ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಹಕರ ಹಿತರಕ್ಷಿಸುವ ರೇರಾ: ಕ್ರೆಡಾಯ್‌

Last Updated 16 ಜುಲೈ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ರಿಯಲ್ ಎಸ್ಟೇಟ್‌ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆಯನ್ನು (ರೇರಾ) ಜಾರಿಗೆ ತಂದಿರುವುದನ್ನು  ಕ್ರೆಡಾಯ್‌ ಬೆಂಗಳೂರು ಸ್ವಾಗತಿಸಿದೆ.

ಈ ಕಾಯ್ದೆ ರಾಜ್ಯದಲ್ಲಿ ಈಗಾಗಲೇ ಮನೆ ಖರೀದಿಸಿರುವ ಮತ್ತು ಭವಿಷ್ಯದಲ್ಲಿ ಮನೆ ಖರೀದಿಸಲಿರುವ ಗ್ರಾಹಕರ ಹಿತರಕ್ಷಣೆ ಮಾಡಲಿದೆ ಹೇಳಿದೆ.

‘ಕಾಯ್ದೆಯಲ್ಲಿ ಫ್ಲ್ಯಾಟ್‌ ಏರಿಯಾದ ವಿಸ್ತೀರ್ಣ ಮಿತಿಯನ್ನು 500 ಚದರ ಅಡಿಯಿಂದ 100 ರಿಂದ 150ಕ್ಕೆ ಇಳಿಕೆ ಮಾಡಿದ್ದರೆ ವಂಚನೆ ತಡೆಯಲು ಸಾಧ್ಯವಾಗುತ್ತಿತ್ತು’ ಎಂದು ಕ್ರೆಡಾಯ್‌ ಬೆಂಗಳೂರಿನ ಅಧ್ಯಕ್ಷ ಆಶಿಶ್ ಪುರವಂಕರ ಅಭಿಪ್ರಾಯಪಟ್ಟಿದ್ದಾರೆ.

‘ನಿರ್ಮಾಣ ಹಂತದ  ಯೋಜನೆಗಳು ಸಹ ರೇರಾ ವ್ಯಾಪ್ತಿಗೆ ಬರುತ್ತವೆ.  ಬಡಾವಣೆ ಅಥವಾ ಅಪಾರ್ಟ್‌ಮೆಂಟ್‌ ಯೋಜನೆಗಳಲ್ಲಿ ಶೇ 60 ರಷ್ಟು ನಿವೇಶನ ಅಥವಾ ಫ್ಲ್ಯಾಟ್‌ಗಳನ್ನು ಗ್ರಾಹಕರಿಗೆ ಕ್ರಯಪತ್ರ ಮಾಡಿಕೊಟ್ಟ ಯೋಜನೆ  ಗಳಿಗೆ  ಮಾತ್ರ ನಿಯಮಗಳು ಅನ್ವಯಿಸುವುದಿಲ್ಲ ಎಂದು ರಾಜ್ಯ ಸರ್ಕಾರದ ಆದೇಶದಲ್ಲಿ ಇದೆ. ಈ ಬಗ್ಗೆ ಗೊಂದಲ ಬೇಡ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT