ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಕು ಸಾಗಣೆಗೆ ರೋಡ್‌ರನ್ನರ್‌’

Last Updated 18 ಜುಲೈ 2017, 19:30 IST
ಅಕ್ಷರ ಗಾತ್ರ

ಸರಕುಗಳನ್ನು ಸಾಗಾಣಿಕೆಯ ದೇಶದ ಅತಿ ದೊಡ್ಡ ಕಂಪೆನಿಯಾಗಿರುವ ‘ರೋಡ್‌ರನ್ನರ್‌’ನಲ್ಲಿ (Roadrunnr) ಯುವಕರ ದೊಡ್ಡ ಪಡೆಯೇ  ಕಾರ್ಯನಿರ್ವಹಿಸುತ್ತಿದೆ. ಆಹಾರ ಪದಾರ್ಥಗಳಿರಬಹುದು ಅಥವಾ ದಿನನಿತ್ಯದ ಸಾಮಗ್ರಿಗಳಿರಬಹುದು. ಆರ್ಡರ್‌ ಪಡೆದ ಕೆಲವೇ ನಿಮಿಷಗಳಲ್ಲಿ ಮನೆ ಬಾಗಿಲಿಗೆ ಈ ಯುವಕರು ನಿಮ್ಮ ಅಗತ್ಯ ವಸ್ತುಗಳನ್ನು ತಲುಪಿಸುತ್ತಾರೆ.

ಸ್ಥಳೀಯ ವ್ಯಾಪಾರಿಗಳು, ರೆಸ್ಟೋರಂಟ್‌ ಮತ್ತು ಇ–ಕಾಮರ್ಸ್‌ ಕಂಪೆನಿಗಳ ಯಾವುದೇ ವಸ್ತುಗಳನ್ನು ಸಮರ್ಪಕವಾಗಿ ಮತ್ತು ಸಕಾಲಕ್ಕೆ ಸೂಕ್ತ ಬೆಲೆಯಲ್ಲಿ ಸಾಗಿಸುವ ಸೇವೆಯನ್ನು ‘ರೋಡ್‌ರನ್ನರ್‌’ ಒದಗಿಸುತ್ತದೆ. ದೇಶದಲ್ಲಿನ ಪ್ರತಿಯೊಬ್ಬ ವ್ಯಾಪಾರಿಯ ಅಗತ್ಯತೆಗಳಿಗೆ ಸ್ಪಂದಿಸುವ ರೀತಿಯಲ್ಲಿ ‘ರೋಡ್‌ ರನ್ನರ್‌’ ಸೇವೆ ಸಲ್ಲಿಸುತ್ತಿದೆ. ಇದು ತಂತ್ರಜ್ಞಾನ ಆಧಾರಿತ ಸೇವೆಯಾಗಿದ್ದು, ಸಮರ್ಥವಾಗಿ ಸಾಮಗ್ರಿಗಳ ನಿರ್ವಹಣೆ ಕೈಗೊಳ್ಳುತ್ತದೆ.

ವ್ಯಾಪಾರಿಗಳಿಗೂ ಮತ್ತು ಚಾಲಕರಿಗೂ ಅನುಕೂಲವಾಗುವಂತೆ ‘ರೋಡ್‌ರನ್ನರ್‌’ ಸೇವೆ ಒದಗಿಸುತ್ತದೆ. ಕಂಪೆನಿಯು ಅರೆಕಾಲಿಕವಾಗಿ ಕೆಲಸ ಮಾಡುವ ವಿದ್ಯಾರ್ಥಿಗಳು, ಚಾಲಕರು ಮತ್ತು ಇತರರ ಜತೆ ಸಹಭಾಗಿತ್ವ ಹೊಂದಿದೆ. ಕಠಿಣ ಸಮಸ್ಯೆಗಳಿಗೆ ಸುಲಭವಾಗಿ ಪರಿಹಾರ ಕಂಡುಕೊಳ್ಳುವಲ್ಲಿ ಕಂಪೆನಿ ಸಿದ್ಧಹಸ್ತವೆನಿಸಿದೆ. ದೇಶದ 11 ನಗರಗಳಲ್ಲಿ ಕಾರ್ಯನಿರ್ವಹಿಸುವ ಕಂಪೆನಿ ಇದೇ ವರ್ಷ ಫೆಬ್ರುವರಿಯಲ್ಲಿ ಬೆಂಗಳೂರಿನಲ್ಲೂ ಸೇವೆ ಒದಗಿಸಲು ಆರಂಭಿಸಿತು.

‘ರೋಡ್‌ರನ್ನರ್‌’ ₹ 1.1 ಕೋಟಿ ಹೂಡಿಕೆ ಮಾಡಿದೆ. ಈ ಕಂಪೆನಿಗೆ ಸೆಕ್ವಾ ಕ್ಯಾಪಿಟಲ್‌, ನೆಕ್ಸಸ್‌ ವೆಂಚುರ್‌ ಪಾರ್ಟನರ್ಸ್‌ ಮತ್ತು ಬ್ಲೂಮ್‌ ಕ್ಯಾಪಿಟಲ್‌ ಬೆಂಬಲಿಸಿವೆ. ರೋಡರನ್ನರ್‌ ಕಂಪೆನಿಯನ್ನು ಮೋಹಿತ್‌ ಕುಮಾರ್‌ ಮತ್ತು ಅರ್ಪಿತ್‌ ದವೆ ಸ್ಥಾಪಿಸಿದ್ದಾರೆ. ಈ ಇಬ್ಬರೂ ಫ್ಲಿಪ್‌ಕಾರ್ಟ್‌ನಲ್ಲಿ ಒಟ್ಟಿಗೆ ಕಾರ್ಯನಿರ್ವಹಿಸುತ್ತಿದ್ದರು. ಬಳಿಕ ಇವರಿಬ್ಬರು ಸ್ವಂತ ಕಂಪೆನಿ ಸ್ಥಾಪಿಸಿ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಿದ್ದಾರೆ.

ಆನ್‌ಲೈನ್‌ ಮೂಲಕ ವಸ್ತುಗಳ ಸಾಗಾಣಿಕೆಗೆ ಆದೇಶ ದೊರೆತ ನಂತರ ಕಂಪೆನಿಯ ಯುವಪಡೆ ಅದನ್ನು ಸಾಗಿಸುವ ಕಾರ್ಯದಲ್ಲಿ ತೊಡಗುತ್ತದೆ. ಗ್ರಾಹಕರು ಸಹ ಆನ್‌ಲೈನ್‌ ಮೂಲಕ ಸಾಗಾಣಿಕೆಯ ಅಥವಾ ಪೂರೈಕೆಯ ಸ್ಥಿತಿಗತಿಯ ಬಗ್ಗೆ ವಿವರ ಪಡೆಯಬಹುದು. ಈಗಾಗಲೇ 10 ಕೋಟಿಗೂ ಹೆಚ್ಚು ಸರಕುಗಳನ್ನು ಅಲ್ಪಾವಧಿಯಲ್ಲಿ ಸಾಗಿಸಿದ ಕೀರ್ತಿ ‘ರೋಡರನ್ನರ್‌’ಗೆ ಇದೆ. 5 ಸಾವಿರಕ್ಕೂ ಹೆಚ್ಚು ವ್ಯಾಪಾರಿಗಳು ‘ರೋಡ್‌ರನ್ನರ್‌’ ಸೇವೆಯಿಂದ ಸಂತೃಪ್ತರಾಗಿದ್ದಾರೆ.

ಬೇಡಿಕೆ ಆಧಾರದ ಮೇಲೆ ಸರಕುಗಳನ್ನು ಮನೆಗೆ ತಲುಪಿಸುವ ಪೂರೈಕೆ ಮಾಡುವ ಸಂಸ್ಥೆ ಇದಾಗಿದೆ. ಇಲ್ಲಿ ಪೂರ್ಣಾವಧಿ ಇಲ್ಲವೆ ಬಿಡುವಿನ ವೇಳೆಯಲ್ಲಿ ಕೆಲಸ ಮಾಡಲು ಅವಕಾಶವೂ ಇದೆ. ಆದಾಯದ ಖಾತರಿಯನ್ನೂ ಸಂಸ್ಥೆ ಒದಗಿಸುತ್ತದೆ.

ಸದ್ಯಕ್ಕೆ ಸಂಸ್ಥೆಯು ಕೆಎಫ್‌ಸಿ, ಫಿಜ್ಜಾ, ಮ್ಯಾಕ್ ಡೊನಾಲ್ಡ್‌, ಫ್ರೆಷ್‌ ಮೆನು ಮಳಿಗೆಗಳಿಂದ ಆಹಾರಗಳನ್ನು ಗ್ರಾಹಕರಿಗೆ ನಿರ್ದಿಷ್ಟ ಸಮಯದಲ್ಲಿ ಪೂರೈಕೆ ಮಾಡುತ್ತಿದೆ. ಆಸಕ್ತರು, 080 39510207 ಸಂಖ್ಯೆ ಮಿಸ್ಡ್ ಕಾಲ್‌ ಮಾಡಿದರೆ, ಸಂಸ್ಥೆಯೇ ಅವರನ್ನು ಸಂಪರ್ಕಿಸುತ್ತದೆ.

ಸಹ ಸಂಸ್ಥಾಪಕ ಮತ್ತು ಸಿಇಒ ಮೋಹಿತ್‌ ಕುಮಾರ್‌ ಅವರು ರೋಡರನ್ನರ್‌ ಆರಂಭಿಸುವ ಮುನ್ನ ಮೋಹಿತ್‌ ಅವರು ಫ್ಲಿಪ್‌ಕಾರ್ಟ್‌ನಲ್ಲಿ ಪ್ರಾಡಕ್ಟ್‌ ಮ್ಯಾನೇಜರ್‌ ಆಗಿದ್ದರು. ಮೋಹಿತ್‌ ಅವರು ಓಲಾಕ್ಯಾಬ್ಸ್‌ನಲ್ಲಿ ಟ್ಯಾಕ್ಸಿಗಳ ಸೇವೆ ಒದಗಿಸಲು ಅಗತ್ಯವಿರುವ ಮೂಲಸೌಲಭ್ಯಗಳನ್ನು ಕಲ್ಪಿಸುವ ಮತ್ತು ತಂತ್ರಜ್ಞಾನ ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ತೊಡಗಿದ್ದರು.‌ ‘ಹಾಲಿಡೇ ಐಕ್ಯೂ’ನಲ್ಲಿ ಲೀಡ್‌ ಎಂಜಿನಿಯರ್‌ ಆಗಿದ್ದರು. ಮೋಹಿತ್‌ ಪಿಇಎಸ್‌ಐಟಿನಲ್ಲಿ ಕಂಪ್ಯೂಟರ್‌ ವಿಜ್ಞಾನ ಎಂಜಿನಿಯರ್‌ ಪದವಿ ಪಡೆದಿದ್ದಾರೆ.

ಸಹ ಸಂಸ್ಥಾಪಕ ಅರ್ಪಿತ್‌ ದವೆ ಅವರು ಪ್ರಾಡಕ್ಟ್‌ ಮತ್ತು ಅನಾಲಿಟಿಕ್ಸ್‌ ವಿಭಾಗದ ಉಸ್ತುವಾರಿ ಹೊಂದಿದ್ದಾರೆ. ಈ ಮೊದಲು ಅವರು ಫ್ಲಿಪ್‌ಕಾರ್ಟ್‌ನಲ್ಲಿ ಸೇವೆ ಸಲ್ಲಿಸಿದ್ದರು. ಫ್ಲಿಪ್‌ಕಾರ್ಟ್‌ನಲ್ಲಿ ‘ಪ್ರಾಡಕ್ಟ್‌ ಮ್ಯಾನೇಜಮೆಂಟ್‌’ ತಂಡದ ಭಾಗವಾಗಿದ್ದರು. ಖನಿಜ ಮತ್ತು ಲೋಹ ಗಣಿ ಉದ್ಯಮಕ್ಕೆ ಸಂಬಂಧಿಸಿದ ‘ಎಕ್ಸ್ಯಾಲ್‌ ಎಕ್ಪ್ಲೋಸಿವ್’ನ ಸಹ ಸಂಸ್ಥಾಪಕರಾಗಿದ್ದಾರೆ. ಮೆಕ್ಯಾನಿಕಲ್‌ ಎಂಜಿನಿಯರ್‌ ಆಗಿರುವ ಅರ್ಪಿತ್‌ ಅವರು, ಐಐಟಿ ಖರಗ್‌ಪುರದಲ್ಲಿನ ಉದ್ಯಮಿಗಳ ವಿಭಾಗದ ಸಕ್ರಿಯ ಸದಸ್ಯರೂ ಆರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT