ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಾಡಿಗೆ ಕಟ್ಟಡದಲ್ಲೇ ಉಳಿದ ಸರ್ಕಾರಿ ಕಚೇರಿಗಳು’

Last Updated 17 ಜುಲೈ 2017, 7:31 IST
ಅಕ್ಷರ ಗಾತ್ರ

ಹಗರಿಬೊಮ್ಮನಹಳ್ಳಿ: ಪಟ್ಟಣದಲ್ಲಿ ಮಿನಿ ವಿಧಾನಸೌಧ ನಿರ್ಮಾಣ ತಾಲ್ಲೂಕಿನ ಜನರ ಪಾಲಿಗೆ ಗಗನ ಕುಸುಮವಾ ದಂತಿದೆ. ನಿರ್ಮಾಣ ಮಾಡಬೇಕಾದ ಸ್ಥಳದ ಆಯ್ಕೆಯ ಚರ್ಚೆ  ಕಳೆದ ನಾಲ್ಕು ವರ್ಷಗಳಿಂದ ಮುಂದುವರೆದೇ ಇದೆ. ಹಳೇ ಊರು ಅಥವಾ ಹೊಸ ಊರಲ್ಲಿ ನಿರ್ಮಾಣ ಮಾಡಬೇಕೆನ್ನುವ ಗೊಂದಲ ಅಧಿಕಾರಿಗಳು, ಜನಪ್ರತಿನಿಧಿಗಳಲ್ಲಿ ಉಂಟಾಗಿದೆ.

ಹಳೇ ಊರಿನ ಎಂ.ಬಿ.ಕಾಲೊನಿ, ಹೊಸ ಊರಿನ ಈಶ್ವರ ದೇವಸ್ಥಾನದ ಬಳಿಯ ಅಗತ್ಯ ಎರಡು ನಿವೇಶನಗಳನ್ನು ವಿಧಾನಸೌಧ ನಿರ್ಮಾಣಕ್ಕೆ ಆಯ್ಕೆ ಮಾಡಲಾಗಿತ್ತು. ಅಂತಿಮವಾಗಿ ಒಂದನ್ನು ನಿರ್ಧರಿಸಬೇಕಿತ್ತು. ಹಿಂದಿನ ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ಈಶ್ವರ ದೇವಸ್ಥಾನದ ಬಳಿ ಇರುವ ನಿವೇಶನ ಕುರಿತಂತೆ ಆಸಕ್ತಿ ತಾಳಿದ್ದರು. ಅನಧಿಕೃತ ವಾಗಿ ದಿಢೀರ್‌ ನಿರ್ಮಿಸಿದ್ದ ಗುಡಿಸಲು ಗಳನ್ನು ಖುದ್ದಾಗಿ ಭೇಟಿ ಕೊಟ್ಟು ಎತ್ತಂಗಡಿ ಮಾಡಿಸಿದ್ದರು.

ಇತ್ತೀಚೆಗೆ ಈಗಿನ ಜಿಲ್ಲಾಧಿಕಾರಿಗಳು ತಹಶೀ ಲ್ದಾರ್‌ಗೆ ಪತ್ರ ಬರೆದು ಹಳೇ ಊರಿ ನಲ್ಲಿರುವ ನಿವೇಶನದಲ್ಲಿ ಮಿನಿ ವಿಧಾನ ಸೌಧ ನಿರ್ಮಿಸುವ  ಅದಕ್ಕೆ ಬೇಕಾಗುವ ರೂಪರೇಷೆಗಳನ್ನು ಸಿದ್ದಪಡಿಸುವಂತೆ ಸೂಚಿಸಿದ್ದರು.ಆದೇಶವನ್ನು ವಿರೋಧಿಸಿ ಕೆಲವು ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಆಗ ಪ್ರಸ್ತಾವನೆಯನ್ನು ಮುಂದೂಡ ಲಾಗಿತ್ತು ಎನ್ನಲಾಗಿದೆ.

ಬಾಡಿಗೆ ಕಟ್ಟಡಗಳು: ಪಟ್ಟಣದಲ್ಲಿ ಸರ್ಕಾರಿ ಕಚೇರಿಗಳು ಬಾಡಿಗೆ ಕಟ್ಟಡ ದಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದುವ ರೆಗೂ ನೀಡಿದ ಬಾಡಿಗೆಯಲ್ಲೇ ಅತ್ಯುತ್ತ ಮವಾದ ಕಟ್ಟಡವನ್ನೇ ನಿರ್ಮಿಸಬ ಹುದಿತ್ತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಚೇರಿ ಕಳೆದ 25ವರ್ಷಗಳಿಂದ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಇಲಾಖೆಯ ವಿಸ್ತೀರ್ಣ ಅಧಿಕಾರಿಗಳ ಕಚೇರಿ ಕಳೆದ ವರ್ಷದಿಂದ, ರೇಷ್ಮೆ ಇಲಾಖೆ ಕಚೇರಿ 20 ವರ್ಷಗಳಿಂದ, ಕಾರ್ಮಿಕರ ಇಲಾಖೆ 10ವರ್ಷಗಳಿಂದ, ವಲ್ಲಭಾಪುರದಲ್ಲಿರುವ ಅಂಬಳಿ ಮುರಾರ್ಜಿ ವಸತಿ ಶಾಲೆ ಕಳೆದ ಐದ ವರ್ಷಗಳಿಂದ ಕಟ್ಟಡ ಬಾಡಿಗೆ ಕಟ್ಟಡದಲ್ಲಿವೆ.

ಸರ್ಕಾರಿ ಐಟಿಐ ಕಾಲೇಜ್‌ ಕಟ್ಟಡ ನಿರ್ಮಾಣಕ್ಕೆ ಇತ್ತೀಚೆಗೆ ಶಾಸಕ ಭೂಮಿ ಪೂಜೆ ನೆರವೇರಿಸಿದ್ದಾರೆ. ಎಸ್ಸಿಎಸ್ಟಿ ವಿದ್ಯಾರ್ಥಿನಿಯರ ಕಾಲೇಜ್ ಹಾಸ್ಟೆಲ್‌ ಕೂಡ ಬಾಡಿಗೆ ಕಟ್ಟಡದಲ್ಲಿದೆ. ಇಲ್ಲಿನ ವಸತಿ ಸಮಸ್ಯೆಯಿಂದಾಗಿ ಹೌಸಿಂಗ್ ಬೋರ್ಡ್‌ ಕಾಲೊನಿಯ ಮನೆ ಒಂದರಲ್ಲಿ 25ಬಾಲಕಿಯರಿಗೆ ವ್ಯವಸ್ಥೆ ಮಾಡಲಾಗಿದೆ. ಶಿಥಿಲಗೊಂಡಿರುವ ತಹಶೀಲ್ದಾರ್ ಕಚೇರಿ: ತಹಶೀಲ್ದಾರ್ ಕಚೇರಿ ಸಣ್ಣ ಮಳೆ ಬಂದರೂ ಸೋರುತ್ತಿದೆ. ಆರ್‌ಸಿಸಿ ಆಗಾಗ ಬೀಳುತ್ತಿರುವುದರಿಂದ ಸಿಬ್ಬಂದಿ ಭಯದಿಂದಲೇ ಕಾರ್ಯನಿರ್ವಹಿಸ ಬೇಕಿದೆ. ಇತ್ತೀಚೆಗೆ ಅಷ್ಟೆ ಸಿಬ್ಬಂದಿ ಒಬ್ಬರು ಕಂಪ್ಯೂಟರ್‌ ಕೆಲಸ ನಿರ್ವಹಿ ಸುತ್ತಿದ್ದಾಗ ಆರ್‌ಸಿಸಿ ಬಿದ್ದು ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದರು. ಮಳೆ ಬಂದಾಗಲಂತೂ ಸೋರುತ್ತಿರುವ ಕಚೇರಿಯಾಗುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT