ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಗೂಢ ರೇಡಿಯೊ ಸಂಕೇತ ಪತ್ತೆ

Last Updated 17 ಜುಲೈ 2017, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್: ಭೂಮಿಯಿಂದ 11 ಜ್ಯೋತಿರ್ವರ್ಷ ದೂರದಲ್ಲಿರುವ ಚಿಕ್ಕ, ಮಬ್ಬಾದ ನಕ್ಷತ್ರವೊಂದರ ದಿಕ್ಕಿನಿಂದ ಬರುತ್ತಿರುವ ನಿಗೂಢ ರೇಡಿಯೊ ಸಂಕೇತಗಳನ್ನು ಬಾಹ್ಯಾಕಾಶ ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.

ಸೂರ್ಯನಿಗೆ ಹೋಲಿಸಿದರೆ 2400 ಪಟ್ಟು ಕಡಿಮೆ ಬೆಳಕು ಹೊಂದಿರುವ ಕೆಂಪು ಕುಬ್ಜ ನಕ್ಷತ್ರ ರೋಸ್ 128 (ಜಿಜೆ 447) ಕಡೆಯಿಂದ ಸಂಜ್ಞೆಗಳು ಬರುತ್ತಿವೆ. ಈ ನಕ್ಷತ್ರವು ಯಾವುದೇ ಗ್ರಹಗಳನ್ನು ಹೊಂದಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ.

ಪೋರ್ಟೊರಿಕೊ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಲಾಗಿರುವ ಬೃಹತ್ ರೇಡಿಯೊ ಟೆಲಿಸ್ಕೋಪ್ ಮೇ ತಿಂಗಳಿನಲ್ಲಿ ಇವನ್ನು ಪತ್ತೆಹಚ್ಚಿದೆ.

ಅನ್ಯಗ್ರಹದ ಬುದ್ಧಿವಂತ ಜೀವಿಗಳಿಂದ ಈ ಸಂಕೇತಗಳು ಬರುತ್ತಿರುವ ಸಾಧ್ಯತೆಯನ್ನು ಈವರೆಗೆ ನಿರಾಕರಿಸಲಾಗಿಲ್ಲ ಎಂದು ವಿಜ್ಞಾನಿ ಅಬೆಲ್ ಮೆಂಡೆಜ್ ಅವರು ಹೇಳಿದ್ದಾರೆ.

ಮಾನವ ನಿರ್ಮಿತ ಉಪಗ್ರಹಗಳಿಂದಲೂ  ರೇಡಿಯೊ ಸಂಜ್ಞೆಗಳು ಬರುತ್ತಿರುವ ಸಾಧ್ಯತೆಯೂ ಇರಬಹುದು ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT