ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಬದಿ ವಾಹನ ನಿಲುಗಡೆ: ಕ್ರಮಕ್ಕೆ ಸೂಚನೆ

Last Updated 19 ಜುಲೈ 2017, 9:26 IST
ಅಕ್ಷರ ಗಾತ್ರ

ಬೆಳ್ತಂಗಡಿ: ಗುರುವಾಯನಕೆರೆ, ಬೆಳ್ತಂ ಗಡಿ, ಉಜಿರೆ ರಸ್ತೆಯಲ್ಲಿ ನಿರಂತರ ಟ್ರಾಫಿಕ್ ಜಾಮ್ ಹೆಚ್ಚುತ್ತಿದ್ದು, ಪೋಲಿ ಸರು ಇದರ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ ನಿಯಮ ಉಲ್ಲಂಘಿಸಿ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸುವವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಿ  ಎಂದು ಶಾಸಕ ಬಂಗೇರ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.

ಬೆಳ್ತಂಗಡಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕೆಡಿಪಿ ತ್ರೈಮಾಸಿಕ ಸಭೆಯಲ್ಲಿ ಈ ಸೂಚನೆ ನೀಡಿದ ಅವರು, ‘ಕೆಲವು ತಿಂಗ ಳಿಂದ ಈ ಬಗ್ಗೆ ಹೇಳುತ್ತಿದ್ದರೂ ಪೊಲೀ ಸರು ಗಮನ ಹರಿಸುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಪೊಲೀಸ್‌ ಅಧಿ ಕಾರಿ ‘ಕಲ್ಲಡ್ಕ ಗಲಾಟೆಯಿಂದ ಸಿಬ್ಬಂದಿ ಕೊರತೆ ಇತ್ತು’ ಎಂದು ಉತ್ತರಿಸಿದರು.

‘ನಾಳೆಯಿಂದ ರಸ್ತೆ ಮಧ್ಯೆ ನಿಲ್ಲಿಸುವ ವಾಹನ ಚಾಲಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಅಂತವರ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಿಧಿಸಿ. ಯಾವುದೇ ಕಾರಣಕ್ಕೂ ಟ್ರಾಫಿಕ್ ಜಾಮ್ ಆಗದಂತೆ ನೋಡಿಕೊಳ್ಳಬೇಕು’ ಎಂದು ಬಂಗೇರ ಅಧಿಕಾರಿಗಳಿಗೆ ಸೂಚಿಸಿದರು.

‘ಕೊಕ್ಕಡ ಪಶು ವೈದ್ಯಕೀಯ ಆಸ್ಪತ್ರೆ ಯಲ್ಲಿ ವೈದ್ಯಾಧಿಕಾರಿಗಳು ಆಸ್ಪತ್ರೆಗೆ ಬಾರದೇ ಕರ್ತವ್ಯ ಲೋಪವೆಸಗಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆ ಯಾಗುತ್ತಿದೆ. ಬದಲಿ ವೈದ್ಯರನ್ನು ನೇಮಿಸಿ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಕೊರಗಪ್ಪ ನಾಯ್ಕ್ ಅಧ್ಯಕ್ಷರ ಗಮನಕ್ಕೆ ತಂದರು. ಇದಕ್ಕೆ ಉತ್ತರಿಸಿದ ಶಾಸಕರು ‘ಪಶುಸಂಗೋಪನ ಇಲಾಖೆ ಸಹಾಯಕ ನಿದೇರ್ಶಕರಲ್ಲಿ ಮಾಹಿತಿ ಪಡೆದು ತಕ್ಷಣ ಇವರ ವಿರುದ್ಧ ಕ್ರಮ ಕೈಗೊಂಡು ಅಮಾನತುಗೊಳಿಸುವಂತೆ’ ಸೂಚಿಸಿದರು.

‘ಪಡಿತರ ಅಂಗಡಿಯಲ್ಲಿ ತೂಕ ಮಾಡುವಾಗ ವ್ಯತ್ಯಾಸ ಬರುತ್ತಿದ್ದು, ಪಡಿತರ ಇಳಿಸುವಾಗ ಹಣ ವಸೂಲಿ ಮಾಡು ತ್ತಿರುವ ಬಗ್ಗೆ ಕಳೆದ ಕೆಡಿಪಿ ಸಭೆಯಲ್ಲಿ ಪರಿಶೀಲಿಸಿ ವರದಿ ನೀಡುವಂತೆ ಸೂಚಿಸಲಾಗಿತ್ತು ಈ ಬಗ್ಗೆ ಏನು ಕ್ರಮ ಕೈಗೊಂ ಡಿದ್ದೀರಿ’ ಎಂದು ಶಾಸಕ ಬಂಗೇರ ಆಹಾರ ಇಲಾಖಾಧಿಕಾರಿಗಳನ್ನು ತರಾ ಟೆಗೆ ತೆಗೆದುಕೊಂಡರು. ಇದಕ್ಕೆ ಉತ್ತ ರಿಸಿದ ತಹಶೀಲ್ದಾರ್ ‘ಈಗಾಗಲೇ 12 ನ್ಯಾಯಬೆಲೆ ಅಂಗಡಿಗಳನ್ನು ಪರಿಶೀಲಿ ಸಿದ್ದು, ಯಾವುದೇ ದೋಷ ಕಂಡು ಬಂದಲ್ಲಿ ತಕ್ಷಣ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.  ಹಣ ಪಡೆಯುವ ವರನ್ನು ಈಗಾಗಲೇ ಬದಲಿಸಲಾಗಿದೆ’ ಎಂದರು.

‘ಬಂದಾರು ಅಂಗನವಾಡಿ ಕೆಂದ್ರದ ಜಾಗವನ್ನು ಜಂಟಿ ಸರ್ವೆ ಮಾಡಲು ಸೂಚಿಸಿದ್ದು ಈ ಬಗ್ಗೆ ಏನು ಕ್ರಮ ಕೈಗೊಳ್ಳಲಾಗಿದೆ’ ಎಂದು ತಹಶೀಲ್ದಾರ್‌ ಅವ ರಲ್ಲಿ ಶಾಸಕ ಬಂಗೇರ ಮಾಹಿತಿ ಕೇಳಿದಾಗ ‘ಈಗಾಗಲೇ ಅರಣ್ಯ ಇಲಾಖೆಗೆ ಪತ್ರ ಬರೆದು ಜಂಟಿ ಸರ್ವೆ ಮಾಡುವಂತೆ ತಿಳಿಸಲಾಗಿದೆ’ ಎಂದು ಅಧಿಕಾರಿ ಮಾಹಿತಿ ನೀಡಿದರು.

ಸರಳಿಕಟ್ಟೆ ಶಾಲಾ ಬಳಿ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ ಅಪಾಯದಲ್ಲಿದ್ದು, ಇದನ್ನು ಸರಿಪಡಿಸಬೇಕೆಂದು ಶಾಹುಲ್ ಹಮೀದ್ ಸೂಚಿಸಿದರು. ಇದಕ್ಕೆ ಉತ್ತ ರಿಸಿದ  ಮೆಸ್ಕಾಂ ಸಹಾಯಕ ಕಾರ್ಯ ಪಾಲಕ ಎಂಜಿನಿಯರ್ ಶಿವಶಂಕರ ‘ಶಾಲಾ ಆವರಣೊದೊಳಗೆ ಇದ್ದರೆ ಶಾಲಾ ಮುಖ್ಯಸ್ಥರು ಪತ್ರ ಬರೆದು ಮನವಿ ಮಾಡಿದರೆ ಇಲಾಖಾ ವತಿಯಿಂದ ಸರಿಪಡಿಸಲಾಗುವುದು. ಬೇರೆ ಸ್ಥಳದ ಲ್ಲಿದ್ದರೆ ಇಲಾಖಾ ವತಿಯಿಂದ ದುರಸ್ತಿಪ ಡಿಸಲಾಗುವುದಿಲ್ಲ. ಇದರ ಬಗ್ಗೆ ಸ್ಥಳ ಪರಿಶೀಲನೆ ಮಾಡಲಾಗುವುದು’ ಎಂದರು.

ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ದಿವ್ಯಜ್ಯೋತಿ, ಉಪಾಧ್ಯಕ್ಷೆ ವೇದಾವತಿ, ಆರೋಗ್ಯ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಸುಧೀರ್ ಸುವರ್ಣ, ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್, ತಹಶೀಲ್ದಾರ್ ತಿಪ್ಪೇಸ್ವಾಮಿ, ಮುಖ್ಯ ಕಾರ್ಯನಿರ್ವಹ ಣಾ ಧಿಕಾರಿ ಗುರುರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT