ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲೆಂಡ್‌ಗೆ ಮಣಿದ ಭಾರತ

Last Updated 18 ಜುಲೈ 2017, 19:30 IST
ಅಕ್ಷರ ಗಾತ್ರ

ಜೊಹಾನ್ಸ್‌ಬರ್ಗ್‌: ವಿಶ್ವ ಮಹಿಳಾ ಹಾಕಿ ಲೀಗ್‌ ಸೆಮಿಫೈನಲ್‌ ಟೂರ್ನಿಯಲ್ಲಿ ಈ ಬಾರಿ ಪ್ರಶಸ್ತಿ ಎತ್ತಿ ಹಿಡಿಯುವ ಭಾರತ ತಂಡದ ಕನಸು ಮಂಗಳವಾರ ಕಮರಿದೆ.

ಕ್ವಾರ್ಟರ್ ಫೈನಲ್‌ ಹಣಾಹಣಿಯಲ್ಲಿ ರಾಣಿ ರಾಂಪಾಲ್‌ ಬಳಗ 1–4 ಗೋಲುಗಳಿಂದ ಇಂಗ್ಲೆಂಡ್‌ಗೆ ಮಣಿದಿದೆ.

ಶುರುವಿನಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ಆಂಗ್ಲರ ನಾಡಿನ ತಂಡ ಮೊದಲ ಕ್ವಾರ್ಟರ್‌ನಲ್ಲೇ ಪ್ರಾಬಲ್ಯ ಮೆರೆಯಿತು. ಗಿಸೆಲ್ಲೆ ಅನಸ್ಲೆ, ಇಂಗ್ಲೆಂಡ್‌ ತಂಡದ ಖಾತೆ ತೆರೆದರು. ಅವರು 6ನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿದರು. 13ನೇ ನಿಮಿಷದಲ್ಲಿ ಅಲೆಕ್ಸ್‌ ಡಾನ್ಸನ್‌   ಗೋಲು ದಾಖಲಿಸಿ ತಂಡದ ಮುನ್ನಡೆ ಹೆಚ್ಚಿಸಿದರು.

ಎರಡನೇ ಕ್ವಾರ್ಟರ್‌ನಲ್ಲಿ ಭಾರತ ತಂಡ ಎದುರಾಳಿಗಳಿಗೆ ತೀವ್ರ ಪೈಪೋಟಿ ಒಡ್ಡಿತು. ಹೀಗಾಗಿ ಯಾವ ತಂಡಕ್ಕೂ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಆದರೆ ಮೂರನೇ ಕ್ವಾರ್ಟರ್‌ನಲ್ಲಿ ಇಂಗ್ಲೆಂಡ್‌ ತಂಡದ ಪರಾಕ್ರಮ ಮುಂದುವರಿಯಿತು.  ಸುಸಾನ್ನ ಟೌನ್‌ಸೆಂಡ್‌  ಗೋಲು ಬಾರಿಸಿ ತಂಡದ ಗೆಲುವನ್ನು ಖಾತ್ರಿ ಪಡಿಸಿದರು.

57ನೇ ನಿಮಿಷದಲ್ಲಿ ಭಾರತದ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿತು. ಡ್ರ್ಯಾಗ್‌ ಫ್ಲಿಕ್ಕರ್‌ ಗುರ್ಜಿತ್‌ ಕೌರ್‌ ಚೆಂಡನ್ನು ಗುರಿ ಸೇರಿಸಿದರು. 60ನೇ ನಿಮಿಷದಲ್ಲಿ ಹನ್ನಾ ಮಾರ್ಟಿನ್‌ ಗೋಲು ಗಳಿಸಿ ಇಂಗ್ಲೆಂಡ್‌ ತಂಡದ ಸಂಭ್ರಮಕ್ಕೆ ಕಾರಣರಾದರು.

5 ಮತ್ತು 8ನೇ ಸ್ಥಾನ ನಿರ್ಧರಿಸಲು ಜುಲೈ 20 ರಂದು ನಡೆಯುವ ಪಂದ್ಯದಲ್ಲಿ  ಭಾರತ ತಂಡ ಆಡಲಿದ್ದು ಎದುರಾಳಿ ಯಾರು ಎಂಬುದು  ಅಂತಿಮವಾಗಿಲ್ಲ.

* ಕಮರಿದ ಭಾರತದ ಪ್ರಶಸ್ತಿ ಕನಸು
* ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 1–4 ಗೋಲುಗಳಿಂದ ಸೋಲು
* ಆಕ್ರಮಣಕಾರಿಯಾಗಿ ಆಡಿದ ಇಂಗ್ಲೆಂಡ್ ಆಟಗಾರ್ತಿಯರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT