ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದ 40 ಮೆಟ್ರೊ ನಿಲ್ದಾಣದಲ್ಲಿನ ಹಿಂದಿ ಫಲಕಗಳಿಗೆ ಕಪ್ಪು ಮಸಿ ಬಳಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು

Last Updated 20 ಜುಲೈ 2017, 7:06 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಬಹುತೇಕ ಎಲ್ಲ ಮೆಟ್ರೊ ನಿಲ್ದಾಣಗಳಲ್ಲಿ ಹಿಂದಿ ಫಲಕಗಳಿಗೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಗುರುವಾರ ಮಸಿ ಬಳಿದಿದ್ದಾರೆ.

ಮೆಟ್ರೊದಲ್ಲಿ ಹಿಂದಿ ಭಾಷೆ ಬಳಕೆ ಕುರಿತು ಘೋಷಣೆ ಕೂಗುತ್ತಿದ್ದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮೆಟ್ರೊ ನಿಲ್ದಾಣದಲ್ಲಿನ ಹಿಂದಿ ಫಲಕಗಳಿಗೆ ಕಪ್ಪು ಮಸಿ ಬಳಿದು ಪ್ರತಿಭಟಿಸಿದ್ದಾರೆ.

ಮೈಸೂರು ರಸ್ತೆ, ರಾಜಾಜಿನಗರ, ಪೀಣ್ಯಾ, ಎಂಜಿ ರಸ್ತೆ, ಯಶವಂತಪುರ, ಜಯನಗರ, ಚಿಕ್ಕಪೇಟೆ ಸೇರಿದಂತೆ 40 ಮೆಟ್ರೊ ನಿಲ್ದಾಣಗಳಲ್ಲಿ ಹಿಂದಿ ಫಲಕಗಳಿಗೆ ಮಸಿ ಬಳಿಯಲಾಗಿದೆ.

ಕಾರ್ಯಕರ್ತರ ದಿಢೀರ್‌ ದಾಳಿಯಿಂದಾಗಿ ಪ್ರಯಾಣಿಕರು ಕೆಲ ಕಾಲ ಗೊಂದಲಕ್ಕೀಡಾದರು. ಪ್ರತಿಭಟನಾ ನಿರತ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರನ್ನು ಪೊಲೀಸರು ತಡೆದಿರುವುದಾಗಿ ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT