ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆನ್ಸಾರ್‌ ಮಂಡಳಿ ವಿರುದ್ಧ ಕೀರ್ತಿ ಕಿಡಿ

Last Updated 19 ಜುಲೈ 2017, 19:30 IST
ಅಕ್ಷರ ಗಾತ್ರ

ಸೆನ್ಸಾರ್‌ ಮಂಡಳಿ ನಿರ್ಧಾರಗಳ ಬಗ್ಗೆ ಇತ್ತೀಚೆಗೆ ಬಾಲಿವುಡ್‌ನಲ್ಲಿ ಅಸಹನೆ ಹೊಗೆಯಾಡುತ್ತಲೇ ಇದೆ. ಅನೇಕ ವಿವಾದಗಳೂ ಸೃಷ್ಟಿಯಾಗಿವೆ. ಈಗ ನಟಿ ಕೀರ್ತಿ ಕುಲ್ಹಾರಿ ಸರದಿ.

ತನ್ನ ಮುಂದಿನ ಚಿತ್ರ ’ಇಂದು ಸರ್ಕಾರ್‌’ ಸಿನಿಮಾದಲ್ಲಿ 12 ದೃಶ್ಯಗಳಿಗೆ ಕತ್ತರಿ ಪ್ರಯೋಗ ಮಾಡುವಂತೆ ಸೂಚಿಸಿರುವ ಕೇಂದ್ರ ಸೆನ್ಸಾರ್ ಮಂಡಳಿ ವಿರುದ್ಧ ನಟಿ ಕೀರ್ತಿ ಕುಲ್ಹರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 'ಸೆನ್ಸಾರ್‌ ಮಂಡಳಿ ಇನ್ನೂ ಬೆಳೆಯಬೇಕು. ವೀಕ್ಷಕರಿಗೆ ಏನು ಬೇಕು ಎಂದು ನಿರ್ಧರಿಸುವ ಹಕ್ಕನ್ನು ಅವರೇ ನಿರ್ಧರಿಸುತ್ತಾರೆ’ ಎಂದು ಗುಡುಗಿದ್ದಾರೆ.

’ಸೆನ್ಸಾರ್‌ ಮಂಡಳಿಯಲ್ಲಿ ಕೆಲ ಬದಲಾವಣೆಗಳು ಅಗತ್ಯ. ನನಗೆ ಇದರ ಬಗ್ಗೆ ಸರಿಯಾಗಿ ಗೊತ್ತಿಲ್ಲ. ಆದರೆ ಪ್ರತಿ ಸಿನಿಮಾವನ್ನು ಮಂಡಳಿ ಸದಸ್ಯರು ಸಂದರ್ಭಕ್ಕೆ ತಕ್ಕಂತೆ ವೀಕ್ಷಿಸಿ, ಪ್ರಮಾಣಪತ್ರ ನೀಡಬೇಕು. ವೀಕ್ಷಕರೇ ಅವರ ಅಭಿಪ್ರಾಯಗಳನ್ನು ಹೇಳಲಿ’ ಎಂದು ಹೇಳಿದ್ದಾರೆ.

ಮಧುರ್‌ ಭಂಡಾರ್ಕರ್‌ ನಿರ್ದೇಶನದ 'ಇಂದು ಸರ್ಕಾರ್‌' ಚಿತ್ರವನ್ನು ಸೆನ್ಸಾರ್ ಮಂಡಳಿ ವೀಕ್ಷಿಸಿ, ಚಿತ್ರದ ಕೆಲ ಸಂಭಾಷಣೆ ಹಾಗೂ ಪದಗಳನ್ನು ಕೈಬಿಡುವಂತೆ ಸೂಚಿಸಿತ್ತು. ಈ ಚಿತ್ರದಲ್ಲಿ ನೀಲ್‌ ನಿತಿನ್‌ ಮುಖೇಶ್‌, ಅನುಪಮ್‌ ಖೇರ್‌ ಅವರು ನಟಿಸಿದ್ದು, ಚಿತ್ರ ಜುಲೈ 28ರಂದು ಬಿಡುಗಡೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT