ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕನ್ನಡ ಜಿಲ್ಲೆ ಬಿಜೆಪಿಯಲ್ಲಿ ಭಿನ್ನಮತ ಇಲ್ಲ

Last Updated 18 ಜುಲೈ 2017, 6:48 IST
ಅಕ್ಷರ ಗಾತ್ರ

ಸಿದ್ದಾಪುರ: ‘ಜಿಲ್ಲೆಯ ಬಿಜೆಪಿಯಲ್ಲಿ ಯಾವುದೇ ಭಿನ್ನಮತೀಯ ಚಟುವಟಿಕೆ ಯಾಗಲಿ ಅಥವಾ ಭಿನ್ನಾಭಿಪ್ರಾಯವಾ ಗಲಿ ಇಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಕಾರ್ಯದರ್ಶಿ ಮತ್ತು ಜಿಲ್ಲಾ ಪ್ರಭಾರಿಯಾದ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಸ್ಪಷ್ಟಪಡಿಸಿದರು. ತಾಲ್ಲೂಕಿನ ಮಾವಿನಗುಂಡಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಬಿಜೆಪಿಯೊಳಗಿನ ಎರಡು ಗುಂಪುಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ ಜಿಲ್ಲೆಯ  ಬಿಜೆಪಿಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಅನಂತಕುಮಾರ್ ಹೆಗಡೆ ಅವ ರನ್ನು ಒಳಗೊಂಡ ಕೋರ್ ಕಮಿಟಿ ಇದೆ. ಜಿಲ್ಲೆಗೆ ಸಂಬಂಧಿಸಿದ ಯಾವುದೇ ತೀರ್ಮಾನಕೈಗೊಳ್ಳುವಾಗ ಕೂತು, ಚರ್ಚಿಸಿ ತೆಗೆದುಕೊಳ್ಳುತ್ತೇವೆ. ಪಕ್ಷದೊ ಳಗೆ ಯಾವುದೇ ಭಿನ್ನಮತ ಇಲ್ಲ’  ಎಂದರು.

‘ವಿಸ್ತಾರಕ ಯೋಜನೆಯಡಿಯಲ್ಲಿ ಕ್ಷೇತ್ರವಾರು ಭಟ್ಕಳದಲ್ಲಿ ರಾಮು ರಾಯಕರ, ದಿನಕರ ಶೆಟ್ಟಿ, ಕುಮಟಾದಲ್ಲಿ ಕುಮಾರ್ ಬಂಗಾರಪ್ಪ, ಬೇಳೂರು ಗೋಪಾಲಕೃಷ್ಣ, ಜೆ.ಡಿ.ನಾಯ್ಕ, ಕಾರ ವಾರದಲ್ಲಿ ರಘುಪತಿ ಭಟ್ಟ, ಪ್ರಮೋದ ಹೆಗಡೆ, ಹಳಿಯಾಳದಲ್ಲಿ ವಿ.ಎಸ್. ಪಾಟೀಲ, ರಾಜು ಕೊಟ್ಟಣ್ಣವರ್, ಯಲ್ಲಾ ಪುರದಲ್ಲಿ ಸೋಮಣ್ಣ ಬೇವಿನಮರದ, ಶಿರಸಿಯಲ್ಲಿ ಎಚ್‌.ಹಾಲಪ್ಪ, ವಿಕಾಸ, ಅಮರೇಶ ಕೆಲಸ ಮಾಡುತ್ತಿದ್ದಾರೆ’.

‘ವಿಸ್ತಾರಕ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರಿಗೆ ತಿಳಿಸಿಕೊಡುತ್ತೇವೆ.  ಬೂತ್ ಮಟ್ಟದಲ್ಲಿ ಪಕ್ಷದ ಕಮಿಟಿ ಇಲ್ಲದ ಸ್ಥಳದಲ್ಲಿ ಕಮಿಟಿ ರಚನೆ ಮಾಡಲಾಗುತ್ತಿದೆ. ಈ ಕಾರ್ಯಕ್ರಮದಡಿ ಮನೆ, ಮನೆಗೆ ಭೇಟಿ ನೀಡುತ್ತಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಜನರು ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಬಗ್ಗೆ ಉತ್ತಮ ಮಾತು ಆಡುತ್ತಿದ್ದು, ಕಾಂಗ್ರೆಸ್ (ರಾಜ್ಯ) ಸರ್ಕಾರದ ವೈಫಲ್ಯದ ಬಗ್ಗೆ ಮಾತನಾಡುತ್ತಿದ್ದಾರೆ. ಬರುವ ವಿಧಾನಸಭೆ ಚುನಾವಣೆಯ ನಂತರ ಯಡಿಯೂರಪ್ಪ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಜನತೆ ಹೇಳುತ್ತಿದ್ದಾರೆ’ ಎಂದರು.

‘ಬಿಜೆಪಿಗೆ ಬರುವ ಎಲ್ಲರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿರುವುದ ರಿಂದ ಪಕ್ಷ ಸಂಘಟನೆ ಶಿಥಿಲವಾಗುವುದಿಲ್ಲವೇ’ ಎಂಬ ಪ್ರಶ್ನೆಗೆ  ಉತ್ತರಿಸಿದ ಅವರು, ‘ಪಕ್ಷಕ್ಕೆ ಬಂದವರಿಗೆ ನಮ್ಮ ವಿಚಾರ ಗಳನ್ನು ತಿಳಿಸಿಕೊಡುವ ಪ್ರಶಿಕ್ಷಣ ವರ್ಗಗಳನ್ನು ನಾವು ನಡೆಸುತ್ತೇವೆ. ಆದ್ದರಿಂದ ಪಕ್ಷಕ್ಕೆ ಬಂದವರನ್ನು ಆ ಶಿಕ್ಷಣ ವರ್ಗದ ಮೂಲಕ ಸರಿ ಮಾಡುತ್ತೇವೆ.  ಆದರೆ ಶರತ್ತು ಮೂಲಕ ಬರಲು ಇಚ್ಛಿಸುವ ಯಾರನ್ನೇ ಆದರೂ ನಾವು ಸೇರಿಸಿಕೊಂಡಿಲ್ಲ’ ಎಂದರು.

ಸುದ್ದಿಗೋಷ್ಠಿಯಲ್ಲಿ ಹಿಂದುಳಿದ ಮೋರ್ಚಾದ ರಾಜ್ಯ ಘಟಕದ ಅಧ್ಯಕ್ಷ ಕಿರಣಕುಮಾರ್, ರಾಜ್ಯ ಪರಿಷತ್ ಸದಸ್ಯ ದೇವಿ ಪ್ರಸಾದ್ ಶೆಟ್ಟಿ, ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ವಿ.ಭಟ್ಟ ತಟ್ಟಿಕೈ, ಪ್ರಧಾನ ಕಾರ್ಯದರ್ಶಿ ಗುರುರಾಜ ಶಾನಭಾಗ, ವಿನಯ ಹೊನ್ನೇಗುಂಡಿ, ಜಿಲ್ಲಾ ಪಂಚಾಯ್ತಿ ಸದಸ್ಯ ನಾಗರಾಜ ನಾಯ್ಕ, ಸುರೇಶ ನಾಯ್ಕ ಬಾಲಿಕೊಪ್ಪ  ಇದ್ದರು.

ಪಕ್ಷದ ಕಾರ್ಯಕಾರಣಿ
ಕಾರವಾರ: ‘ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತಮ್ಮ ಆಡಳಿತದಲ್ಲಿ ಜಾರಿಗೆ ತಂದ ಹಲವು ಯೋಜನೆಗಳ ಮಾಹಿತಿಯನ್ನು ಜನರ ಮನೆ ಬಾಗಿಲಿಗೆ ಮುಟ್ಟಿಸುವಲ್ಲಿ ಬಿಜೆಪಿಯ ಎಸ್.ಸಿ, ಎಸ್.ಟಿ ಮೋರ್ಚಾದ ಸದಸ್ಯರು ಶ್ರಮಿಸಿದ್ದಾರೆ’ ಎಂದು ಬಿಜೆಪಿ ತಾಲ್ಲೂಕು ಎಸ್.ಸಿ.ಎಸ್.ಟಿ ಮೋರ್ಚಾದ ಅಧ್ಯಕ್ಷ ಉದಯ ಬಶೆಟ್ಟಿ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ತಾಲ್ಲೂಕು ಕಾರ್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡಿದರು.

ಬಿಜೆಪಿ ನಗರ ಘಟಕದ ಅಧ್ಯಕ್ಷ ಮನೋಜ ಭಟ್, ‘ಪಕ್ಷದ ಪ್ರತಿಯೊಂದು ಕಾರ್ಯಕ್ರಮದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು. ಮುಂದಿನ ದಿನಗಳಲ್ಲಿ ನಮ್ಮ ಶಕ್ತಿ ಬೃಹತ್ ಸಂಘಟನೆಯಾಗಿ ರೂಪುಗೊಳ್ಳ ಬೇಕು’ ಎಂದರು. ಪ್ರಧಾನ ಕಾರ್ಯದರ್ಶಿ ಸುಂದರ ಶೆಟ್ಟಿ, ನಾಗೇಶ ಕುಡ್ತರಕರ, ದಿನೇಶ ಪ್ರತಾಪ ನಾರ್ವೇಕರ, ಭರಮಪ್ಪ ಕಟ್ಟಿಮನಿ, ರಾಜೇಶ ವಡ್ಡರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT