ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಧಾರಿತ ಬೀಟ್ ಪದ್ಧತಿ ಇಲಾಖೆಗೆ ಅವಶ್ಯ

Last Updated 17 ಜುಲೈ 2017, 7:13 IST
ಅಕ್ಷರ ಗಾತ್ರ

ಕಾರವಾರ: ‘ಸಾರ್ವಜನಿಕರು ಒಂದು ರೀತಿಯ ಸಮವಸ್ತ್ರ ಇಲ್ಲದ ಪೊಲೀಸರು ಇದ್ದಂತೆ. ಅವರೊಂದಿಗೆ ಉತ್ತಮ ಸಂಬಂಧ ಹೊಂದಲು ಸುಧಾರಿತ ಬೀಟ್ ಪದ್ಧತಿ ಇಲಾಖೆಗೆ ಅತ್ಯವಶ್ಯವಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ವಿ.ಪಾಟೀಲ್ ಅಭಿಪ್ರಾಯಪಟ್ಟರು.

ಇಲ್ಲಿನ ಜಿಲ್ಲಾ ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ‘ಸುಧಾರಿತ ಬೀಟ್ ವ್ಯವಸ್ಥೆ ಹಾಗೂ ಬೀಟ್ ನಾಗರಿಕ ಸದಸ್ಯರ ಸಭೆ’ಯಲ್ಲಿ ಅವರು ಮಾತನಾಡಿದರು.
‘ಜಿಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿಯ ಕೊರತೆ ಇದೆ. ಹಾಗಾಗಿ ಎಲ್ಲರಿಗೂ ಸಿಬ್ಬಂದಿಯಿಂದ ರಕ್ಷಣೆ ನೀಡಲು ಅಸಾಧ್ಯ. ಈ ಹಿಂದೆ ಮೂರ್ನಾಲ್ಕು ಹಳ್ಳಿಗಳಿಗೆ ಒಂದು ಬೀಟ್ ಪದ್ಧತಿ ಇತ್ತು. ಇದರಿಂದ ಎಲ್ಲ ಮಾಹಿತಿ ಕಲೆ ಹಾಕಲು ಹಾಗೂ ಜನರಿಗೆ ಶೀಘ್ರ ಸ್ಪಂದಿಸಲು ಸಾಧ್ಯವಾಗುತ್ತಿರಲಿಲ್ಲ.

ಆದರೆ ಈ ಪದ್ಧತಿಯಿಂದ ಪ್ರತಿ ಹಳ್ಳಿಗೆ ಒಬ್ಬ ಸಿಬ್ಬಂದಿಯನ್ನು ನೇಮಕ ಮಾಡಿ, ಆಯಾ ಬೀಟ್‌ಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಪ್ರಯತ್ನಿಸಲಾಗುತ್ತದೆ’ ಎಂದರು. ‘. ಪ್ರತಿ ಗ್ರಾಮದ ಬೀಟ್ ಪೋಲಿಸರಿಗೆ ಹೆಚ್ಚಿನ ಜವಾಬ್ದಾರಿ ವಹಿಸಲಾಗಿದೆ. ಅವರು ಕೂಡ ತಮ್ಮ ಕರ್ತವ್ಯವನ್ನು ಸರಿಯಾಗಿ ನಿಭಾಯಿ ಸಬೇಕು’ ಎಂದರು.

ಕರಾವಳಿ ಮುಂಜಾವು ದಿನ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕ ಗಂಗಾಧರ ಹಿರೇಗುತ್ತಿ ಮಾತನಾಡಿ, ‘ನಾಗರಿಕ ಸ್ನೇಹಿ ಪೊಲೀಸ್‌ ವ್ಯವಸ್ಥೆಗೆ ಸುಧಾರಿತ ಗಸ್ತು ಪದ್ಧತಿ ಹೆಚ್ಚು ಸಹಕಾರಿಯಾಗಿದೆ. ಸಾರ್ವಜನಿಕರು ಉತ್ಸಾಹದಿಂದ, ಸ್ನೇಹಪೂರ್ವಕವಾಗಿ ಪೊಲೀಸರಿಗೆ ಮಾಹಿತಿ ಹಾಗೂ ಅವರ ಕಾರ್ಯಗಳಿಗೆ ಸಹಾಯ ನೀಡುವುದರಿಂದ ಅಪರಾಧ ತಡೆಯಲು ಹಾಗೂ ಶಾಂತಿ ಸುವ್ಯ ವಸ್ಥೆ ಕಾಪಾಡಲು ಸಾಧ್ಯವಾಗುತ್ತದೆ.

ಕೇವಲ ಪೊಲೀಸರು ನಮ್ಮ ರಕ್ಷಣೆಗೆ ಧಾವಿಸುವುದಲ್ಲ. ಅವರನ್ನು ಟೀಕೆ ಮಾಡುವುದನ್ನು ಬಿಟ್ಟು ಪೊಲೀಸರ ರಕ್ಷ ಣೆಗೂ ಕೂಡ ಸಾರ್ವ ಜನಿಕರು ನಿಲ್ಲುವ ಪರಿಸ್ಥಿತಿ ಇತ್ತೀಚಿನ ದಿನಮಾನ ಗಳಲ್ಲಿ ನಿರ್ಮಾಣವಾಗಿದೆ. ಸಾರ್ವಜ ನಿಕರ ಸಹಕಾರ ಇಲ್ಲದೇ ಅವರು ಏಕಾಂಗಿ ಯಾಗಿ ರೂಪುಗೊಂಡಿದ್ದಾರೆ. ಅವರು ತಪ್ಪಿದಾಗ ಪ್ರಶ್ನಿಸುವ, ಒಳ್ಳೆಯದನ್ನು ಮಾಡಿದಾಗ ಪ್ರಶಂಸಿಸುವ ಕಾರ್ಯ ಸಾರ್ವಜನಿಕರಿಂದ ಆಗಬೇಕಿದೆ’ ಎಂದರು.

‘ಜನಪ್ರತಿನಿಧಿಗಳು, ಸಾರ್ವಜನಿಕರು ಪೊಲೀಸರಿಗೆ ಅಸಹಕಾರ ತೋರುತ್ತಿರು ವುದರಿಂದ ಅಪರಾಧಗಳು ಹೆಚ್ಚುತ್ತಿವೆ. ಕೊಲೆ, ಅತ್ಯಾಚಾರ, ಸುಲಿಗೆಯಂತಹ ಕೃತ್ಯಗಳಿಗೆ ಜನರ ನಡವಳಿಕೆಯೇ ನೇರ ಕಾರಣವಾಗುತ್ತಿದೆ. ಎಲ್ಲದಕ್ಕೂ ಪೊಲೀಸ ರನ್ನು ಹೊಣೆ ಮಾಡುವುದನ್ನು ಬಿಟ್ಟು ನಾವು ಮೊದಲು ನಮ್ಮ ಕರ್ತವ್ಯ ನಿಭಾ ಯಿಸಬೇಕು’ ಎಂದು ಅವರು ಹೇಳಿದರು. ಮೀನುಗಾರ ಮುಖಂಡ ಗಣಪತಿ ಮಾಂಗ್ರೇ, ಸಮಾಜ ಸೇವಕಿ ಅನು ಕಳಸ ಮಾತನಾಡಿದರು. ಕೆಡಿಎ ಅಧ್ಯಕ್ಷ ಸಂದೀಪ್ ತಳೇಕರ್, ಜಿ.ಟಿ.ನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT