ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹5 ಲಕ್ಷ ಕೋಟಿಗೂ ಅಧಿಕ ಮಾರುಕಟ್ಟೆ ಬಂಡವಾಳ ಹೊಂದಿರುವ ಸಂಸ್ಥೆ ರಿಲಯನ್ಸ್‌

Last Updated 17 ಜುಲೈ 2017, 10:11 IST
ಅಕ್ಷರ ಗಾತ್ರ

ಮುಂಬೈ: ಏಪ್ರಿಲ್‌ನಿಂದ ಹೂಡಿಕೆದಾರರು ಬಹುವಾಗಿ ನೆಚ್ಚಿಕೊಂಡಿರುವ ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ ₹5 ಲಕ್ಷ ಕೋಟಿಗೂ ಅಧಿಕ  ಮಾರುಕಟ್ಟೆ ಬಂಡವಾಳ ಹೊಂದಿರುವ ದೇಶದ ಎರಡನೇ ಸಂಸ್ಥೆಯಾಗಿದೆ.

ಷೇರುಪೇಟೆಯಲ್ಲಿ ಏಪ್ರಿಲ್‌ ನಂತರ ಸೂಚ್ಯಂಕ ಏರುಗತಿಯಲ್ಲಿದ್ದು, ಹೂಡಿಕೆದಾರರು ಶೇ 16.06ರಷ್ಟು ಲಾಭ ಗಳಿಸಿದ್ದಾರೆ. ಜಿಯೋ ಗ್ರಾಹಕರಿಗೆ ಉಚಿತ ಇಂಟರ್‌ನೆಟ್‌ ಸೇವೆ ಅಂತ್ಯಗೊಳಿಸಿ ಸೇವೆಗೆ ಶುಲ್ಕ ಅನ್ವಯಿಸಿದ್ದು ಸೇರಿದಂತೆ ರಿಲಯನ್ಸ್ ಇತರೆ ಯೋಜನೆಗಳು ಪೂರ್ಣಗೊಳ್ಳುವ ಹಾದಿಯಲ್ಲಿರುವುದರಿಂದ ಹೂಡಿಕೆದಾರರ ನಂಬಿಕೆ ಹೆಚ್ಚಿದೆ.

ಟಾಟಾ ಕನ್ಸಲ್ಟನ್ಸಿ ಸರ್ವಿಸಸ್‌ (ಟಿಸಿಎಸ್‌) ನಂತರ ₹5 ಲಕ್ಷ ಕೋಟಿಗೂ ಹೆಚ್ಚು ಮಾರುಕಟ್ಟೆ ಬಂಡವಾಳ ಹೊಂದಿದ ಸಂಸ್ಥೆಯಾಗಿ ಸೋಮವಾರ ರಿಲಯನ್ಸ್‌ ಹೊಸ ದಾಖಲೆ ಸೃಷ್ಟಿಸಿದೆ.

4ಜಿ ತಂತ್ರಜ್ಞಾನ ಬಳಕೆಗೆ ಸಹಕಾರಿಯಾಗುವ ಕಡಿಮೆ ಬೆಲೆಯ ಮೊಬೈಲ್‌(₹1000–₹1500) ಫೋನ್‌ಗಳನ್ನು ರಿಲಯನ್ಸ್‌ ಜಿಯೋ ಬಿಡುಗಡೆ ಮಾಡುವ ಕುರಿತು ವರದಿಯಾಗಿದೆ. ಆದರೆ, ರಿಲಯನ್ಸ್‌ ಈ ಕುರಿತು ಸ್ಪಷ್ಟನೆ ನೀಡಿಲ್ಲ ಎಂದು ಲೈವ್‌ಮಿಂಟ್‌ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT