ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಮಿ ಮೇಲೆ ಟೀಕಾಸ್ತ್ರ

ಪತ್ನಿ ಹಿಜಾಬ್ ಧರಿಸದಿವುದಕ್ಕೆ ಖಂಡನೆ
Last Updated 19 ಜುಲೈ 2017, 19:30 IST
ಅಕ್ಷರ ಗಾತ್ರ

ಕೋಲ್ಕತ್ತ: ಭಾರತ ಕ್ರಿಕೆಟ್ ತಂಡದ ಮಧ್ಯಮವೇಗಿ ಮೊಹಮ್ಮದ್ ಶಮಿ ಅವರು ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.

ಶಮಿ ಅವರ ಪತ್ನಿ ಹಸೀನಾ ಜಹಾನ್ ಅವರು  ತಮ್ಮ ಮಗಳ ಜನ್ಮದಿನದ ಕಾರ್ಯಕ್ರಮದಲ್ಲಿ ಹಿಜಾಬ್ (ತಲೆಗವಸು) ಧರಿಸಿರಲಿಲ್ಲ ಎನ್ನುವ ವಿಷಯವನ್ನು ಕೆಲವರು ಕಟುವಾಗಿ ಟೀಕಿಸಿದ್ದಾರೆ. ಅದಕ್ಕೆ ಶಮಿಯ ಕೆಲವು ಅಭಿಮಾನಿಗಳು ಪ್ರತ್ಯುತ್ತರ ನೀಡಿದ್ದಾರೆ.

‘ನಿಮ್ಮ ಪತ್ನಿ  ಅವರು ಹಿಜಾಬ್ ಧರಿಸದೇ ಪಾಪ ಮಾಡಿದ್ದಾರೆ. ಇದನ್ನು ಸಣ್ಣ ಲೋಪ ಎಂದು ತಿಳಿಯಬೇಡಿ. ಆದರೆ ಧರ್ಮವನ್ನು ಪಾಲಿಸದೇ ಇರುವುದು ದೊಡ್ಡ ತಪ್ಪು. ಇದಕ್ಕಾಗಿ ನರಕಕ್ಕೆ ಹೋಗುತ್ತೀರಿ’  ಎಂದು ಕುಂಡಂಕುಳಮ್‌ನ ಶಾರೂನ್ ಕೆ.ಎಂ. ಅವರು ಟ್ವೀಟ್ ಮಾಡಿದ್ದಾರೆ.

‘ಈ ರೀತಿ ಮಾಡುವ ಮೂಲಕ ನೀವು ಬಲಪಂಥೀಯರನ್ನು ಓಲೈಸಲು ಯತ್ನಿಸುತ್ತಿದ್ದೀರಾ?’ ಎಂದು ಬೀಜಿಂಗ್‌ನ ಸೈಯದ್ ಅಕ್ತರ್ ಎಂಬುವವರು ಕಿಡಿ ಕಾರಿದ್ದಾರೆ.

‘ನೀವು ಮುಸ್ಲಿಂ ವ್ಯಕ್ತಿಯೇ. ನಿಮಗೆ ನಾಚಿಕೆಯಾಗಬೇಕು. ಇಸ್ಲಾಂ ಧರ್ಮದಲ್ಲಿ ಜನ್ಮದಿನ ಆಚರಿಸುವ ಪದ್ದತಿಯೇ ಇಲ್ಲ’ ಎಂದು ಪಟ್ನಾದ ಮೊಹಮ್ಮದ್ ತಾಹೀರ್ ಎಂಬುವವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ತಿರುಗೇಟು ನೀಡಿರುವ ಅಭಿಮಾನಿ, ಬೆಂಗಳೂರಿನ ಭಾಗ್ಯತೇಜ್ ಅವರು, ‘ನಿಮ್ಮೆಲ್ಲರ ಮನೋಭಾವ ಬದಲಾಗುವುದು ಯಾವಾಗ’ ಎಂದು ಪ್ರಶ್ನಿಸಿದ್ದಾರೆ.

ಜುಲೈ 22ರಂದು ಶಮಿ ಮೇಲೆ ಹಲ್ಲೆ ಮಾಡಿದ್ದ ಮೂವರನ್ನು ಪೊಲೀಸರು ಎರಡು ದಿನಗಳ ಹಿಂದಷ್ಟೆ ಬಂಧಿಸಿದ್ದರು. ಮಂಗಳವಾರ ರಾತ್ರಿ ಶಮಿ ಅವರು ತಮ್ಮ ಮಗಳ ಜನ್ಮದಿನದಲ್ಲಿ  ತಮ್ಮ ಪತ್ನಿ ಹಾಗೂ ಕುಟುಂಬದ ಸದಸ್ಯರೊಂದಿಗೆ ಇದ್ದ ಚಿತ್ರಗಳನ್ನು ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಹಾಕಿದ್ದರು.

ಶಮಿ ಮನೆ ಇರುವ ನಗರದಲ್ಲಿ ಪೊಲೀಸರು ಬಿಗಿ ಭದ್ರತೆ ಏರ್ಪಡಿಸಿದ್ದಾರೆ. ಡಿಸೆಂಬರ್‌ನಲ್ಲಿ ಶಮಿ ಪತ್ನಿ ಉಡುಗೆಯ ಬಗ್ಗೆಯೂ ಕೆಲವರು ಬಹಳಷ್ಟು ಟೀಕೆ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT