ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಲಸ ವಿಳಂಬ; ಗ್ರಾ.ಪಂ. ಕಚೇರಿಗೆ ಮುತ್ತಿಗೆ

ಅರಕಲಗೂಡು ತಾಲ್ಲೂಕು ಹೆಬ್ಬಾಲೆಯಲ್ಲಿ ಗ್ರಾಮಸ್ಥರ ಆಕ್ರೋಶ
Last Updated 18 ಜುಲೈ 2017, 6:50 IST
ಅಕ್ಷರ ಗಾತ್ರ

ಅರಕಲಗೂಡು: ಹೆಬ್ಬಾಲೆ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸಾರ್ವ ಜನಿಕರ ಕೆಲಸಗಳು ಸಕಾಲದಲ್ಲಿ ನಡೆಯು ತ್ತಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ಸೋಮವಾರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಬೆಳಿಗ್ಗೆ 11.30ರ ವೇಳೆಯಾದರೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ ಹಾಗೂ ಇತರೆ ಸಿಬ್ಬಂದಿ ಹಾಜರಿರಲಿಲ್ಲ. ತಮ್ಮ ಕೆಲಸಗಳಿಗಾಗಿ ಕಚೇರಿ ಬಳಿ ಬಹಳಷ್ಟು ಮಂದಿ ಕಾಯುತ್ತಿದ್ದರು. ಈ ವೇಳೆ ಬಂದ ಸಿಬ್ಬಂದಿ ಕಚೇರಿ ಬಾಗಿಲು ತೆರೆಯಲು ಮುಂದಾದಾಗ ಗ್ರಾಮಸ್ಥರು ಹರಿಹಾಯ್ದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಗ್ರಾಮ ಪಂಚಾಯಿತಿ ಸದಸ್ಯರಾದ ಈರೇಗೌಡ, ಕೃಷ್ಣೇಗೌಡ, ಗ್ರಾ.ಪಂ ಸದಸ್ಯೆಯ ಪತಿ ಕೇಶವ ಜನರ ಅಹವಾಲುಗಳನ್ನು ಕೇಳಿದರು.

ಕಾರ್ಯದರ್ಶಿ ರಾಮಚಂದ್ರ, ಪಿಡಿಒ ಲೋಹಿತ್‌ ಕಚೇರಿಗೆ ಬಂದಾಗ ಒಳಹೋಗದಂತೆ  ತಡೆದ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.

‘ಇಂದು ಕಾರಣಾಂತರದಿಂದ ಅರ್ಧಗಂಟೆ ತಡವಾಗಿ ಕಾರ್ಯದರ್ಶಿ ಕರ್ತವ್ಯಕ್ಕೆ ಬಂದಿದ್ದಾರೆ. ಅತ್ನಿ ಮತ್ತು ಸಿದ್ದಾಪುರ ಗ್ರಾಮಗಳಲ್ಲಿ ಕೈಗೊಂಡಿರುವ ಶೌಚಾಲಯ ಕಾಮಗಾರಿ ವೀಕ್ಷಣೆಗೆ ತೆರಳಿದ್ದ ಕಾರಣ ಕಚೇರಿಗೆ ಬರಲು ತಡವಾಗಿದೆ. ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಸಕಾಲದಲ್ಲಿ ಮಾಡಿಕೊಡಲಾಗುತ್ತಿದೆ’ ಎಂದು ಪಿಡಿಒ ಲೋಹಿತ್ ತಿಳಿಸಿದರು.

ಗ್ರಾ.ಪಂ ಸದಸ್ಯ ಈರೇಗೌಡ ಮಾತ ನಾಡಿ, ‘ಸರ್ಕಾರಿ ಕೆಲಸಗಳು ನಿಗದಿತ ಸಮಯಕ್ಕೆ ನಡೆಯುತ್ತಿಲ್ಲ. ವಾರದಲ್ಲಿ ಮೂರು ದಿನ ಪಿಡಿಒ, ಕಾರ್ಯದರ್ಶಿ ತಡವಾಗಿ ಕರ್ತವ್ಯಕ್ಕೆ ಬರುತ್ತಾರೆ. ಇದ ರಿಂದ ಕೆಲಸಗಳು ನನೆಗುದಿಗೆ ಬಿದ್ದಿವೆ. ಪಂಚಾಯಿತಿ ವತಿಯಿಂದ ನಿರ್ಮಿಸಿ ಕೊಟ್ಟಿರುವ ಶೌಚಾಲಯಗಳಿಗೆ ಇನ್ನೂ ಹಣ ಪಾವತಿ ಮಾಡಿಲ್ಲ’ ಎಂದು ದೂರಿದರು.

ಇನ್ನೊಬ್ಬ ಸದಸ್ಯ ಕೃಷ್ಣೇಗೌಡ ಮಾತನಾಡಿ, ‘ಕೆಲಸ ಕಾರ್ಯಗಳ ನಿಮಿತ್ತ ಪಿಡಿಒ ಹೊರ ಹೋಗ ಬೇಕಾಗುತ್ತದೆ. ಇದನ್ನೆ ಪ್ರಮುಖವಾಗಿ ಟ್ಟುಕೊಂಡು ಹೋರಾಟ ಮಾಡುತ್ತಿಲ್ಲ. ಸಾರ್ವಜನಿಕರ ಕೆಲಸ ಕಾರ್ಯಗಳು ಸಕಾಲ ದಲ್ಲಿ ನಡೆಯದಿರುವ ಕುರಿತು ದೂರುಗಳು ಬರದಂತೆ ಕರ್ತವ್ಯ ನಿರ್ವಹಿಸು ವುದು ಅಗತ್ಯ’ ಎಂದರು. ಗ್ರಾಮದ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT