ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನ್ ಪ್ರತ್ಯೇಕತಾವಾದಿಗಳಿಂದ ಸ್ವಾಯತ್ತ ರಾಷ್ಟ್ರ ಘೋಷಣೆ

Last Updated 18 ಜುಲೈ 2017, 19:30 IST
ಅಕ್ಷರ ಗಾತ್ರ

ಮಾಸ್ಕೊ: ಪೂರ್ವ ಉಕ್ರೇನ್‌ನಲ್ಲಿರುವ ಪ್ರತ್ಯೇಕತಾವಾದಿಗಳು ತಮ್ಮ ಹಿಡಿದಲ್ಲಿರುವ ಪ್ರದೇಶವನ್ನು ಪ್ರತ್ಯೇಕ ರಾಷ್ಟ್ರ ಎಂದು ಘೋಷಿಸಿಕೊಂಡಿದ್ದಾರೆ.

2015ರಲ್ಲಿ ಬಂಡುಕೋರರ ಜತೆ ಕದನ ವಿರಾಮ ಒಪ್ಪಂದ ಮಾಡಿಕೊಂಡಿದ್ದ ಉಕ್ರೇನ್, ಕೀವ್‌ ಭಾಗದ ಪ್ರದೇಶಗಳನ್ನು  ಕ್ರಮೇಣ ಹಿಂದಿರುಗಿಸುವುದು ಹಾಗೂ ಕೆಲವಕ್ಕೆ ಸ್ವಾಯತ್ತತೆ ಭರವಸೆ ನೀಡಿತ್ತು. ಆದರೆ ಈ ಒಪ್ಪಂದ ಸಂಪೂರ್ಣವಾಗಿ ಜಾರಿಯಾಗಿರಲಿಲ್ಲ.

ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್‌ನ ಪ್ರತ್ಯೇಕತಾವಾದಿಗಳು ‘ಮಲೊರೊಸಿಯಾ’ ಎಂಬ ಪ್ರತ್ಯೇಕ ರಾಷ್ಟ್ರ ನಿರ್ಮಿಸಲಿದ್ದಾರೆ ಎಂದು ಪ್ರತ್ಯೇಕತಾವಾದಿ ನಾಯಕ ಅಲೆಕ್ಸಾಂಡಲ್ ಝಕಾರ್‌ಚೆಂಕೊ ಘೋಷಿಸಿದ್ದಾರೆ. ಡೊನೆಟ್ಸ್ಕ್ ಸುದ್ದಿಸಂಸ್ಥೆ ಇದನ್ನು ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT