ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಕೊರತೆ: ಒಣಗುತ್ತಿದ್ದ 12 ಎಕರೆ ಕಬ್ಬು ನಾಶಪಡಿಸಿದ ರೈತ

Last Updated 16 ಜುಲೈ 2017, 9:21 IST
ಅಕ್ಷರ ಗಾತ್ರ

ರಾಣೆಬೆನ್ನೂರು: ತಾಲ್ಲೂಕಿನ ಮುಷ್ಟೂರು ರೈತ ರವೀಂದ್ರಗೌಡ ಪಾಟೀಲ ಅವರು ಮಳೆ ಕೊರತೆಯಿಂದ ಒಣಗುತ್ತಿದ್ದ 12 ಎಕರೆಯಲ್ಲಿದ್ದ  ಕಬ್ಬನ್ನು ಟ್ರ್ಯಾಕ್ಟರ್‌ನಿಂದ ಹರಗಿ ಶುಕ್ರವಾರ ನಾಶ ಪಡಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು, ‘ಕುಮದ್ವತಿ ನದಿಯಲ್ಲಿ ನೀರಿಲ್ಲ. ಕೊಳವೆ ಬಾವಿಯ ನೀರೂ ಸಾಲುತ್ತಿಲ್ಲ. ಇದರಿಂದ ಕಬ್ಬು ಒಣಗಿದ್ದರಿಂದ ಬೆಳೆ ನಾಶ ಅನಿವಾರ್ಯವಾಯಿತು’ ಎಂದರು.

‘ಸತತ ನಾಲ್ಕು ವರ್ಷಗಳಿಂದ ಬರಗಾಲ ಎದುರಾಗಿದೆ. ಕೇವಲ ಸೊಸೈಟಿ ಸಾಲ ಮನ್ನಾ ಮಾಡಿದರೆ, ಸಾಲದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಟ್ಟಾಗಿ ರೈತರ ನೆರವಿಗೆ ಧಾವಿಸಬೇಕು’ ಎಂದು ಅವರು ಮನವಿ ಮಾಡಿದರು.

ಸಿದ್ದಪ್ಪ ಕೋಣನತೆಲಿ, ಸುರೇಸಪ್ಪ ತಳವಾರ, ಜಮಾಲಸಾಬ್ ಶೇತಸನದಿ, ಹರಿಹರಗೌಡ ಪಾಟೀಲ, ಬಸವರಾಜ ಯಲ್ಲಕ್ಕನವರ, ಹನುಮಂತಪ್ಪ ಉಕ್ಕುಂದ, ಅಲ್ಲಭಕ್ಷ ಸೇತಸನದಿ, ಬಸಪ್ಪ ಮಾಳಗೇರ, ರಾಮಚಂದ್ರ ಯಲ್ಲಕ್ಕನವರ, ಜಗದೀಶ ಜಾನಪ್ಪನವರ, ಹನುಮಂತಪ್ಪ ಯಲ್ಲಕ್ಕನವರ, ಪರಶುರಾಮ ಕಮ್ಮಾರ, ರಾಮಪ್ಪ ಮುಷ್ಟೂರನಾಯಕ, ಮಂಜಪ್ಪ ಮಾಳಗೇರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT