ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಟೋಬರ್‌ನಲ್ಲಿ 22 ಕೆರೆಗಳಿಗೆ ನೀರು

Last Updated 17 ಜುಲೈ 2017, 5:58 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲೆಯ ಐದು ತಾಲ್ಲೂಕು ಸೇರಿದಂತೆ, ನೆರೆಯ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಕೆಲ ಭಾಗದ ಜಮೀನುಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಚಿಮ್ಮಲಗಿ ಏತ ನೀರಾವರಿ ಯೋಜನೆಯ ಕಾಮಗಾರಿಗಳು ಭರದಿಂದ ನಡೆದಿವೆ.

ಅಕ್ಟೋಬರ್ ಮೊದಲ ವಾರದಲ್ಲಿ ಈ ಯೋಜನೆ ವ್ಯಾಪ್ತಿಯಲ್ಲಿ ಬರುವ 22 ಕೆರೆಗಳಿಗೆ ನೀರು ತುಂಬಿಸುವ ಉದ್ದೇಶಿತ ಗುರಿಯೊಂದಿಗೆ ಕಾಮಗಾರಿ ಶರವೇಗದಲ್ಲಿ ಸಾಗಿದೆ.
ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಭಾನುವಾರ ಕಾಮಗಾರಿ ಪ್ರದೇಶಗಳಿಗೆ ಭೇಟಿ ನೀಡಿ, ಸ್ಥಳೀಯರೊಟ್ಟಿಗೆ ಮಾತುಕತೆ ನಡೆಸಿ ದರು. ಗ್ರಾಮಸ್ಥರ ಅಹವಾಲು ಆಲಿಸಿ ದರು. ಯೋಜನೆಗೆ ಎಲ್ಲೆಲ್ಲಿ ಅಡ್ಡಿಯಿದೆ ಎಂಬುದನ್ನು ತಿಳಿದು, ಸ್ಥಳದಲ್ಲೇ ಬಗೆಹರಿಸುವ ಯತ್ನ ನಡೆಸಿದರು.

ಚಿಮ್ಮಲಗಿ ಏತ ನೀರಾವರಿ ಯೋಜನೆಯಡಿ ಪೂರ್ವ ಮುಖ್ಯ ಕಾಲುವೆ ಕಾಮಗಾರಿ 0 ಕಿ.ಮೀ.ಯಿಂದ 50 ಕಿ.ಮೀಯವರೆಗೆ ಸಂಪೂರ್ಣ ಗೊಂಡಿದೆ, 50 ಕಿ.ಮೀ.ಯಿಂದ 137 ಕೀ.ಮಿ.ವರೆಗೆ ಕಾಲುವೆ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದೆ.

ಕಾಲುವೆ ಕಾಮಗಾರಿಗಳ ವೀಕ್ಷಣೆಯ ದಾರಿಯುದ್ದಕ್ಕೂ ಸಚಿವರನ್ನು ಭೇಟಿ ಯಾದ ರೈತರು ಸಮಸ್ಯೆ, ಅಹವಾಲು ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಸಚಿವರು ‘ಯಾವುದೇ ಕಾರಣಕ್ಕೂ ಅನ್ಯಾಯ ವಾಗಲು ಅವಕಾಶ ನೀಡಲ್ಲ’ಎಂಬ ಭರವಸೆ ನೀಡಿದರು.

ರಾಜ್ಯ ಸರ್ಕಾರದ ನವದೆಹಲಿ ವಿಶೇಷ ಪ್ರತಿನಿಧಿ ಸಿ.ಎಸ್‌.ನಾಡಗೌಡ, ಜಲಸಂಪನ್ಮೂಲ ಇಲಾಖೆಯ ಉಪ ಕಾರ್ಯದರ್ಶಿ ಅನಿಲಕುಮಾರ ಮುರಡಿ, ತಾಂತ್ರಿಕ ಸಲಹೆಗಾರ ಪ್ರೊ.ಅರವಿಂದ ಗಲಗಲಿ ಹಾಜರಿದ್ದರು.

ಫಲಾನುಭವಿ ಪ್ರದೇಶ: ಮುದ್ದೇಬಿಹಾಳ ತಾಲ್ಲೂಕಿನ 34365, ಬಸವನ ಬಾಗೇ ವಾಡಿ–6113, ಸಿಂದಗಿ–12753, ಇಂಡಿ– 1968, ವಿಜಯಪುರ–25033, ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ 708 ಹೆಕ್ಟೇರ್ ಪ್ರದೇಶ ನೀರಾವರಿ ವ್ಯಾಪ್ತಿಗೊಳಪಡಲಿದೆ.

ತರಾಟೆ: ಕೊಣ್ಣೂರ, ಪಡೇಕನೂರ ಗ್ರಾಮದ ರೈತರ ಜಮೀನುಗಳ ಪೋಡಿ ವಿಳಂಬ ಮಾಡು ತ್ತಿರುವುದಕ್ಕೆ ಸಚಿವ ಎಂ.ಬಿ.ಪಾಟೀಲ, ಮುದ್ದೇಬಿಹಾಳ ತಹಶೀಲ್ದಾರ್ ಎಂಎಎಸ್‌ ಬಾಗವಾನ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

‘ರೈತರು ಪೋಡಿಗೆ ಯಾವಾಗ ಮನವಿ ಮಾಡಿದ್ದರು ? ಇಷ್ಟು ದಿನ ವಾದರೂ ಏಕೆ ಮಾಡಿಲ್ಲ ? ಸಚಿವರೇ ಹೇಳಬೇಕಾ ನಿಮಗೆ ? ಕಾಮಗಾರಿ ವೀಕ್ಷಣೆಗೆ ಬಂದು ಕರೆ ಮಾಡಿದರೂ ನೀವು ಸ್ಥಳಕ್ಕೆ ಬರಲಾಗುವುದಿಲ್ಲವೇ ? ನೀರಾವರಿ ಯೋಜನೆಗಳಿಗೆ ಸ್ಪಂದಿಸಿ ಕೆಲಸ ಮಾಡಿ ? ನಿಗದಿತ ಅವಧಿಯೊಳಗೆ ಪೋಡಿ ಮುಗಿಸದಿದ್ದರೆ ಅಮಾನತು ಮಾಡಬೇಕಾಗುತ್ತದೆ’ ಎಂದು ಪಡೇಕನೂರ ಅಕ್ವಾಡೆಕ್ಟ್‌ ಬಳಿ ಕಾಮಗಾರಿ ಪರಿಶೀಲಿಸುವ ಸಂದರ್ಭ ಸಚಿವ ಎಂ.ಬಿ.ಪಾಟೀಲ, ತಹಶೀಲ್ದಾರ್‌ಗೆ ಗಂಭೀರ ಎಚ್ಚರಿಕೆ ನೀಡಿದರು.

ಕೊಣ್ಣೂರ ಬಳಿ ಕಾಮಗಾರಿ ಪರಿಶೀಲನೆಗೆ ಸಚಿವ ಎಂ.ಬಿ.ಪಾಟೀಲ, ಶಾಸಕ ಸಿ.ಎಸ್‌.ನಾಡಗೌಡ ಜತೆ ತೆರಳಿದ ಸಂದರ್ಭ, ಸ್ಥಳೀಯರು, ಗುತ್ತಿಗೆದಾರರ ಕಡೆಯವರು ಹಾರ ಹಿಡಿದು ಕಾರುಗಳ ಹಿಂದೆ ಓಡಿಸದ್ದು ಸಹ ಕಂಡಿತು.

ಅಂಕಿ–ಅಂಶ
20.78 ಟಿಎಂಸಿ ಅಡಿ ನೀರು ನಿಗದಿ

50 ಕಿ.ಮೀ. ವರೆಗೆ ಕಾಮಗಾರಿ ಪೂರ್ಣ

₹818 ಕೋಟಿ ಖರ್ಚು

₹2,428 ಕೋಟಿ ವೆಚ್ಚದ ಯೋಜನೆ

* * 

ಈಗಾಗಲೇ 10 ಕೆರೆಗಳಿಗೆ ಪ್ರಾಯೋಗಿಕವಾಗಿ ನೀರು ಹರಿಸಲಾಗಿದೆ. ಅಕ್ಟೋಬರ್‌ ಮೊದಲ ವಾರದಲ್ಲಿ ಉಳಿದ 12 ಕೆರೆಗಳಿಗೆ ನೀರು ಹರಿಸಲಾಗುವುದು
ಎಂ.ಬಿ.ಪಾಟೀಲ
ಜಲಸಂಪನ್ಮೂಲ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT