ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್ ಮಾರಾಟ ಮಳಿಗೆ ಪರಿಶೀಲನೆ

Last Updated 19 ಜುಲೈ 2017, 9:55 IST
ಅಕ್ಷರ ಗಾತ್ರ

ಮೈಸೂರು: ಮೊಬೈಲ್‌ನ ಐಎಂಇಎ (ಇಂಟರ್‌ನ್ಯಾಷನಲ್ ಮೊಬೈಲ್ ಎಕ್ವಿಪ್‌ಮೆಂಟ್ ಐಡೆಂಟಿಟಿ) ಸಂಖ್ಯೆ ಯನ್ನು ಬದಲಿಸುವ ವ್ಯವಸ್ಥಿತ ಜಾಲವನ್ನು ನಗರ ಪೊಲೀಸರು ಭೇದಿಸಿದ್ದಾರೆ. ‘ಇದು ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಒಡ್ಡುವಂತಹ ಪ್ರಕರಣವಾಗಿರುವುದರಿಂದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಗಮನಕ್ಕೆ ತರಲಾಗುವುದು’ ಎಂದು ನಗರ ಪೊಲೀಸ್ ಆಯುಕ್ತ ಡಾ. ಎ.ಸುಬ್ರಹ್ಮಣ್ಯೇಶ್ವರರಾವ್ ತಿಳಿಸಿದರು.

ಎಲ್ಲ ಮೊಬೈಲ್ ಮಾರಾಟ ಹಾಗೂ ರಿಪೇರಿ ಅಂಗಡಿಗಳನ್ನು ಐಎಂಇಎ ಸಂಖ್ಯೆ ಬದಲಿಸುವ ಉಪಕರಣಗಳಿಗಾಗಿ ಪರಿಶೀಲನೆ ನಡೆಸಲಾಗುವುದು. ಮೊಬೈಲ್‌ನಲ್ಲಿರುವ ಐಎಂಇಎ ಸಂಖ್ಯೆ ಅಳಿಸುವ 3 ಉಪಕರಣಗಳನ್ನು ಆರೋ ಪಿಗಳಿಂದ ವಶಪಡಿಸಿಕೊಳ್ಳಲಾಗಿದೆ.

ಸಂಖ್ಯೆ ಅಳಿಸಿದ ನಂತರ ಮೊಬೈಲ್‌ ಅನ್ನು ಅಗ್ಗದ ದರಕ್ಕೆ ಮಾರಾಟ ಮಾಡು ತ್ತಿರುವ ಪ್ರಕರಣಗಳಷ್ಟೇ ಗಮನಕ್ಕೆ ಬಂದಿದೆ. ಇಂತಹ ಮೊಬೈಲ್‌ಗಳು ಭಯೋತ್ಪಾದನಾ ಚಟುವಟಿಕೆಯಲ್ಲಿ ಬಳಸುತ್ತಿರುವ ಸಂಭವವನ್ನು ಅಲ್ಲಗಳೆಯಲಾಗದು. ಈ ಮೊಬೈಲ್‌ಗಳಿಗೆ ಹೆಚ್ಚಿನ ಬೇಡಿಕೆ ಇರುವ ಕಾರಣ ಕಳ್ಳರು ಸರಗಳವಿನಿಂದ ಮೊಬೈಲ್‌ ಕಳವಿನ ಕಡೆಗೆ ವಾಲಿದ್ದಾರೆ ಎಂದು ಇಲ್ಲಿ ಮಂಗಳ ವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಕರಣ ಬಯಲಿಗೆ ಬಂದಿದ್ದು ಹೀಗೆ: ರಾಜೀವನಗರದ 2ನೇ ಹಂತದಲ್ಲಿ ಕಡಿಮೆ ಬೆಲೆಗೆ ದುಬಾರಿ ಬೆಲೆಯ ಮೊಬೈಲ್‌ ಫೋನ್‌ ಮಾರಾಟ ಮಾಡಲು ಯತ್ನಿಸುತ್ತಿದ್ದ ಉದಯಗಿರಿಯ ಮೊಹಮ್ಮದ್ ಕಾಶಿಫ್ ಶರೀಫ್ (34) ಹಾಗೂ ಸಾತಗಳ್ಳಿ ಬಡಾವಣೆಯ ಮೊಹಮ್ಮದ್ ಶೋಹೇಬ್ (29), ನೌಷಾದ್‌ ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅವರ ಬಳಿ ವಿವಿಧ ಕಂಪೆನಿಯ 11 ಸ್ಮಾರ್ಟ್‌ಫೋನ್‌ ಗಳು ಪತ್ತೆಯಾ ದವು. ಇವರು ನಡೆಸುತ್ತಿದ್ದ ಮೊಬೈಲ್ ರಿಪೇರಿ ಅಂಗಡಿಗಳಿಗೆ ಕಳ್ಳರು ಕದ್ದಿರುವ ಮೊಬೈಲ್‌ಗಳನ್ನು ಮಾರಾಟ ಮಾಡುತ್ತಿದ್ದರು.

ಇವರು ಮೊಬೈಲ್ ಫ್ಲಾಷಿಂಗ್ ಮತ್ತು ಐಎಂಇಎ ಚೇಂಜಿಂಗ್ ಯಂತ್ರಗಳನ್ನು ಬಳಸಿ, ಮೊಬೈಲ್‌ನಲ್ಲಿರುವ ಐಎಂಇಎ ಸಂಖ್ಯೆ ಬದಲಿಸಿ ಮಾರಾಟ ಮಾಡುತ್ತಿದ್ದರು. ಇವರ ಮಳಿಗೆಯಿಂದ ಇಂತಹ 3 ಯಂತ್ರ, ವಿವಿಧ ಕಂಪೆನಿಯ ₹ 2.5 ಲಕ್ಷ ಮೌಲ್ಯದ 22 ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT