ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂದು ಕೊರತೆ

Last Updated 16 ಜುಲೈ 2017, 19:30 IST
ಅಕ್ಷರ ಗಾತ್ರ

ರಸ್ತೆ ವಿಭಜಕ ನಿರ್ಮಿಸಿ

ವಿಜಯನಗರಕ್ಕೆ ಸೇರಿದ ಪ್ರಶಾಂತನಗರ ಬಡಾವಣೆ ಶೋಭಾ ಆಸ್ಪತ್ರೆ ವೃತ್ತವು ಸದಾ ವಾಹನ ದಟ್ಟಣೆಯಿಂದ ಕೂಡಿದ ವೃತ್ತವಾಗಿದೆ. ಆದುದರಿಂದ ಈ ವೃತ್ತದಿಂದ ಎಡ ಭಾಗದ ದಕ್ಷಿಣ ದಿಕ್ಕಿಗೂ ಹಾಗೂ ಪಟ್ಟೇಗಾರಪಾಳ್ಯಕ್ಕೆ ವಾಹನಗಳು ಹಾದು ಹೋಗುವ ಪಶ್ಚಿಮ ದಿಕ್ಕಿಗೂ ರಸ್ತೆ ವಿಭಜಕವನ್ನು ನಿರ್ಮಿಸಬೇಕು.

ಸಂಬಂಧಿಸಿದ ಸ್ಥಳೀಯ ಶಾಸಕರು ಹಾಗೂ ನಗರಸಭೆ ಸದಸ್ಯರು ಇತ್ತ ಗಮನಹರಿಸಿ, ನಾಗರಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ.
⇒ಬಿ.ಎಂ. ಉಮಾಪತಿ, ಕಾಟನ್‌ಪೇಟೆ

ಟವರ್‌ ಸ್ಥಳಾಂತರ ಮಾಡಿ

ಚಿಕ್ಕಬಾಣಾವರ ಗ್ರಾಮ ಪಂಚಾಯಿತಿ ಪಕ್ಕದಲ್ಲೇ ಬಿಎಸ್ಎನ್‌ಎಲ್‌ ಟವರ್ ಸ್ಥಾಪಿಸಲಾಗಿದೆ. ಟವರ್‌ಗಳನ್ನು ಜನವಸತಿ ಪ್ರದೇಶದಲ್ಲಿ ಸ್ಥಾಪಿಸಬಾರದು ಎನ್ನುವ ಕಾನೂನು ಇದೆ. ಟವರ್‌ಗಳಿಂದ ಹೊರಹೊಮ್ಮುವ ವಿಕಿರಣಗಳು ಪುಟ್ಟ ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ.

ದುರಾದೃಷ್ಟವೇಂದರೆ ಈ ಟವರ್‍ನ್ನು ಜನವಸತಿ ಪ್ರದೇಶದ ಮಧ್ಯದಲ್ಲಿ ಸ್ಥಾಪಿಸಲಾಗಿದೆ. ಇಲ್ಲಿ ಸುಮಾರು 150 ಮನೆಗಳಿವೆ. ಹತ್ತು ವರ್ಷಕ್ಕೂ ಕೆಳಗಿನ 200 ಮಕ್ಕಳಿದ್ದಾರೆ. ಟವರ್‌ನಿಂದ ಅನತಿ ದೂರದಲ್ಲಿ ಅಂಗನವಾಡಿ ಕೇಂದ್ರವಿದೆ. ಈ ಟವರ್‍ ತೆರವುಗೊಳಿಸಬೇಕು ಎಂದು ಗ್ರಾಮಸ್ಥರು ಐದು ವರ್ಷಗಳಿಂದ ದುಂಬಾಲುಬಿದ್ದರೂ ತೆರವುಗೊಳಿಸಲು ಅಧಿಕಾರಿಗಳು ಮನಸ್ಸು ಮಾಡಿಲ್ಲ. ಅಧಿಕಾರಿಗಳು ತೋರಿಸುತ್ತಿರುವ ಅಸಡ್ಡೆಯಿಂದ ಮಕ್ಕಳ ಅರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.

ಕಳೆದ ಎರಡು ವರ್ಷಗಳಿಂದ ಇಲ್ಲಿ ನಾಲ್ಕು ಅಂಗವಿಕಲ ಮಕ್ಕಳ ಜನನವಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಇದನ್ನು ತೆರೆವುಗೊಳಿಸಬೇಕಾಗಿ ಕೇಳಿಕೊಳ್ಳುತ್ತೇವೆ.

⇒ಸಿ.ಎಸ್.ನಿರ್ವಾಣ ಸಿದ್ದಯ್ಯ
ಚಿಕ್ಕಬಾಣಾವರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT