ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭವರೋಗ ನಿವಾರಣೆಗೆ ಬಿಲ್ವ

Last Updated 17 ಜುಲೈ 2017, 19:30 IST
ಅಕ್ಷರ ಗಾತ್ರ

ಮೂಲದಲ್ಲಿ ಬ್ರಹ್ಮ, ಮಧ್ಯದಲ್ಲಿ ವಿಷ್ಣು, ಅಗ್ರಭಾಗದಲ್ಲಿ ಶಿವನನ್ನು ಹೊಂದಿರುವ ಪತ್ರವೇ ಬಿಲ್ವಪತ್ರೆ ಎಂದು ಬಿಲ್ವಾಷ್ಟಕ ದಲ್ಲಿ ಕೊಂಡಾಡಿದ್ದಾರೆ. ಶಿವದೇಗುಲಗ ಳೆದುರು ಪಾವಿತ್ರ್ಯತೆಯೇ ಮೈತಳೆದು ನಿಂತಂತೆ ಕಂಗೊಳಿಸುವ ಈ ವೃಕ್ಷವು ಸಕಲ ಪಾಪ ನಿವಾರಣೆಯನ್ನು ಮಾಡು ವುದು ಮಾತ್ರವಲ್ಲದೇ ಸರ್ವರೋಗಹ ರವೂ ಆಗಿದೆ. ಶಿವನಿಗೆ ಪ್ರಿಯವಾದುದ ರಿಂದ ಶಿವದ್ರುಮ ಎಂಬ ಪರ್ಯಾಯ ನಾಮವನ್ನು ಹೊಂದಿದ್ದು, ಇದರ ಉಲ್ಲೇಖವು ವೇದ, ಪುರಾಣಗಳ ಲ್ಲಿಯೂ ಸಿಗುತ್ತದೆ.

ರುಟೇಸಿಯೇ ಕುಲಕ್ಕೆ ಸೇರಿದ ಬಿಲ್ವವು ವೈಜ್ಞಾನಿಕವಾಗಿ ಈಗಲ್ ಮಾರ್ಮಿಲೋಸ್ ಎಂದು ಗುರುತಿಸ ಲಾಗಿದೆ. ದಶಮೂಲಗಳಲ್ಲಿ ಒಂದಾದ ಇದರ ಬೇರು ಉತ್ತಮ ವಾತಹರವಾ ಗಿದೆ. ಆರರಿಂದ ಎಂಟು ಮೀಟರ್ ಎತ್ತರಕ್ಕೆ ಬೆಳೆಯುವ ಮರವು ಕಾಂಡ ದಲ್ಲಿ ಹರಿತವಾದ ಮುಳ್ಳುಗಳನ್ನು ಹೊಂದಿರುತ್ತದೆ. ಮೂರು ದಳಗಳ ಒಂದು ಎಲೆಯಾಗಿ ಕಾಣಸಿಗುವ ವೃಕ್ಷ ಇದಾಗಿದ್ದು, ಗ್ರೀಷ್ಮ ಋತುವಿನಲ್ಲಿ ಹಳೆ ಎಲೆಗಳು ಉದುರಿ ಹೊಸ ಚಿಗುರುಗಳು ಕಾಣಿಸಿಕೊಳ್ಳುತ್ತವೆ.

ಗೋಲಾಕಾರದ ಹಣ್ಣುಗಳು ಹಳದಿ ಬಣ್ಣವನ್ನು ಹೊಂದಿದ್ದು, ಮಾಗಿದ ಹಣ್ಣುಗಳು ಬೀಜಗಳಿಂದ ಕೂಡಿದ್ದು ತುಂಬಾ ಸಿಹಿಯಾಗಿರುತ್ತವೆ. ಹಳ್ಳಿ ಜನರು ಮರಸೇಬು, ಬೇಲದ ಮರ ಎಂದೂ ಕರೆಯುತ್ತಾರೆ.

ಬಿಲ್ವವೃಕ್ಷದ ಪ್ರತಿಯೊಂದು ಭಾಗವೂ ಉಪಯುಕ್ತವಾಗಿದ್ದು, ಹೇರಳವಾದ ಔಷಧೀಯ ಗುಣಗಳನ್ನು ಹೊಂದಿವೆ. ಅತಿಯಾದ ಬೆವರುವಿಕೆ ಯಿಂದ ದೇಹವು ದುರ್ಗಂಧದಿಂದ ಬಳಲುತ್ತಿದ್ದರೆ, ಬಿಲ್ವಪತ್ರೆಯ ರಸವನ್ನು ಹಚ್ಚುವುದರಿಂದ ದುರ್ಗಂಧ ಮಾಯವಾಗುತ್ತದೆ. ಎಲೆಯ ರಸದೊಂದಿಗೆ ಸ್ವಲ್ಪ ಶುಂಠಿ, ಹಿಪ್ಪಲಿ, ಕಾಳುಮೆಣಸು ಸೇರಿಸಿ ಸೇವಿಸುವುದರಿಂದ ಕಾಮಾಲೆ ರೋಗವು ದೂರವಾಗುತ್ತದೆ.

ಬಿಲ್ವ ಫಲದಲ್ಲೊಂದು ವೈಶಿಷ್ಟ್ಯ ತೆಯನ್ನು ಕಾಣಬಹುದು. ಮಾಗಿದ ಹಾಗೂ ಮಾಗದೇ ಇರುವ ಹಣ್ಣುಗಳ ಕಾರ್ಯವು ವಿಭಿನ್ನವಾಗಿದೆ. ಮಾಗಿದ ಹಣ್ಣುಗಳು ಸಿಹಿ, ಒಗರು ರುಚಿಯನ್ನು ಹೊಂದಿದ್ದು, ಹಸಿವೆಯನ್ನು ತಗ್ಗಿಸುತ್ತವೆ, ಅಂತೆಯೇ ಸರಿಯಾಗಿ ಮಾಗದೇ ಇರುವ ಫಲಗಳು ಒಗರು, ಹುಳಿ ರುಚಿ ಯನ್ನು ಹೊಂದಿದ್ದು, ಅತಿಸಾರನಾಶಕ, ಹೃದಯಕ್ಕೆ ಹಿತಕಾರಿ ಮತ್ತು ಹಸಿವೆ ಯನ್ನು ಹೆಚ್ಚಿಸಲು ಸಹಕಾರಿ. ಆಗ ತಾನೆ ಕೊಯ್ದು ತಂದ ಮಾಗಿದ ಹಣ್ಣುಗಳನ್ನು ಹಾಗೆಯೇ ಸವಿಯಬಹುದು ಅಥವಾ ಪಾನಕ ಮಾಡಿಯೂ ಕುಡಿಯಬಹುದು. ಅನೇಕ ಹಳ್ಳಿಗಳಲ್ಲಿ ದಣಿದು ಬಂದ ಅತಿಥಿಗಳಿಗೆ ಬೇಲದ ಪಾನಕವೆಂದು ನೀಡುತ್ತಾರೆ.

ಮೂಲವ್ಯಾಧಿ, ವಾಂತಿ, ಬೇಧಿ ಮುಂತಾದ ಅನೇಕ ಹೊಟ್ಟೆಯ ತೊಂದರೆಗಳ ನಿವಾರಣೆಗೆ ಸೂಕ್ತ. ಬೇರುಗಳನ್ನು ದಶಮೂಲಾರಿಷ್ಟ, ಲೇಹದಂತಹ ಅನೇಕ ಔಷಧಗಳಲ್ಲಿ ಬಳಸುತ್ತಾರೆ. ತೈಲವನ್ನು ಕಫ ದೋಷದಿಂದ ಉಂಟಾದ ತಲೆನೋವಿನ ಶಮನಕ್ಕಾಗಿ ಬಳಸಬ ಹುದು. ಗರ್ಭಿಣಿ, ಬಾಣಂತಿ, ಶಸ್ತ್ರಚಿ ಕಿತ್ಸೆಗೊಳಗಾದ ಬಳಿಕ ಬಳಸುವಾಗ ಜಾಗ್ರತೆ ವಹಿಸುವುದು ಉತ್ತಮ.

ಬಿಲ್ವವೃಕ್ಷವು ಅಗತ್ಯ ತೈಲಾಂಶ ಹಾಗೂ ರುಟಿನ್, ಮಾರ್ಮಿಸಿನ್‌ನಂತಹ ಅನೇಕ ರಾಸಾಯನಿಕ ಸಂಘಟನೆಗಳನ್ನು ಹೊಂದಿದ್ದು, ಇದರಲ್ಲಿ ಅಡಗಿರುವ ಉಪಯುಕ್ತತೆಯನ್ನು ಶೋಧಿಸಲು ಅನೇಕ ಸಂಶೋಧನೆಗಳು ನಡೆಯುತ್ತಿವೆ.

ಮಳೆಗಾಲದಲ್ಲಿ ಎಲ್ಲೆಂದರಲ್ಲಿ ಯಥೇಚ್ಛವಾಗಿ ಸೊಳ್ಳೆ ಇನ್ನಿತರ ಕೀಟಗಳು ತಮ್ಮ ಹಾರಾಟವನ್ನು ಆರಂಭಿಸಿರುತ್ತವೆ. ಬಿಲ್ವದ ತೊಗಟೆ, ಬೇರು, ಒಣಗಿದ ಎಲೆಗಳನ್ನು ಹಾಕಿ ಧೂಪನ ಕರ್ಮವನ್ನು ಮಾಡುವು ದರಿಂದ ಸೊಳ್ಳೆಗಳ ನಿಯಂತ್ರಣವಾಗಿ ಸಾಂಕ್ರಾಮಿಕ ರೋಗಗಳಿಂದ
ನಮ್ಮನ್ನು ನಾವು ರಕ್ಷಿಸಿಕೊಳ್ಳಲೂ ಅನುಕೂಲಕರ.

ಡಾ. ಎನ್.ಸ್ವಾತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT