ಈ ಗಾಳಿಯು ಅತ್ಯಂತ ಆಳದ ನೀರಿನಲ್ಲಿ ಒತ್ತಡ ಸೃಷ್ಟಿಸಿ, ಅಲ್ಲಿರುವ ಬೆಚ್ಚಗಿನ ನೀರು ಬೃಹತ್ ಮಂಜುಗಡ್ಡೆಗಳ ಕಡೆಗೆ ದಂಡೆಯುದ್ದಕ್ಕೂ ಹರಿಯುತ್ತದೆ. ಹಲವು ದಶಕಗಳಿಂದ ನಡೆಯುತ್ತಿರುವ ಈ ಪ್ರಕ್ರಿಯೆಯಿಂದಾಗಿ ಬೃಹತ್ ಮಂಜುಗಡ್ಡೆ ಹೋಳಾಗುವ ಹಾಗೂ ಕರಗುವ ವಿದ್ಯಮಾನ ನಡೆಯುತ್ತಿದೆ ಎಂದು ಆಸ್ಟ್ರೇಲಿಯಾ ಹವಾಮಾನ ವ್ಯವಸ್ಥೆ ಕೇಂದ್ರದ ಪಾಲ್ ಸ್ಪೆನ್ಸ್ ಹೇಳಿದ್ದಾರೆ.