ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೂಗುಯ್ಯಾಲೆಯಲ್ಲಿ ಸಾಗುತ್ತಿದೆ ಜೀವನ

ಸುಳ್ಯ ತಾಲ್ಲೂಕಿನ ಕಲ್ಮಕಾರು ಗ್ರಾಮದ ಗೋಳು
Last Updated 17 ಜುಲೈ 2017, 7:32 IST
ಅಕ್ಷರ ಗಾತ್ರ

ಮಂಗಳೂರು: ಮಳೆಗಾಲದಲ್ಲಿ ತುಂಬಿ ಹರಿಯುವ ಹೊಳೆ. ಅದರ ಮೇಲೊಂದು ತೂಗುತ್ತಿರುವ ಬಿದಿರಿನ ಸೇತುವೆ. ಎಲ್ಲ ಅವಶ್ಯಕತೆಗಳಿಗೆ ಅದನ್ನೇ ಉಪಯೋಗಿಸುವ ಅನಿವಾ ರ್ಯತೆ. ಪ್ರತಿ ಸಲವು ರಾಜಕಾರಣಿಗಳಿಂದ ಸಿಗುವ ಭರವಸೆ. ಹೀಗೆ ಸೇತು ವೆಯ ಕನಸನ್ನು ಕಟ್ಟಿಕೊಂಡು, ಬದು ಕನ್ನು ಸಾಗಿಸುತ್ತಿದ್ದಾರೆ ಸುಳ್ಯ ತಾಲ್ಲೂಕಿನ ಕಲ್ಮಕಾರಿನ ಜನರು.

ಕಲ್ಮಕಾರಿನ ಶೆಟ್ಟಿಕಟ್ಟ ಮತ್ತು ಮೆಂಟೆಕಜೆ ಎಂಬಲ್ಲಿರುವ ಎರಡೂ ಹೊಳೆಗಳ ಮಧ್ಯೆ ಸಿಲುಕಿರುವ 25 ರಿಂದ 30 ಮನೆಗಳು ಇರುವ ಒಂದು ಸಣ್ಣ ಪ್ರದೇಶವಿದೆ. ಪ್ರತಿ ವರ್ಷ ಮಳೆ ಗಾಲ ಬಂದಾಗಲೂ ಈ ಪ್ರದೇಶ ದ್ವೀಪ ದಂತಾಗುತ್ತದೆ. ಎರಡೂ ಬದಿಯ ಹೊಳೆಗಳು ತುಂಬಿ ಹರಿಯುತ್ತವೆ. ಆಗ ಅಲ್ಲಿನ ಜನರು ತಾತ್ಕಾಲಿಕವಾಗಿ ಬಿದಿ ರಿನ ಸೇತುವೆಯನ್ನು ನಿರ್ಮಿಸುತ್ತಾರೆ. ಪ್ರಾಥಮಿಕ ಶಾಲೆಗೆ ಹೋಗುವ ಪುಟಾ ಣಿಗಳಿಂದ ಹಿಡಿದು, ವಯೋವೃದ್ಧರ ವರೆಗೆ ಜೀವವನ್ನು ಕೈಯಲ್ಲಿ ಹಿಡಿದು ಕೊಂಡು ಈ ಬಿದಿರಿನ ಸೇತುವೆಯನ್ನು ದಾಟುತ್ತಾರೆ. ಸ್ವಲ್ಪ ಆಯ ತಪ್ಪಿದರೂ ನೀರು ಪಾಲಾಗುವುದು ಖಂಡಿತ.

ಇಲ್ಲಿಯವರೆಗೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ. ಬೇಸಿಗೆಕಾಲ ಬಂದಾಗ ಹೊಳೆಯನ್ನು ದಾಟುವುದು ಸುಲಭವಾಗುತ್ತದೆ. ಆಗ ಅದರ ಬಗ್ಗೆ ಯಾರೂ ಚಿಂತಿಸುವುದಿಲ್ಲ. ಮಳೆಗಾಲ ಬಂದಾಗ ಮತ್ತೆ ಸಮಸ್ಯೆ ಆರಂಭವಾ ಗುತ್ತದೆ. ಪ್ರತಿ ಚುನಾವಣೆ ಬಂದಾ ಗಲೂ ಎಲ್ಲ ಪಕ್ಷದ ರಾಜಕಾರಣಿ ಗಳಿಂದ ಸೇತುವೆಯ ಭರವಸೆ ದೊರ ಕುತ್ತದೆ. ಆದರೆ ಇಂದಿಗೂ ಪರಿಹಾರ ಮಾತ್ರ ಸಿಕ್ಕಿಲ್ಲ.

ಸೇತುವೆ ನಿರ್ಮಾಣಕ್ಕೆ ಎಲ್ಲ ಪ್ರಯತ್ನ ನಡೆಸಲಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಉದಯ ಕೊಪ್ಪಡ್ಕ ಅವರು ಹೇಳಿದ್ದು, ದೊಡ್ಡ ಮೋರಿಗಳನ್ನು ಅಳವಡಿಸಿ ಸೇತುವೆ ನಿರ್ಮಿಸುವ ಇಂಗಿತ ವ್ಕಕ್ತ ಪಡಿಸಿದ್ದಾರೆ.

ಮತದಾನ ಬಹಿಷ್ಕಾರದ ಎಚ್ಚರಿಕೆ: ಹಲವು ವರ್ಷಗಳಿಂದ ನಾವು ಬೇಡಿಕೆ ಯನ್ನು ಇಡುತ್ತಾ ಬಂದಿದ್ದರೂ, ಯಾರೂ ಈ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಚುನಾವಣಾ ಸಮಯದಲ್ಲಿ ಮಾತ್ರ ಸೇತುವೆಯ ಭರವಸೆ ನೀಡುತ್ತಾ ಬಂದಿ ದ್ದಾರೆ. ಸದ್ಯದಲ್ಲಿ ಇದಕ್ಕೆ ಪರಿಹಾರ ದೊರಕದಿದ್ದರೆ ಮುಂದೆ ಮತದಾನ ವನ್ನು ಬಹಿಷ್ಕರಿಸಲಾಗುವುದು ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.

**

ಸಂಸದರ ನಿಧಿಯಿಂದ, ಮೆಂಟೆಕಜೆ ಎಂಬಲ್ಲಿ ಸೇತುವೆ ನಿರ್ಮಾಣಕ್ಕೆ, ₹5ಲಕ್ಷ ಅನುದಾನ ಮಂಜೂರಾಗಿದ್ದು, ಡಿಸೆಂಬರ್‌ ವೇಳೆಗೆ ಕಾಮಗಾರಿ ಆರಂಭಿಸಲಾಗುವುದು. 

–ಉದಯ ಕೊಪ್ಪಡ್ಕ,
ತಾಲ್ಲೂಕು ಪಂಚಾಯಿತಿ ಸದಸ್ಯ

*

ಕುಮಾರ್‌ ಶೇಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT