ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಮರಳುಗಾರಿಕೆ: ಕ್ರಮಕ್ಕೆ ಒತ್ತಾಯ

Last Updated 19 ಜುಲೈ 2017, 11:18 IST
ಅಕ್ಷರ ಗಾತ್ರ

ರಾಮನಗರ:‘ಬಿಡದಿ ಹೋಬಳಿಯ ಕೊಡಿಯಾಲ ಕರೇನಹಳ್ಳಿಯ ಪಕ್ಕದ ಕತ್ತಾಲೆಪಾಳ್ಯದಲ್ಲಿ ನಿರಂತರವಾಗಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆ ನಿಲ್ಲಿಸಬೇಕು’ ಎಂದು ಗ್ರಾಮಸ್ಥರು ಶಾಸಕ ಬಾಲಕೃಷ್ಣ ಹತ್ತಿರ ಅವಲತ್ತುಕೊಂಡರು. ನಗರದ ಮಿನಿವಿಧಾನಸೌಧದಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜನಸ್ಪಂದನ ಸಭೆಯಲ್ಲಿ ಅಕ್ರಮ ಮರಳುಗಾರಿ ಕೆಯಿಂದಾಗುತ್ತಿರುವ ಅನಾನುಕೂಲಗಳ ಬಗ್ಗೆ ಶಾಸಕರಿಗೆ ಮನವರಿಕೆ ಮಾಡಿ ಕೊಟ್ಟರು.

‘ಮಣ್ಣನ್ನು ಸಂಗ್ರಹಿಸಿ ಅಕ್ರಮವಾಗಿ ಮರಳನ್ನು ಸಿದ್ದಪಡಿಸಿ ಮಾರಾಟ ಮಾಡಲಾಗುತ್ತಿದೆ. ಇದರಿಂದ ಇಲ್ಲಿರುವ ಕೆರೆ ನಾಶವಾಗಿದೆ. ಮಳೆ ಬಂದಾಗ ಈ ಕೆರೆಗೆ ನೀರು ಬರುವ ಹಳ್ಳಕೊಳ್ಳಗಳಲೆಲ್ಲಾ ಅಕ್ರಮ ಮರಳುಗಾರಿಕೆ ನಡೆಯುತ್ತಿ ರುವು ದರಿಂದ ಕೆರೆಗೆ ನೀರು ಬರುತ್ತಿಲ್ಲ’ ಎಂದು ತಿಳಿಸಿದರು.

‘ಹಳ್ಳಗಳಲ್ಲಿನ ಮಣ್ಣಿನಿಂದ ಮರಳನ್ನು ತೆಗೆಯುತ್ತಿರುವುದರಿಂದ ಮಳೆ ಬಂದಾಗ ಮಳೆ ನೀರು ಕೆರೆಗೆ ಹೋಗದೆ ನಮ್ಮ ಹೊಲಗಳಿಗೆ ನುಗ್ಗುತ್ತಿದೆ. ಇದರಿಂದ ನಾವು ಹಾಕಿರುವ ಬೆಳೆಗಳೆಲ್ಲಾ ನಾಶವಾಗುತ್ತಿದೆ. ಅಕ್ರಮ ಮರಳುಗಾರಿಕೆ ದಯವಿಟ್ಟು ನಿಲ್ಲಿಸಿ’ ಎಂದು ಅಳಲು ತೋಡಿಕೊಂಡರು.

ಅಕ್ರಮ ಖಾತೆ : ಕಂಚಗಾರನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಸರ್ಕಾರಿ ಜಮೀನು ಬೇರೆಯವರ ಹೆಸರಿಗೆ ಈ ಖಾತೆ ಮಾಡಿಕೊಡಲಾಗುತ್ತಿದೆ. ಇಲ್ಲಿನ ಪಿಡಿಒ ಅವರಿಗೆ ಈ ಬಗ್ಗೆ ತಿಳಿಸಿ ದರೂ ಅವರು ಕೂಡ ಅಕ್ರಮ ಖಾತೆ ಮಾಡಿಕೊಡುವುದರಲ್ಲಿ ತೊಡಗಿಕೊಂಡಿದ್ದಾರೆ ಎಂದು ಗ್ರಾಮಸ್ಥರು ದೂರಿದರು.

ಕಾಲ ಕಳೆಯಲು ಬರಬೇಡಿ: ಮಂಚ ನಾಯನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುರುಬೋವಿ ದೊಡ್ಡಿಯಲ್ಲಿನ ಸರ್ಕಾರಿ ಶಾಲೆಯ ಆವರಣದ ಒತ್ತುವರಿ ಆಗಿದೆ. ಸರ್ವೆ ಮಾಡಿ ಜಾಗ ಬಿಡಿಸಿಕೊಡಿ ಎಂದು ಹಲವು ಬಾರಿ ಹೇಳಿದ್ದರೂ ಇಲ್ಲಿಯ ವರೆವಿಗೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.

ಈ ಸಂದರ್ಭದಲ್ಲಿ ಶಾಸಕ ಬಾಲಕೃಷ್ಣ ಮಾತನಾಡಿ ‘ಅಧಿಕಾರಿಗಳು ಕಥೆ ಹೇಳುವುದನ್ನು ಉಡಾಫೆ ಉತ್ತರ ನೀಡುವುದನ್ನು ಬಿಡಬೇಕು. ಕಾಲಕಳೆಯಲು ಕಚೇರಿಗಳಿಗೆ ಬರಬಾ ರದು. ಸರ್ವೆ ಇಲಾಖೆಯ ಅಧಿಕಾರಿಗಳು ಏಕೆ ಶಾಲೆಯ ಜಾಗ ಸರ್ವೆ ಮಾಡಿ ಗುರುತಿ ಸುತ್ತಿಲ್ಲ’ ಎಂದು ಹರಿಹಾಯ್ದರು.

‘ಅಧಿಕಾರಿಗಳು ಮೊದಲು ಸರ್ಕಾರಿ ಜಾಗಗಳು ಒತ್ತುವರಿಯಾಗಿರುವುದನ್ನು ಗುರುತಿಸಿ. ಸರ್ಕಾರಿ ಸ್ಥಳಗಳನ್ನು ಬೇರೆ ಯವರಿಗೆ ಖಾತೆ ಮಾಡಿಕೊಡಬೇಡಿ. ಅಕ್ರಮ ಮರಳುಗಾರಿಕೆ ಕೂಡಲೇ ನಿಲ್ಲಿಸಿ ಕ್ರಮ ತೆಗೆದುಕೊಳ್ಳಿ’ ಎಂದು ತಿಳಿಸಿದರು.

ಮಾರೇಗೌಡನದೊಡ್ಡಿಯ ಸರ್ಕಾರಿ ಶಾಲೆಗೆ ಶಿಕ್ಷಕರ ಅವಶ್ಯಕತೆ ಇದೆ ಎಂದು ಹೇಳುತ್ತಿದ್ದಾರೆ. ಕೂಡಲೆ ಅಲ್ಲಿಗೆ ಶಿಕ್ಷಕರನ್ನು ನೇಮಿಸಿ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗೆ ಸೂಚಿಸಿದರು. ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಕಾಶ್, ಕಾರ್ಯ ನಿರ್ವಹಣಾಧಿಕಾರಿ ಚಂದ್ರು, ಮಾಜಿ ಸದಸ್ಯ ಎಚ್. ಶಿವಪ್ರಸಾದ್, ಪ್ರಭಾರ ತಹಶೀಲ್ದಾರ್ ಶಿವಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT