ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಪಲಿ: ಬೆಳೆಗೆ ಕಂಟಕವಾದ ಕಾಲುವೆ ನೀರು!

Last Updated 18 ಜುಲೈ 2017, 6:08 IST
ಅಕ್ಷರ ಗಾತ್ರ

ರಟ್ಟೀಹಳ್ಳಿ: ಇಲ್ಲಿಗೆ ಸಮೀಪದ ಕುಡಪಲಿ ಗ್ರಾಮದಲ್ಲಿ  ತುಂಗಾ ಮೇಲ್ದಂಡೆ ಕಾಲು ವೆಯ ಉಪಕಾಲುವೆ–2ರ ನೀರು ನುಗ್ಗಿ ಗೋವಿನ ಜೋಳದ ಬೆಳೆ ಮುಳುಗಿದೆ. ರಾಘವೇಂದ್ರ ಕುಲಕರ್ಣಿ ಅವರಿಗೆ ಸೇರಿದ ಭೂಮಿಯಲ್ಲಿ ಕಾಲುವೆ ನೀರು ನಿಯಂತ್ರಣವಿಲ್ಲದೇ ಹರಿಯುತ್ತಿದ್ದು, ಅದರಿಂದ ಬೆಳೆ ಹಾನಿಯಾಗುವ ಆತಂಕ ಎದುರಾಗಿದೆ.

‘ಸರ್ವೆ ನಂಬರ್ 135/1 ರಲ್ಲಿ 5 ಎಕರೆ ಜಮೀನು ಹೊಂದಿದ್ದೇನೆ. ಈ ಭಾಗದಲ್ಲಿ ಕಾಲುವೆಗೆ ಗೇಟ್‌ ಇಲ್ಲ. ಕಳೆದ 8 ವರ್ಷಗಳಿಂದ ನಷ್ಟ ಅನುಭವಿಸು ತ್ತಿದ್ದು, ಪರಿಹಾರಕ್ಕಾಗಿ ಅಲೆದಾಡಿ ಸಾಕಾಗಿದೆ. ಈಗ ಆತ್ಮಹತ್ಯೆಯೊಂದೇ ನನಗೆ ಉಳಿದಿರುವ ದಾರಿ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

‘ಕಾಲುವೆಗೆ ಸ್ವಾಧೀನ ಪಡಿಸಿಕೊಂಡ ಜಮೀನಿನ ಪರಿಹಾರದ ಹಣವೂ ಸಿಕ್ಕಿಲ್ಲ. ಅಧಿಕಾರಿಗಳನ್ನು ಕೇಳಿದರೆ ಬರೀ ಅಲೆದಾಡಿಸುತ್ತಿದ್ದಾರೆ. ಹೀಗಾದರೆ ನಾವು ಬದುಕುವುದು ಹೇಗೆ. ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು ಈ ಭಾಗದ ಕಾಲುವೆಗೆ ಗೇಟ್‌ ಅಳವಡಿಸ ಬೇಕು. ಇಲ್ಲದಿದ್ದರೇ, ಇದೇ ಕಾಲುವೆ ಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT