ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧ ಶಿವಯೋಗಿ ಪುಣ್ಯಸ್ಮರಣೆ ನಾಳೆ

Last Updated 19 ಜುಲೈ 2017, 6:51 IST
ಅಕ್ಷರ ಗಾತ್ರ

ರೋಣ: ತಾಲ್ಲೂಕಿನಲ್ಲಿ ಆಗಿ ಹೋದ ಪ್ರಮುಖ ಸಿದ್ಧ ಪುರುಷರ ಸಾಲಿನಲ್ಲಿ ಗುಡಿಸಾಗರದ ಸಿದ್ಧ ಶಿವಯೋಗಿಗಳು ಪ್ರಮುಖರು. ಇವರು ಲೌಕಿಕರಿಗೆ ಅಧ್ಯಾತ್ಮ ಮಾರ್ಗ ತೋರಿ ಕ್ರಿಯಾಶೀಲ ಸಂಸ್ಕೃತಿ ಹರಿಕಾರ ಎನಿಸಿಕೊಂಡವರು. ಇಂದಿನ ರಾಯಚೂರ ಜಿಲ್ಲೆ ಲಿಂಗಸ ಗೂರಿನ ರಂಗಾರಿಯವರ ಮನೆತನದಲ್ಲಿ ಜನಿಸಿದ ಸಿದ್ಧ ಶಿವಯೋಗಿಗಳುಬಾಬಣ್ಣ ಎಂಬ ಆರಂಭಿಕ ನಾಮ ಹೊಂದಿದ್ದರು. ಯೌವನಕ್ಕೆ ಕಾಲಿಟ್ಟ ನಂತರ ಹಿರಿಯರ ಅಣತಿಯಂತೆ ಮದುವೆಯಾಗಿ ಪ್ರಾಂಚಿಕ ರಾದರು. ನಂತರ ಅಂತರಂಗದಲ್ಲಿ ಹುದುಗಿದ ಆತ್ಮ ಸಾಕ್ಷಾತ್ಕಾರ ಸೆಳವಿಗೆ ಸಿಲುಕಿ ಏಕಾಂತದಲ್ಲಿ ಧ್ಯಾನಸ್ಥರಾಗಿ ಜ್ಞಾನ ಮಾರ್ಗಕ್ಕಾಗಿ ಹಂಬಲಿಸಿದರು.

ಸುಜ್ಞಾನ ಮಾರ್ಗ ಬೋಧಿಸುವ ಗುರು ವಿನ ಶೋಧನೆ ಮಾಡಿ ಅಲೌಕಿಕರಾಗಬೇಕೆಂದು ನಿಶ್ಚಯಿಸಿದರು. ಪಾದಯಾತ್ರೆ ಮಾಡುತ್ತ ಸಂತ ಮಹಾಂತರನ್ನು ಸಂದ ರ್ಶಿಸುತ್ತ ಹುಬ್ಬಳಿ ನಗರ ತಲುಪಿದರು. ಅಲ್ಲಿ ಸಿದ್ಧಾರೂಢ ಸದ್ದುರುವಿನ  ದರ್ಶನ  ಪಡೆದು ತಮ್ಮ ಮನದಿಂಗಿತ ನಿವೇದಿಸಿ ದರು. ಇವರ ವೇದಾಂತದ ಹಂಬಲ ಅರಿತ ಸಿದ್ಧಾರೂಢರು ನರಗುಂದ ಸಮೀ ಪದ ಬನಹಟ್ಟಿಯ ರುದ್ರಸ್ವಾಮಿಗಳು ಬಳಿ ಹೋಗಲು ತಿಳಿಸಿದರು. ಅವರ ನುಡಿಯಂತೆ ಸಿದ್ಧ ಶಿವಯೋಗಿಗಳು ಬನಹಟ್ಟಿ ರುದ್ರಸ್ವಾಮಿಗಳ ಸನ್ನಿಧಿಗೆ ತಲುಪಿದರು.

ಬೆಣ್ಣೆಹಳ್ಳ ದಡದಲ್ಲಿರುವ ಚಿಕ್ಕಗ್ರಾಮ ಬನಹಟ್ಟಿ ಹೀರೇಮಠದ ರುದ್ರಸ್ವಾಮಿಗಳವರು ಗೃಹಸ್ಥಾಶ್ರಮಿಗಳಾಗಿದ್ದರೂ ಅಲೌಕಿಕ ಸಂಪದ ಹೊಂದಿದ್ದರು. ನಿಜ ಗುಣರ ಆರು ಶಾಸ್ತ್ರಗಳನ್ನು ಮನಮುಟ್ಟು ವಂತೆ ಬೋಧಿಸುತ್ತಿದ್ದರು. ದೈವಿ ಸಾಕ್ಷಾ ತ್ಕಾರ ಪಡೆಯುವ ಅಮರ ಮಾರ್ಗ ತಿಳಿಸುತ್ತಿದ್ದರು. ಅವರ ಅಪ್ಪಣೆ ಪಡೆದ ಸಿದ್ಧ ಶಿವಯೋಗಿಗಳು ಸೇವಾ ನಿರತರಾಗಿ ಗುರುಕೃಪೆಗೆ ಪಾತ್ರಾದರು.

ಇಂದು ಗದಗ ನಗರದಲ್ಲಿ ಬೆಳಗುತ್ತಿ ರುವ ಶಿವಾನಂದ ಮಠದ ಮೂಲಕ ಕರ್ತೃಗಳಾದ ಶಿವಾನಂದ ಸ್ವಾಮಿಗಳು ಸಹಿತ ರುದ್ರಸ್ವಾಮಿಗಳ ಶಿಷ್ಯರಾಗಿ ವೇದಾಂತ ಜ್ಞಾನ ಪಡೆದರು. ಏನು ಓದದ ಬಾಬಣ್ಣ ಗುರುಕರುಣೆ ಪಡೆದ  ಸಿದ್ದ ಶಿವಯೋಗಿ ನಾಮ ಪಡೆದು ಶಾಸ್ತ್ರ ಬೋಧಕರಾಗಿ ಜನರಿಗೆ ಗುರುವಾದರು.

ಆಯುರ್ವೇದಲ್ಲಿ ಅಪಾರ ಜ್ಞಾನ ಪಡೆದು, ಬಾಹ್ಯ ಪ್ರಪಂಚದ ರೋಗ ಕಳೆದು ಜನತೆಗೆ ಸಂಜೀವಿನಿಯಾದರು. ಗುಡಿಸಾಗರ ಗ್ರಾಮಕ್ಕೆ ಗುರು ಆಜ್ಞೆಯಂತೆ ದೇವಿ ಪ್ರವಚನಕಾರರಾಗಿ ಹೋಗಿ ತಮ್ಮ ವಿದ್ವತ್ ತೋರಿಸಿದರು. ಹತ್ತಾರು ವರ್ಷ ಪ್ರವಚನ ಮಾಡಿ ಗುಡಿಸಾಗರದ ಸಾಧು ಎಂಬ ನಾಮ ಪಡೆದರು.

ಹಲ ಗ್ರಾಮ, ಪಟ್ಟಣಗಳನ್ನು ಸುತ್ತಿ ಭಕ್ತರ ಪಾಲಿನ ಕಲ್ಪತರುವಾದರು. ರೋಣ ನಗರಕ್ಕೆ ಭೇಟಿ ನೀಡಿ ತಮ್ಮ ತೇಜಸ್ಸಿನಿಂದ ಭಕ್ತ ರನ್ನು ಸೆಳೆದರು. ಆಗ ವರ್ತಕರಾಗಿದ್ದ ಐವಳ್ಳಿ ಮುದಕಪ್ಪನವರು ಸಿದ್ಧ ಶಿವ ಯೋಗಿಗಳಿಗೆ ಆಶ್ರಯ ಕಲ್ಪಿಸಿದರು. ಜಗ್ಗಲ ನಿಂಗಪ್ಪ ಇವರ ಶಿಷ್ಯರಾಗಿ ಅನೇಕ ಬಗೆಯ ಸೇವೆ ಮಾಡಿದರು. ಸಿದ್ದ ಸಾಧು ಶಿವಯೋಗಿಗಳ 91ನೇ ಪುಣ್ಯಾರಾಧನೆ ಜುಲೈ 20 ಗುರುವಾರ ನಡೆಯಲಿದ್ದು, ಹಲವು ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಬಸವರಾಜ ಪಟ್ಟಣಶೆಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT