ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಮಿ ನಟಿ ಬಿದಿಶಾ ಸಾವು: ಪತಿ ಬಂಧನ

Last Updated 19 ಜುಲೈ 2017, 19:30 IST
ಅಕ್ಷರ ಗಾತ್ರ

ಗುರುಗ್ರಾಮ: ಅಸ್ಸಾಮಿ ನಟಿ ಹಾಗೂ ಗಾಯಕಿ ಬಿದಿಶಾ ಬೆಜ್ಬರುವಾ (30) ಆತ್ಮಹತ್ಯೆ ಪ್ರಕರಣದಲ್ಲಿ ಆಕೆಯ ಪತಿ ನಿಶಿತ್‌ ಝಾ ಅವರನ್ನು ಗುರುಗ್ರಾಮ ಪೊಲೀಸರು ಬಂಧಿಸಿದ್ದಾರೆ. ಝಾ ಅವರನ್ನು ಮಂಗಳವಾರ ರಾತ್ರಿ  ಸೂರತ್‌ನಲ್ಲಿ ಬಂಧಿಸಲಾಗಿದೆ.

ಬಿದಿಶಾ ತಂದೆ ನೀಡಿದ ದೂರಿನ ಆಧಾರದ ಮೇಲೆ ಝಾ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಬಿಡುಗಡೆಯಾದ ಜಗ್ಗಾ ಜಾಸೂಸ್‌ ಚಿತ್ರದಲ್ಲಿ ಬಿದಿಶಾ ಅಭಿನಯಿಸಿದ್ದರು.

‘ಸುಶಾಂತ್‌ ಲೋಕ್‌ನಲ್ಲಿ ಈಚೆಗಷ್ಟೆ ಬಾಡಿಗೆಗೆ ಪಡೆದಿದ್ದ ಮನೆಯಲ್ಲಿ ಸೋಮವಾರ ಸಂಜೆ ಫ್ಯಾನ್‌ಗೆ ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿ ಅವರ ದೇಹ ಪತ್ತೆಯಾಗಿದೆ’ ಎಂದು ಉಪ ಪೊಲೀಸ್‌ ಕಮಿಷನರ್‌ (ಪೂರ್ವ) ದೀಪಕ್‌ ಸಹರನ್‌ ತಿಳಿಸಿದ್ದಾರೆ.

‘ಬಿದಿಶಾ ಪ್ರೀತಿಸಿ ವಿವಾಹವಾಗಿದ್ದರೂ ಸಹ ಪತಿಯೊಂದಿಗೆ ಜಗಳವಾಗುತ್ತಿತ್ತು ಎಂದು ಆಕೆಯ ತಂದೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸ್ಥಳದಲ್ಲಿ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ’ ಎಂದು ಸಹರನ್‌ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT