ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಪರಾಧ ತಡೆಗೆ ಪೊಲೀಸರ ಜತೆ ಸಹಕರಿಸಿ’

Last Updated 19 ಜುಲೈ 2017, 11:30 IST
ಅಕ್ಷರ ಗಾತ್ರ

ಆನೇಕಲ್‌: ‘ಅಪರಾಧ ತಡೆ ಯಲು ಸಾರ್ವಜನಿಕರು ಪೊಲೀಸರೊಂ ದಿಗೆ ಸಹಕರಿಸಬೇಕು’ ಎಂದು ಬೆಂಗ ಳೂರು ಗ್ರಾಮಾಂತರ ಉಪವಿಭಾಗದ ಡಿವೈಎಸ್ಪಿ ಎಸ್.ಕೆ. ಉಮೇಶ್‌ ತಿಳಿಸಿದರು. ತಾಲ್ಲೂಕಿನ ಅತ್ತಿಬೆಲೆಯಲ್ಲಿ ನಡೆದ ಅತ್ತಿಬೆಲೆ ಹಾಗೂ ಸರ್ಜಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮಗಳ ಬೀಟ್‌ ಕಮಿಟಿ ಗಸ್ತು ಸದಸ್ಯರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

‘ಪ್ರತಿ ಗ್ರಾಮಗಳಿಗೆ ಬೀಟ್‌ ಪೊಲೀಸ ರನ್ನು ನಿಗದಿ ಪಡಿಸಲಾಗಿದೆ. ಅವರ ವಿಳಾಸ, ಮೊಬೈಲ್ ಸಂಖ್ಯೆ ಹಾಗೂ ಸಂಪರ್ಕ ಮಾಹಿತಿಯನ್ನು ಶಾಲೆ, ಅಂಗನವಾಡಿಗಳ ಬಳಿ ಪ್ರಕಟಿಸಲಾಗಿದೆ. ಗ್ರಾಮದಲ್ಲಿ ಇವರೊಂದಿಗೆ ಸಹಕರಿಸಲು ಗಸ್ತು ಸಮಿತಿಯನ್ನು ರಚಿಸಲಾಗಿದೆ’ ಎಂದರು.

ಬೀಟ್‌ ಪೊಲೀಸರು ಪ್ರತಿ ಗ್ರಾಮದ ಮಾಹಿತಿಯನ್ನು ಮೊಬೈಲ್‌ ಮೂಲಕ ಇಲಾಖೆಗೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಗ್ರಾಮಗಳಲ್ಲಿ ತಿಳಿಸಿದ ಸಮಸ್ಯೆಗಳಿಗೆ ಈ ಮೂಲಕ ಇಲಾಖೆ ಸ್ಪಂದಿಸಲಿದೆ ಎಂದು ತಿಳಿಸಿದರು.

ಹೆಬ್ಬಗೋಡಿ ಸರ್ಕಲ್‌ ಇನ್‌ಸ್ಪೆಕ್ಟರ್‌ ಕೆ.ವಿಶ್ವನಾಥ್‌, ಅತ್ತಿಬೆಲೆ ಸರ್ಕಲ್‌ ಇನ್‌ಸ್ಪೆಕ್ಟರ್‌ ಎಲ್.ವೈ.ರಾಜೇಶ್, ಸೂರ್ಯಸಿಟಿ ಸರ್ಕಲ್‌ ಇನ್‌ಸ್ಪೆಕ್ಟರ್ ಕೃಷ್ಣನ್‌, ಅತ್ತಿಬೆಲೆ ಸಬ್‌ಇನ್‌ಸ್ಪೆಕ್ಟರ್‌ ಗಜೇಂದ್ರ, ಸರ್ಜಾಪುರ ಸಬ್‌ಇನ್‌ಸ್ಪೆಕ್ಟರ್‌ ನವೀನ್‌ಕುಮಾರ್, ದೊಮ್ಮಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಮೇಶ್‌ಬಾಬು, ಬಗರ್‌ಹುಕುಂ ಸಾಗುವಳಿ ಮಂಜೂರಾತಿ ಸಮಿತಿ ಸದಸ್ಯೆ ಸುಶೀ ಲಮ್ಮ ಹಾಜರಿದ್ದರು.

ಬಮೂಲ್ ನಿರ್ದೇಶಕ ಬಿ.ಜಿ. ಆಂಜಿನಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಶಂಕರರೆಡ್ಡಿ, ಉಮಾದೇವಿ, ಮುಖಂಡರಾದ ಡಾ. ಚಿನ್ನಪ್ಪ. ವೈ. ಚಿಕ್ಕಹಾಗಡೆ, ಗಣೇಶ್‌ಗೌಡ, ಬಿದರಗುಪ್ಪೆ ರಾಜಪ್ಪ, ಧನರಾಜ್‌, ಹರೀಶ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT