ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಲಾವಿದರಿಗೆ ಮನ್ನಣೆ ದೊರೆಯಲಿ’

Last Updated 17 ಜುಲೈ 2017, 5:20 IST
ಅಕ್ಷರ ಗಾತ್ರ

ಕಲಬುರ್ಗಿ: ‘ಕಲೆ ಹೃದಯದಿಂದ ಹೊರಹೊಮ್ಮುವ ಅಭಿವ್ಯಕ್ತಿ ಮಾಧ್ಯಮ. ಕಲೆ, ಕಲಾವಿದರಿಗೆ ಸಾರ್ವಜನಿಕ ಮನ್ನಣೆ ದೊರೆಯಬೇಕು’ ಎಂದು ಮಾಜಿ ಶಾಸಕ ಎಂ.ವೈ. ಪಾಟೀಲ ಹೇಳಿದರು. ಇಲ್ಲಿನ ಸೇಡಂ ರಸ್ತೆಯ ಚೈತನ್ಯಮಯಿ ಕಲಾ ಗ್ಯಾಲರಿಯಲ್ಲಿ ಎ.ಜಿ. ನೆಲ್ಲಗಿ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.

ಚಿತ್ರಕಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಶಿವಾನಂದ ಕೊಪ್ಪದ ಮಾತನಾಡಿ, ‘ಹಿಂದೆ ಕಲಾವಿದರಿಗೆ ರಾಜಾಶ್ರಯ ಸಿಗುತ್ತಿತ್ತು. ಆದರೆ, ಈಗ ಸಾರ್ವಜನಿಕರ ಬೆಂಬಲವೇ ಕಡಿಮೆಯಾಗುತ್ತಿದೆ. ಕಲೆ, ಕಲಾವಿದರಿಗೆ ಪ್ರೋತ್ಸಾಹ ಅಗತ್ಯವಾಗಿದೆ’ ಎಂದು ಪ್ರತಿಪಾದಿಸಿದರು.

ಚೈತನ್ಯಮಯಿ ಆರ್ಟ್ ಕಲಾ ಗ್ಯಾಲರಿಯ ನಿರ್ದೇಶಕ ಎ.ಎಸ್.ಪಾಟೀಲ ಮಾತನಾಡಿ, ‘ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ (ಎಚ್‌ಕೆಆರ್‌ಡಿಬಿ) ಈ ಭಾಗದ ಕಲಾವಿದರ ಕಲಾಕೃತಿಗಳನ್ನು ಖರೀದಿಸಬೇಕು. ಈ ಸಂಬಂಧ ಮಂಡಳಿಯ ಅಧ್ಯಕ್ಷರಿಗೆ ಶೀಘ್ರದಲ್ಲಿಯೇ ಮನವಿ ಸಲ್ಲಿಸಲಾಗುವುದು’ ಎಂದರು.

ಅತಿಥಿಗಳಾಗಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಭವಾನಿಸಿಂಗ್ ಠಾಕೂರ, ಪತ್ರಕರ್ತ ಹಣಮಂತರಾವ ಭೈರಾಮಡಗಿ ಮಾತನಾಡಿದರು. ಹಿರಿಯ ಕಲಾವಿದರಾದ ಕೆ.ಎಸ್.ಸರೋದೆ, ಡಿ.ಎಂ. ಮಿಣಜಗಿ, ಅಂಬಾರಾಯ ಚಿನಮಳ್ಳಿ, ಎಂ.ಸಂಜೀವ, ಡಾ.ರೆಹಮಾನ ಪಟೇಲ್‌, ಸೂರ್ಯಕಾಂತ ನಂದೂರ, ಶಶಿಕಾಂತ ಪಾಟೀಲ, ನಾರಾಯಣ ಜೋಶಿ ಇದ್ದರು.

ಕಲಾವಿದ ಎ.ಜಿ.ನೆಲ್ಲಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದೌಲತರಾಯ ಎಸ್.ದೇಸಾಯಿ ನಿರೂಪಿಸಿದರು. ಜುಲೈ 18ರ ವರೆಗೆ ಕಲಾಕೃತಿಗಳ  ಪ್ರದರ್ಶನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT