ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳಗೇರಿ: ಹಿಂಗಾರು ಬೆಳೆ ಪರಿಶೀಲನೆ

Last Updated 20 ಜುಲೈ 2017, 7:33 IST
ಅಕ್ಷರ ಗಾತ್ರ

ಹನುಮಸಾಗರ: ಕಂದಾಯ ಇಲಾಖೆಯಿಂದ ಹಿಂಗಾರು ಬೆಳೆ ಪರಿಶೀಲನೆ ಹಾಗೂ ದಾಖಲೀಕರಣ ಪ್ರಕ್ರಿಯೆ ಬುಧವಾರ ಸಮೀಪದ ಚಳಗೇರಿಯಲ್ಲಿ ನಡೆಯಿತು.

ಚಳಗೇರಿ, ಕಲಾಲಬಂಡಿ, ಹುಲಸಗೇರಿ, ಜೂಲಕಟ್ಟಿ, ಹೊಸಹಳ್ಳಿ ಗ್ರಾಮಗಳಲ್ಲಿ ರೈತರು ಮುಂಗಾರು ಹಂಗಾಮಿನಲ್ಲಿ ಬೆಳೆದ ಬೆಳೆ, ಪ್ರದೇಶ, ಬೆಳೆಯ ಗುಣಮಟ್ಟ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಹಂತ ಹಂತವಾಗಿ ಎಲ್ಲ ಗ್ರಾಮಗಳಲ್ಲೂ ಈ ಕಾರ್ಯ ನಡೆಯಲಿದೆ ಎಂದು ಗ್ರಾಮ ಲೆಕ್ಕಾಧಿಕಾರಿ ಸಾನಿಯಾ ತಿಳಿಸಿದರು.

‘ಹಿಂಗಾರು ಬಿತ್ತನೆ ಮಾಡಲಾಗಿದ್ದ ಹೆಸರು, ಸೂರ್ಯಕಾಂತಿ, ಜೋಳ, ಸಜ್ಜೆ ಬೆಳೆಗಳು ತೇವಾಂಶ ಕೊರತೆಯಿಂದ ಹಾಳಾಗಿವೆ. ಮೂರು ತಿಂಗಳಲ್ಲಿ ಕೊಯ್ಲಿಗೆ ಬರಬೇಕಾಗಿದ್ದ ಹೆಸರು ಬೆಳೆ ನಂಜಾಣು ರೋಗದಿಂದ ಬತ್ತಿ ಹೋಗಿದೆ. ಹಿಂದಿನ ವರ್ಷದಲ್ಲಿ ಹಿಂಗಾರು, ಮುಂಗಾರು ಹಂಗಾಮಿಗೆ ಮಾಡಿಸಲಾಗಿದ್ದ ವಿಮೆ ಇಲ್ಲಿಯವರೆಗೂ ನಮಗೆ ದೊರೆತಿಲ್ಲ’ ಎಂದು ರೈತ ಮುಖಂಡರಾದ ಮಲ್ಲಿಕಾರ್ಜುನ ದೋಟಿಹಾಳ, ಹನುಮಂತಪ್ಪ ತಳವಾರ ಹೇಳಿದರು.

ಗ್ರಾಮ ಪಂಚಾಯಿತಿ ಸದಸ್ಯ ಶೇಖರಪ್ಪ ಹಾದಿಮನಿ, ರೈತರಾದ ಸಂಗಪ್ಪ ಕುಂಬಾರ, ಯಲ್ಲಪ್ಪ ಹನುಮಸಾಗರ, ಛತ್ರಪ್ಪ ತೋಪಲಕಟ್ಟಿ, ಶರಣಪ್ಪ ಹಳ್ಳದ, ಪರಶು
ರಾಮ ಹಿರೇಮನಿ, ಯಮನಪ್ಪ ವಾಲಿಕಾರ, ಶರಣಪ್ಪ ಹುರಿಕೊನಿ, ಬೋಜಪ್ಪ ಶಾಡಲಗೇರಿ, ಸಿದ್ದಪ್ಪ ಹಡಪದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT