ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಯವ ಕೃಷಿಗೆ ಆದ್ಯತೆ ನೀಡಲು ಸಲಹೆ

Last Updated 17 ಜುಲೈ 2017, 5:29 IST
ಅಕ್ಷರ ಗಾತ್ರ

ಕಕ್ಕೇರಾ: ಕೃಷಿ ಇಲಾಖೆ ವತಿಯಿಂದ ದೇವತ್ಕಲ್ ಗ್ರಾಮ ಪಂಚಾಯಿತಿ ಆವರಣದಲ್ಲಿ ಈಚೆಗೆ ‘ಇಲಾಖೆಗಳ ನಡಿಗೆ ರೈತರ ಮನೆಬಾಗಿಲಿಗೆ’ ಕಾರ್ಯಕ್ರಮಹಾಗೂ ರೈತರೊಂದಿಗೆ ವಿಜ್ಞಾನಿಗಳ ಸಂವಾದ ನಡೆಯಿತು. ತಾಲ್ಲೂಕು ಪಂಚಾಯಿತಿ ಸದಸ್ಯ ನಂದನಗೌಡ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು.

ತಾಲ್ಲೂಕು ಸಹಾಯಕ ಕೃಷಿ ಅಧಿಕಾರಿ ಮಹಾದೇವಪ್ಪ ಮಾತನಾಡಿ, ‘ಪ್ರತಿಯೊಬ್ಬ ರೈತರು ತಮ್ಮ ಜಮೀನಿನಲ್ಲಿ  ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಎರೆಹುಳು ಗೊಬ್ಬರ,  ಹಸಿ ರೆಲೆ ಗೊಬ್ಬರ ಬಳಸಿ ಭೂಮಿಯ ಫಲ ವತ್ತತೆ ಕಾಪಾಡಬೇಕು’ ಎಂದರು.

‘ಸಾವಯವ ಕೃಷಿ ಪದ್ಧತಿಯಿಂದ ಭೂಮಿಯ ಇಳುವರಿ ಹೆಚ್ಚುವುದಲ್ಲದೇ ಆರ್ಥಿಕ ಹೊರೆಯನ್ನು ತಪ್ಪಿಸಬಹುದು. ಇಲಾಖೆಗಳಿಂದ ದೊರೆಯುವ ಯಂತ್ರೋಪಕರಣ, ಹನಿ ನೀರಾವರಿ ಘಟಕ ನಿರ್ಮಾಣಕ್ಕೆ ನೆರವು ಪಡೆಯಬಹುದು’ ಎಂದು ಹೇಳಿದರು.

‘ತಾಲ್ಲೂಕಿನ ಎಲ್ಲಾ ಹೋಬಳಿ ಕೇಂದ್ರಗಳಲ್ಲಿ ರೈತರಿಗೆ ಮುಂಗಾರು ಬಿತ್ತನೆಗೆ ಅಗತ್ಯವಿರುವ ಬೀಜೋತ್ಪಾನ ಗಳನ್ನು ಒದಗಿಸಲಾಗಿದ್ದು, ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಪಡೆಯಬಹುದು. ಇಲಾಖೆಯ ಸೌಲಭ್ಯ ಪಡೆಯಲು ಎಲ್ಲಾ ರೈತರು ಕಿಸಾನ್ ಕಾರ್ಡ್‌ ಮಾಡಿಸಿ ಕೊಳ್ಳಬೇಕು’ ಎಂದು ಸಲಹೆ ನೀಡಿದರು.

ರೈತರೊಂದಿಗೆ ಸಂವಾದ ನಡೆಸಿದ ವಿಜ್ಞಾನಿ ಡಾ. ಮೋಹನ ಚವ್ಹಾಣ, ಹತ್ತಿ ಬೇಸಾಯ ಕ್ರಮಗಳ ಕುರಿತು ವಿವರಿಸಿದರು. ಡಾ. ರಾಜಕುಮಾರ ಅವರು, ಸವಳು-ಜವಳು ಭೂಮಿಯ ನಿರ್ವಹಣೆ ಹಾಗೂ ನೀರಿನ ಸದ್ಬಳಕೆ ಕುರಿತು ತಿಳಿಸಿಕೊಟ್ಟರು. ರೈತರಿಗೆ ಮಣ್ಣು ಪರೀಕ್ಷೆ ರಸೀದಿ ವಿತರಿಸಲಾಯಿತು.

ಸ್ಪ್ರೇಯರ್, ಖಾರಕುಟ್ಟುವ, ಶ್ಯಾವಿಗೆ ಯಂತ್ರಗಳು, ಡಿಸೇಲ್ ಎಂಜನ್, ಸ್ಲೀಂಕ ರ್ಸೆಟ್, ಮೆಕ್ಕೆಜೋಳ, ಸಜ್ಜೆ, ಹತ್ತಿ, ತೊಗರಿ, ವಿವಿಧ ತಳಿಗಳ ಬೀಜಗಳು ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ಸಂಬಂಧಿಸಿದ ಯಂತ್ರೋಪಕರಣಗಳು ಕೃಷಿ ವಸ್ತು ಪ್ರದರ್ಶನದಲ್ಲಿ ಇಡಲಾಗಿತ್ತು.

ಅಧ್ಯಕ್ಷತೆಯನ್ನು ಹಣಮಂತ್ರಾಯ ಮಾರಲಭಾವಿ ವಹಿಸಿದ್ದರು. ಜಿ.ಪಂ ಮಾಜಿ ಅಧ್ಯಕ್ಷ ಯಲ್ಲಪ್ಪ ಕುರಕುಂದಿ, ತಾಪಂ ಸದಸ್ಯರಾದ ಭೀಮ ರಾಯ ಮೂಲಿಮನಿ, ಮಲ್ಲಿಕಾರ್ಜುನ ಸಾಹು ಕಾರ, ಭೀಮಾನಾಯ್ಕ ಸೇರಿದಂತೆ ವಲ ಯದ ಆಲ್ದಾಳ, ಹೆಬ್ಬಾಳ ಕಾಮನಟಗಿ, ಗೆದ್ದಲಮರಿ, ತಿಂಥಣಿ ಗ್ರಾಮ ಪಂಚಾಯತ ವ್ಯಾಪ್ತಿಯ ಅನೇಕ ಗ್ರಾಮಗಳಿಂದ ನೂರಾರು ರೈತರು ಹಾಜರಿ ದ್ದರು. ಎಸ್.ಜಿ.ಬಿರಾದಾರ ನಿರೂಪಿಸಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT