ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಯೋ ಸೆಂಟರ್‌ಗಳಲ್ಲಿ ಪಡಿತರ ಚೀಟಿ ಸೇವೆ

Last Updated 18 ಜುಲೈ 2017, 8:39 IST
ಅಕ್ಷರ ಗಾತ್ರ

ಮಂಗಳೂರು: ಸರ್ಕಾರವು ಪಡಿತರ ಚೀಟಿದಾರರ ಅನುಕೂಲಕ್ಕಾಗಿ ಫೋಟೋ ಬಯೋ ಸೆಂಟರ್‌ಗಳಲ್ಲಿ ಪಡಿತರ ಚೀಟಿ ಸೇವೆ (ಸ್ವಯಂ ಮುದ್ರಣ) ಪ್ರಾರಂಭಿಸಿದೆ.
ಫೋಟೋ ಬಯೋ ಸೆಂಟರ್‌ಗಳಲ್ಲಿ ಪಡಿತರ ಸಾಮಗ್ರಿಗಳ ನಿರಾಕರಣೆ, ನ್ಯಾಯಬೆಲೆ ಅಂಗಡಿ ಬದಲಾವಣೆ, ಪಡಿತರ ಚೀಟಿಯಿಂದ ಹೆಸರು ತೆಗೆದು ಹಾಕುವುದು ಹಾಗೂ ಪಡಿತರ ಚೀಟಿ ಉನ್ನತೀಕರಣಕ್ಕಾಗಿ ಪಡಿತರ ಚೀಟಿದಾರರು ಕೋರಿಕೆ ಸಲ್ಲಿಸಬಹುದು. ಪಡಿತರ ಸಾಮಗ್ರಿಗಳ ವಿತರಣೆಯ ಕೋರಿಕೆಯನ್ನು ಆಹಾರ ನಿರೀಕ್ಷಕರ ಲಾಗಿನ್‌ಗೆ ಮುಂದಿನ ಕ್ರಮಕ್ಕಾಗಿ ಕಳುಹಿಸಲಾಗುತ್ತದೆ.

ಪಡಿತರ ನಿರಾಕರಣೆಗೆ ಕೋರಿಕೆ ಸಲ್ಲಿಸಿದವರಿಗೆ, ಪಡಿತರ ಸಾಮಗ್ರಿ ದೊರೆಯದಿದ್ದಲ್ಲಿ, ನ್ಯಾಯಬೆಲೆ ಅಂಗಡಿ ಬದಲಾವಣೆ, ಹೆಸರು ತೆಗೆಯುವುದು ಹಾಗೂ ಪಡಿತರ ಚೀಟಿ ಉನ್ನತೀಕರಣಗಳ ಕೋರಿಕೆಯನ್ನು ಸೇವಾ ಕೇಂದ್ರದಲ್ಲಿಯೇ ಮಾಡಿಕೊಡಲಾಗುತ್ತದೆ. ಈ ರೀತಿ ಬದಲಾವಣೆ ಆದ ಪಡಿತರ ಚೀಟಿ ಮುದ್ರಿತ ಪ್ರತಿಯನ್ನು ಫೋಟೋ ಬಯೋ ಕೇಂದ್ರದಿಂದ ಪಡೆದುಕೊಳ್ಳಬಹುದು.  ಫೋಟೋ ಬಯೋ ಕೇಂದ್ರದಲ್ಲಿ ಪಡಿತರ ಚೀಟಿಯಲ್ಲಿ ವಿಳಾಸ/ಸದಸ್ಯರ/ಅಂಗಡಿಯ ಬದಲಾವಣೆ ಆಯ್ಕೆ ಮಾಡಿಕೊಂಡಲ್ಲಿ, ಬದಲಾವಣೆ ಆದ ಪಡಿತರ ಚೀಟಿಯ ಮುದ್ರಿತ ಪ್ರತಿಯು ಸ್ಪೀಡ್ ಪೋಸ್ಟ್ ಮೂಲಕ ಪಡಿತರ ಚೀಟಿದಾರರ ವಿಳಾಸಕ್ಕೆ ಬರುತ್ತದೆ.

ಪಡಿತರ ಚೀಟಿದಾರರು ತಮ್ಮ ಸಮೀಪದ ಫೋಟೋ ಬಯೋ ಸೆಂಟರ್‌ನಿಂದ ಈ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ. ಸಕ್ಕರೆ, ಸೂರ್ಯಕಾಂತಿ ಎಣ್ಣೆ ಲಭ್ಯ: ಎಎವೈ ಮತ್ತು ಬಿಪಿಎಲ್ ಪಡಿತರ ಚೀಟಿದಾರರಿಗೆ ಅಕ್ಕಿ ಮತ್ತು ತೊಗರಿ ಬೇಳೆಯನ್ನು ವಿತರಿಸಲಾಗುತ್ತಿದ್ದು, ಜುಲೈ ತಿಂಗಳಿನಲ್ಲಿ  ಅಕ್ಕಿ ಮತ್ತು ತೊಗರಿ ಬೇಳೆಯಲ್ಲದೆ ಸಕ್ಕರೆ ಹಾಗೂ ಸೂರ್ಯಕಾಂತಿ ಎಣ್ಣೆಯನ್ನು ಸಹ ವಿತರಿಸಲಾಗುತ್ತಿದೆ. ಪಡಿತರ ಚೀಟಿದಾರರು ಜುಲೈ ತಿಂಗಳಲ್ಲಿ ಅಕ್ಕಿ, ತೊಗರಿಬೇಳೆ, ಸಕ್ಕರೆ ಹಾಗೂ ಸೂರ್ಯಕಾಂತಿ ಎಣ್ಣೆ ಪಡೆದುಕೊಳ್ಳುವಂತೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕ ಜಯಣ್ಣ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT