರ್ನಾಟಕದಲ್ಲೂ ಬುದ್ದಿ ಕಲಿಸಲಿದ್ದಾರೆ ಎಂದು ಹೇಳಿದರು. ಹಿಂದಿನ ಯುಪಿಎ ಸರ್ಕಾರ ರೈತರಿಗೆ ಸುಮಾರು ಅತಿ ಹೆಚ್ಚು ಅಂದರೆ ₹ 387 ಕೋಟಿ ಬೆಳೆವಿಮೆ ಪರಿಹಾರ ನೀಡಿತ್ತು. ಆದರೆ ನರೇಂದ್ರಮೋದಿ ಅವರ ಕೇಂದ್ರ ಸರ್ಕಾರ ಮುಂಗಾರು ಹಂಗಾಮಿಗೆ ₹ 1685 ಕೋಟಿ, ಹಿಂಗಾರು ಹಂಗಾಮಿ ಗಾಗಿ ₹ 795 ಕೋಟಿ ಮಂಜೂರು ಮಾಡುವ ಮೂಲಕ ಅತಿ ಹೆಚ್ಚು ಪರಿಹಾರ ಮೊತ್ತವನ್ನು ನೀಡಿದೆ. ಆದರೆ ರಾಜ್ಯದ ಕಾಂಗ್ರೆಸ್‌ ಸರ್ಕಾರ ರೈತರಿಗೆ ಸಮರ್ಪಕವಾಗಿ ಪರಿಹಾರ ತಲುಪಿಸು ತ್ತಿಲ್ಲ. ಕೇಂದ್ರ ಸರ್ಕಾರದ ಅನುದಾನ ವನ್ನು ಸಮರ್ಪಕವಾಗಿ ಬಳಸಿಕೊಳ್ಳ ಬೇಕು ಎಂದು ಹೇಳಿದರು.

ದೀನ್‌ ದಯಾಳ ಉಪಾಧ್ಯಾಯ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ರಾಜ್ಯದಾದ್ಯಂತ ವಿಸ್ತಾರಕ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಪಕ್ಷದ ಮುಖಂಡರು, ಕಾರ್ಯಕರ್ತರು ಪ್ರತಿ ಮನೆಗೆ ತೆರಳಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರದ ಸಾಧನೆಗಳನ್ನು ತಿಳಿಸುವಂತಹ ಕೆಲಸ ವನ್ನು ಕಾರ್ಯಕರ್ತರು ಮಾಡುತ್ತಿದ್ದಾರೆ. ಅಲ್ಲದೇ ಕಾಂಗ್ರೆಸ್‌ ಸರ್ಕಾರದ ವೈಫಲ್ಯಗಳನ್ನು ತಿಳಿಸಲಾಗುತ್ತಿದೆ. ಈ ವಿಸ್ತಾರಕ ಕಾರ್ಯಕ್ರಮದಲ್ಲಿ ಕಾರ್ಯಕರ್ತರು ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದಾರೆ. ಜನರಿಂದ ನಿರೀಕ್ಷೆ ಮೀರಿ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಹೇಳಿದರು.

ಸುದ್ಧಿಗೋಷ್ಠಿಯಲ್ಲಿ ಮಾಜಿ ಸಚಿವ ಎಸ್‌.ಕೆ.ಬೆಳ್ಳುಬ್ಬಿ, ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸಂಗರಾಜ ದೇಸಾಯಿ, ಉಪಾಧ್ಯಕ್ಷ ಸೋಮನಗೌಡ ಪಾಟೀಲ (ಸಾಸನೂರ), ಕಾರ್ಯದರ್ಶಿ ಜಗದೀಶ ಕೊಟ್ರಶೆಟ್ಟಿ, ಮಂಡಲ ಅಧ್ಯಕ್ಷ ಬಿ.ಕೆ.ಕಲ್ಲೂರ,  ಸಂಗನಗೌಡ ಚಿಕ್ಕೊಂಡ, ಗೋಪಾಲ ಚಿಂಚೋಳಿ, ಡಾ.ಕರು ಣಾಕರ ಚೌಧರಿ ಮುತ್ತು ಚಿಕ್ಕೊಂಡ, ಮಲ್ಲು ಶೇಬಗೊಂಡ, ವಿವೇಕ ಡಬ್ಬಿ, ಸಾವಿತ್ರಿ ಕಲ್ಯಾಣಶೆಟ್ಟಿ, ಸ್ವರೂಪರಾಣಿ ಬಿಂಜಲಬಾವಿ, ಕಸ್ತೂರಿ ಮೋಕಾಶಿ ಇತರರು ಇದ್ದರು.

‘ದಲಿತರ ಪರ ಎನ್ನುವ ರಾಜ್ಯ ಸರ್ಕಾರ ಮಾಡಿದ್ದೇನು?’
ನಿಡಗುಂದಿ: ದಲಿತರಿಗೆ ಸೇರಿದೆನ್ನಲಾದ ಜಾಗವನ್ನು ಅನ್ಯ ಕೋಮಿನವರು ಕಬಳಿಸಿದ್ದಾರೆ ಎಂದು ಆರೋಪಿಸಿ ದಲಿತರು ನಡೆಸುತ್ತಿರುವ ಧರಣಿ ಸತ್ಯಾ ಗ್ರಹ ಎರಡು ದಿನ ಪೂರ್ಣಗೊಳಿಸಿತು. ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಭೇಟಿ ನೀಡಿ ಧರಣಿಗೆ ಬೆಂಬಲ ವ್ಯಕ್ತಪಡಿಸಿದರು. ನಂತರ ಈಶ್ವರಪ್ಪ ಮಾತನಾಡಿ, ‘ಎರಡು ದಿನದಿಂದ ದಲಿತರು ಹೋರಾಟ ನಡೆಸುತ್ತಿದ್ದರೆ ಯಾವುದೇ ಅಧಿಕಾರಿ ಭೇಟಿ ನೀಡಿ ಅವರ ಸಮಸ್ಯೆ ಆಲಿಸುವ ಪ್ರಯತ್ನ ನಡೆಸಿಲ್ಲ. ದಲಿತ ಪರ ಎಂದು ಹೇಳುವ ರಾಜ್ಯ ಸರ್ಕಾರ, ಇಲ್ಲಿ ದಲಿತರಿಗೆ ಆದ ಅನ್ಯಾಯದ ಬಗ್ಗೆ ಯಾವ ಕ್ರಮ ಕೈಗೊಂಡಿದೆ’ ಎಂದು ಪ್ರಶ್ನಿಸಿದರು.

‘ಈ ವಿಷಯದ ಕುರಿತು ಸರ್ಕಾರ ತುರ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕಂದಾಯ, ಸಮಾಜ ಕಲ್ಯಾಣ ಸಚಿವರು ಹಾಗೂ ಮುಖ್ಯಮಂತ್ರಿಗೆ ಪತ್ರ ಬರೆಯು ವುದಾಗಿ’ ಈಶ್ವರಪ್ಪ ಹೇಳಿದರು. ದಲಿತರ ಬೇಡಿಕೆಗೆ ರಾಜ್ಯ ಸರ್ಕಾರ ಸ್ಪಂದಿಸದಿ ದ್ದರೆ ಬಿಜೆಪಿ ತಾಲ್ಲೂಕು ಘಟಕ ಹಾಗೂ ಜಿಲ್ಲಾ ಘಟಕದಿಂದಲೇ ಹೋರಾಟ ನಡೆಸಲಾಗುವುದು ಎಂದರು. ಶಿವಾನಂದ ಅವಟಿ, ಮಲಕೇಂದ್ರ ಗೌಡ ಪಾಟೀಲ, ಮಂಗಳಾದೇವಿ ಬಿರಾ ದಾರ, ಪ್ರಹ್ಲಾದ ಪತ್ತಾರ, ಎಸ್.ಟಿ. ಗೌಡರ, ಸಿದ್ರಾಮೇಶ ಅರಮನಿ, ಬಾಲಚಂದ್ರ ನಾಗರಾಳ, ಶಿವಾನಂದ ಮುಚ್ಚಂಡಿ, ನೀಲು ನಾಯಕ, ಪ್ರಶಾಂತ ಚಲವಾದಿ ಇದ್ದರು.

ಬೆಂಬಲ: ಪಟ್ಟಣ ಪಂಚಾಯ್ತಿ ಅಧ್ಯಕ್ಷ ಸಂಗಮೇಶ ಬಳಿಗಾರ ನೇತೃತ್ವದಲ್ಲಿ ಪರಶುರಾಮ ಕಾರಿ, ಶೇಖರ ರೂಡಗಿ, ಬಸಯ್ಯ ಸಾಲಿಮಠ ಧರಣಿ ಸ್ಥಳಕ್ಕೆ ಬಂದು, ಬೆಂಬಲ ವ್ಯಕ್ತಪಡಿಸಿದರು. ಕರವೇ (ಪ್ರವೀಣ ಶೆಟ್ಟಿ ಬಣ) ಹಲವು ಕಾರ್ಯಕರ್ತರು ದಲಿತರ ಹೋರಾಟಕ್ಕೆ ಬೆಂಬಲಿಸಿ ನಿಡಗುಂದಿ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಹ್ಲಾದ ಪತ್ತಾರ ನೇತೃತ್ವದಲ್ಲಿ ಪಟ್ಟಣದಲ್ಲಿ ಮೆರವಣಿಗೆ ನಡೆಸಿ, ಇಡೀ ದಿನ ಪ್ರತಿಭಟನೆಯಲ್ಲಿ ಪಾಲ್ಗೊಂಡರು. 2ನೇ ದಿನದ ಸತ್ಯಾಗ್ರಹದಲ್ಲಿ ಶಂಕರ ವಡವಡಗಿ, ಸಿಂಧೂರ ಭೈರವಾಡಗಿ, ಬಸವರಾಜ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT