ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಬೆಟ್‌: ಚೀನಾ ಸೇನೆಯ ಸಮರಾಭ್ಯಾಸ

Last Updated 17 ಜುಲೈ 2017, 19:30 IST
ಅಕ್ಷರ ಗಾತ್ರ

ಬೀಜಿಂಗ್‌: ಸಿಕ್ಕಿಂ ವಲಯದ ದೋಕಲಾ ಪ್ರದೇಶದಲ್ಲಿ ಭಾರತ ಮತ್ತು ಚೀನಾ ಸೇನೆಗಳ ನಡುವೆ ಸಂಘರ್ಷ ಸ್ಥಿತಿ ಮುಂದುವರಿದಿರುವುದರ ನಡುವೆಯೇ ಚೀನಾ ಸೇನೆಯು ಟಿಬೆಟ್‌ನಲ್ಲಿ ಸಮರಾಭ್ಯಾಸ ನಡೆಸಿದೆ.

ಚೀನಾದ ಪೀಪಲ್ಸ್‌ ಲಿಬರೇಶನ್‌ ಆರ್ಮಿಯು (ಪಿಎಲ್‌ಎ) ಟಿಬೆಟ್‌ ಸ್ವಾಯತ್ತ ಪ್ರದೇಶದಲ್ಲಿ 11 ಗಂಟೆಗಳ ಕಾಲ ಸಮರ ತಾಲೀಮು ನಡೆಸಿದೆ ಎಂದು ಸರ್ಕಾರಿ ಸ್ವಾಮ್ಯದ ಸಿಸಿಟಿವಿ ಶುಕ್ರವಾರ ವರದಿ ಮಾಡಿದೆ. ಆದರೆ, ಯಾವಾಗ ಎಂದು ಅದು ಹೇಳಿಲ್ಲ.

ಪಿಎಲ್‌ಎಯ ಟಿಬೆಟ್‌ ಮಿಲಿಟರಿ ಕಮಾಂಡ್‌ನ ಸೈನಿಕರು ಈ ಸಮರಾಭ್ಯಾಸ ನಡೆಸಿದ್ದಾರೆ. ಟಿಬೆಟ್‌ ಅನ್ನು ಸಂಪರ್ಕಿಸುವ ಭಾರತ ಮತ್ತು ಚೀನಾ ನಡುವಣ ಗಡಿ ನಿಯಂತ್ರಣ ರೇಖೆಯ ಹಲವು ಕಡೆಗಳಲ್ಲಿ ಇದೇ ಸೈನಿಕರು ಕಾವಲು ಕಾಯುತ್ತಾರೆ.

ಬ್ರಹ್ಮಪುತ್ರ ನದಿ ಪಾತ್ರದ ತಗ್ಗು ಮತ್ತು   ಮಧ್ಯದ ಭಾಗಗಳಲ್ಲಿ ಸೇನಾ ತುಕಡಿಗಳನ್ನು ನಿಯೋಜಿಸಿ ವಿವಿಧ ಶಸ್ತ್ರಾಸ್ತ್ರಗಳನ್ನು ಬಳಸಿಕೊಂಡು ತಾಲೀಮು ನಡೆಸಲಾಗಿದೆ ಎಂದು ಸಿಸಿಟಿವಿ ವರದಿ ಹೇಳಿದೆ.

ಜಂಟಿಯಾಗಿ ದಾಳಿ ನಡೆಸಬೇಕಾದ ಸಂದರ್ಭದಲ್ಲಿ ಸೇನಾ ತುಕಡಿಗಳನ್ನು ಮತ್ತು ಸೇನೆಯ ವಿವಿಧ ಘಟಕಗಳನ್ನು ಕ್ಷಿಪ್ರ ಅವಧಿಯಲ್ಲಿ ನಿಯೋಜನೆ ಮಾಡುವ  ಅಭ್ಯಾಸ ನಡೆಸಲಾಗಿದೆ.

ಟ್ಯಾಂಕ್‌ಗಳನ್ನು ನಾಶಪಡಿಸಬಲ್ಲ ಗ್ರೆನೇಡ್‌ಗಳು, ಬಂಕರ್‌ಗೆ ದಾಳಿ ಮಾಡುವ ಕ್ಷಿಪಣಿಗಳನ್ನು ಚೀನಾದ ಯೋಧರು ಬಳಸುತ್ತಿರುವ ವಿಡಿಯೊವನ್ನು ಸಿಸಿಟಿವಿ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಶತ್ರುಗಳ ಯುದ್ಧವಿಮಾನಗಳನ್ನು ಗುರುತಿಸುವ ರೇಡಾರ್‌ ಮತ್ತು ನಿರ್ದಿಷ್ಟ ಗುರಿಯನ್ನು ಧ್ವಂಸ ಮಾಡಲು ಯುದ್ಧ ವಿಮಾನ ನಿಗ್ರಹ ಶಸ್ತ್ರಾಸ್ತ್ರಗಳನ್ನು ಸೈನಿಕರು ಬಳಸುತ್ತಿರುವ ದೃಶ್ಯಗಳಿವೆವೆ.

ಈ ಮಧ್ಯೆ, ಟಿಬೆಟ್‌ನ ಮೊಬೈಲ್‌ ಸಂಪರ್ಕ ಸಂಸ್ಥೆಯು  ಲಾಸಾದಲ್ಲಿ ಜುಲೈ 10ರಂದು ತಾತ್ಕಾಲಿಕ ಮೊಬೈಲ್‌ ಟವರ್‌ಗಳನ್ನು ನಿರ್ಮಿಸುವ ತಾಲೀಮು ನಡೆಸಿದೆ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸಂವಹನ ಸಾಧ್ಯವಾಗುವಂತೆ ಮಾಡುವುದಕ್ಕಾಗಿ ಈ ಅಭ್ಯಾಸ ನಡೆಸಲಾಗಿದೆ.

ಇದಕ್ಕೂ ಮೊದಲು, ಚೀನಾ ಇತ್ತೀಚೆಗೆ ತಯಾರಿಸಿರುವ ಹಗುರ ಯುದ್ಧ ಟ್ಯಾಂಕ್‌ ಸೇರಿದಂತೆ ಹಲವು ಆಧುನಿಕ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಬಳಸಿಕೊಂಡು ಪಿಎಲ್‌ಎ ತಾಲೀಮು ನಡೆಸಿದ್ದ ಬಗ್ಗೆ ವರದಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT