ಸದ್ಯಕ್ಕೆ, ಕರೆ ಅಥವಾ ಇಂಟರ್‌ನೆಟ್ ದರ ನಿಗದಿಗೆ ನಿರ್ದಿಷ್ಟವಾದ ಕಾರ್ಯವಿಧಾನ ಅನುಸರಿಸಲಾಗುತ್ತಿಲ್ಲ. ಕಂಪೆನಿಗಳು ಕರೆ ದರಗಳ ಹೊಸ ಯೋಜನೆಯನ್ನು ಘೋಷಿಸಿದ ನಂತರ ಏಳು ದಿನಗಳ ಒಳಗಾಗಿ ಅವುಗಳ ಬಗ್ಗೆ ‘ಟ್ರಾಯ್’ಗೆ ಮಾಹಿತಿ ನೀಡಿದರೆ ಸಾಕು. ಅಲ್ಲದೇ, ಈಗ ಗರಿಷ್ಠ ಅಥವಾ ಕನಿಷ್ಠ ದರ ಎಂಬುದಿಲ್ಲ. ರೋಮಿಂಗ್ ಸೌಲಭ್ಯಕ್ಕೆ ಮಾತ್ರ ‘ಟ್ರಾಯ್’, ಗರಿಷ್ಠ ದರ ನಿಗದಿಪಡಿಸಿದೆ.