ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಲಾಜಿಲ್ಲದೆ ತೆರವುಗೊಳಿಸಿ:ಶಾಸಕ

Last Updated 19 ಜುಲೈ 2017, 11:19 IST
ಅಕ್ಷರ ಗಾತ್ರ

ಮಾಗಡಿ: ‘ಗುಂಡು ತೋಪು ಮತ್ತು ಸ್ಮಶಾನದಲ್ಲಿ ಕಟ್ಟಿಸಿರುವ ಮನೆಗಳನ್ನು ಮುಲಾಜಿಲ್ಲದೆ ತೆರವುಗೊಳಿಸಿ ಕೆರೆಕಟ್ಟೆ ಗುಡಿಗೋಪುರ, ಚಾರಿತ್ರಿಕ ಸ್ಮಾರಕ ಮತ್ತು  ಕಲ್ಯಾಣಿಗಳನ್ನು ಮುಂದಿನ ಪೀಳಿಗೆಗೆ ಉಳಿಸಬೇಕು’ ಎಂದು  ಶಾಸಕ ಎಚ್‌.ಸಿ. ಬಾಲಕೃಷ್ಣ ಸೂಚನೆ ನೀಡಿದರು. ತಹಶೀಲ್ದಾರರ ಕಚೇರಿಯಲ್ಲಿ ಮಂಗಳವಾರ ನಡೆದ ಜನಸ್ಪಂದನ ಸಭೆಯಲ್ಲಿ  ಅವರು ಮಾತನಾಡಿದರು,

‘ಮಾಗಡಿಯಿಂದ ಮಾಡಬಾಳ್‌, ನೇತೇನಹಳ್ಳಿ, ಮಾನಗಲ್‌ ಮೂಲಕ ತೂಬಿಕೆರೆ ಸುತ್ತಮುತ್ತಲಿನ ಗ್ರಾಮಗಳಿಗೆ ಪ್ರತಿನಿತ್ಯ ನೂರಾರು ಅಫೆ ಆಟೋಗಳು ಸಂಚರಿಸುತ್ತಿವೆ. ರಸ್ತೆಯ ನಡುವೆ ಬಿದ್ದಿ ರುವ ಗುಂಡಿಗಳಿಂದ ವಾಹನ ಚಾಲಕ ರಿಗೆ ತುಂಬಾ ತೊಂದರೆಯಾಗಿದೆ, ರಸ್ತೆಯ ದುರಸ್ಥಿ ಮಾಡಿಸುವಂತೆ’ ಆಟೊ ಚಾಲಕರ ಸಂಘದ ಶಿವಕುಮಾರ್‌ ಮನವಿ ಮಾಡಿದರು.

ಹೊಂಬಾಳಮ್ಮನ ಪೇಟೆಯಿಂದ ಮಾಡ ಬಾಳ್‌ ಮತ್ತು ನೇತೇನಹಳ್ಳಿ ಸಂಪರ್ಕ ರಸ್ತೆಯಲ್ಲಿ ಬಿದ್ದಿರುವ ನೂರಾ ರು ಗುಂಡಿ ತಕ್ಷಣ ಮುಚ್ಚಿಸುವಂತೆ ಶಾಸಕರು ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ ರವಿಕುಮಾರ ನಾಯಕ ಅವರಿಗೆ ಸೂಚಿಸಿದರು.

ಬಗರ್‌ ಹುಕುಂ ಸಾಗುವಳಿ ದಾರರ ಅರ್ಜಿ ಪರಿಶೀಲಿಸಿ ತಕ್ಷಣ ಸಾಗುವಳಿ ಚೀಟಿ ನೀಡಬೇಕು. ಮಠದ ಪಾಳ್ಯದ ಮಾರೇ ಗೌಡ (78) ಇನ್ನೂ ಜೀವಂತ ವಾಗಿದ್ದು  ವೃದ್ದಾಪ್ಯ ವೇತನ ನೀಡಬೇಕು ಎಂದು ಶಾಸಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಬಿಸ್ಕೂರಿನ ಸರ್ಕಾರಿ ಕೆರೆಯಲ್ಲಿ ಅಕ್ರಮವಾಘೀ ಉಳುಮೆ ಮಾಡಿ ವ್ಯವಸಾಯ ಮಾಡಿಕೊಂಡಿರುವವರನ್ನು ತೆರವು ಗೊಳಿಸಬೇಕು ಎಂದರು.

ನಿವೇಶನ:  ‘ಗ್ರಾಮಸಭೆ ಕರೆದು ನಿಜ ವಾದ ಬಡವರನ್ನು ಪಕ್ಷಾತೀತವಾಗಿ ಗುರುತಿಸಿ, ಲಾಟರಿ ಮೂಲಕ 30X40 ನಿವೇಶನ ನೀಡಬೇಕು. ನೇತೇನಹಳ್ಳಿ, ಸುಗ್ಗನಹಳ್ಳಿ, ಕಣ್ಣೂರು ಇತರೆಡೆಗಳಲ್ಲಿನ ಕಡುಬಡವರಿಗೆ ನಿವೇಶನ ನೀಡಬೇಕು’ ಎಂದು ಶಾಸಕರು ತಿಳಿಸಿದರು, ಕಲ್ಯಾದಿಂದ ಶ್ರೀಪತಿಹಳ್ಳಿ ಮಾರ್ಗ ವಾಗಿ ಭೈರನಹಳ್ಳಿವರೆಗೆ ರಸ್ತೆ ವಿಸ್ತರಣೆ ಮಾಡಲಾಗುವುದು ಎಂದು ಅವರು ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸುರೇಶ್‌, ತಾಲ್ಲೂಕು ಪಂಚಾಯಿತಿ ಸದಸ್ಯರಾದ ನಾರಾಯಣಪ್ಪ, ವೆಂಕ ಟೇಶ್‌, ತಾ.ಪಂ, ಇಒ, ಟಿ.ಮುರುಡ ಯ್ಯ, ತಹಶೀಲ್ದಾರ್‌ ಎನ್‌.ಕೆ. ಲಕ್ಷ್ಮೀ ಸಾಗರ್‌, ಬಿಇಒ ರಂಗಸ್ವಾಮಿ, ಉಪ ತಹಶೀಲ್ದಾರ್‌ ಮಂಜುನಾಥ್‌, ಪಂಚಾಯತ್‌ ರಾಜ್‌ ಎಇಇ ಪ್ರಸನ್ನಕುಮಾರ್‌, ಎಂಜಿನಿಯರ್‌ ಗುಣಶೇಖರ್‌ ಹಾಗೂ ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಮತ್ತು ಸಾರ್ವಜನಿಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT