ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೂಡೊ: ಭಾರತಕ್ಕೆ ಒಂದು ಚಿನ್ನ

Last Updated 19 ಜುಲೈ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಜೂನಿಯರ್‌ ತಂಡ ಕಾಮನ್‌ವೆಲ್ತ್ ಯೂತ್ ಕ್ರೀಡಾಕೂಟದ ಜೂಡೊ ವಿಭಾಗದಲ್ಲಿ ಒಂದು ಚಿನ್ನ ಹಾಗೂ ಮೂರು ಕಂಚಿನ ಪದಕಗಳನ್ನು ಗೆದ್ದುಕೊಂಡಿದೆ.

ಹರಿಯಾಣದ ಸೋನಿ 73 ಕೆ.ಜಿ ವಿಭಾಗದಲ್ಲಿ ಚಿನ್ನಕ್ಕೆ ಕೊರಳೊಡ್ಡಿದರು. ಫೈನಲ್‌ನಲ್ಲಿ ಸೋನಿ ಆಸ್ಟ್ರೇಲಿಯಾದ ನಿಕೊಲಿಕ್ ವಿರುದ್ಧ ಜಯದಾಖಲಿಸಿದರು.

60ಕೆ.ಜಿ ವಿಭಾಗದಲ್ಲಿ ಆಶಿಶ್‌ ಕಂಚು ಜಯಸಿದರು. ಕಂಚಿನ ಪದಕಕ್ಕಾಗಿ ನಡೆದ ಪ್ಲೇ ಆಫ್‌ ಪಂದ್ಯದಲ್ಲಿ ಆಶಿಶ್‌ ಇಂಗ್ಲೆಂಡ್‌ನ ಜೈನ್ ಪ್ರೊಸರ್ ಮೇಲೆ ಗೆದ್ದರು. ಮಧ್ಯಪ್ರದೇಶದ ಅಂತಿಮ್ ಯಾದವ್‌ 48ಕೆ.ಜಿ ವಿಭಾಗದಲ್ಲಿ ಕಂಚು ಜಯಿಸಿದರು. ಈ ಆಟಗಾರ ರುಸೆಲ್‌ ಜಾಸ್ಮಿನ್ ಮೇಲೆ ಜಯದಾಖಲಿಸುವ ಮೂಲಕ ಮೂರನೇ ಸ್ಥಾನ ಗಳಿಸಿದರು.

ಮಣಿಪುರದ ರೆಬಿನಾ ದೇವಿ ಚಾನಮ್ 57ಕೆ.ಜಿ ವಿಭಾಗದಲ್ಲಿ ಕಂಚು ಗೆದ್ದರು. ಆಸ್ಟ್ರೇಲಿಯಾದ ಸಸ್ಕಿಯಾ ಮೇಲೆ ಅವರು ಗೆಲುವು ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT